newsfirstkannada.com

‘5 ಕೆಜಿ ಅಕ್ಕಿ ಮೋದಿಯದ್ದು, ಲೇಬಲ್​ ಮಾತ್ರ ಸಿದ್ದರಾಮಯ್ಯದು’- ಅನ್ನಭಾಗ್ಯದ ಬಗ್ಗೆ ಬಿಜೆಪಿ ವ್ಯಂಗ್ಯ

Share :

10-07-2023

    ಕಾಂಗ್ರೆಸ್​​, ಬಿಜೆಪಿ ಮಧ್ಯೆ ತಾರಕಕ್ಕೇರಿದ ಅಕ್ಕಿ ಕ್ರೆಡಿಟ್​ ಪಾಲಿಟಿಕ್ಸ್​​

    '5 ಕೆಜಿ ಅಕ್ಕಿ ಮೋದಿ ಸರ್ಕಾರದ್ದು, ಲೇಬಲ್ ಸಿದ್ದರಾಮಯ್ಯದು'

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​​ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಬೆಂಗಳೂರು: ‘ಹಸಿವು ಮುಕ್ತ ಭಾರತ’ ಪ್ರಧಾನಿ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಪ್ರತಿಯೊಬ್ಬ ಭಾರತೀಯ ಹಸಿವಿನಿಂದ ಪರಿತಪಿಸಬಾರದು ಎಂಬ ಕಾರಣಕ್ಕೆ ‘ಗರೀಬ್ ಕಲ್ಯಾಣ್’ ಯೋಜನೆಯಡಿ ಪ್ರತಿ ತಿಂಗಳು, ಪಡಿತರದಾರರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಆದರೆ, ಆ 5 ಕೆಜಿ ಅಕ್ಕಿಗೆ ತಮ್ಮ ಲೇಬಲ್ ಅನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಅಂಟಿಸಿಕೊಂಡು ಮೂಲ ಕೊಡುಗೆದಾರರ ಹೆಸರನ್ನು ಮರೆಮಾಚಿದೆ ಎಂದು ಕರ್ನಾಟಕ ಬಿಜೆಪಿ ಟ್ವೀಟ್​ ಮಾಡಿ ಕಾಲೆಳೆದಿದೆ.

ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿಯ ಆಶ್ವಾಸನೆ ನೀಡಿದ್ದ ಕರ್ನಾಟಕ ಕಾಂಗ್ರೆಸ್​​ ಈಗ ನಾಡಿನ ಜನತೆಗೆ ನಂಬಿಕೆ ದ್ರೋಹ ಎಸಗಿದೆ. 5 ಕೆಜಿ ಅಕ್ಕಿಯ ಕನಿಷ್ಠ ದರವನ್ನು ನೀಡುತ್ತಿರುವುದನ್ನೇ ಮಹಾನ್ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಕಾಂಗ್ರೆಸ್ ನಿಜಕ್ಕೂ ನುಡಿದಂತೆ ನಡೆದಿದ್ದರೇ, 10 ಕೆಜಿ ಅಕ್ಕಿಯ ಮಾರುಕಟ್ಟೆ ದರವನ್ನು ಜನತೆಗೆ ನೀಡಬೇಕಾಗಿತ್ತು ಎಂದು ಕಿಡಿಕಾರಿದೆ.

ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಯನ್ನು ತನ್ನದು ಎಂದು ಹೇಳಿಕೊಂಡು, ಉಳಿದ 5 ಕೆಜಿ ಅಕ್ಕಿಯ ಕನಿಷ್ಠ ದರವನ್ನು ಜನತೆಗೆ ನೀಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಜನಪರ ಕಾಳಜಿ ಇದ್ದರೆ, ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಯನ್ನು ಹೊರತುಪಡಿಸಿ, ಉಳಿದ 10 ಕೆಜಿ ಅಕ್ಕಿಯ ಮಾರುಕಟ್ಟೆ ದರವನ್ನು ಫಲಾನುಭವಿಗಳಿಗೆ ವರ್ಗಾಯಿಸಬೇಕು. ಆದರೆ, ಇದೆಲ್ಲವನ್ನೂ ಬಿಟ್ಟು ಕೇವಲ ತೋರಿಕೆಗೆ, ಫಲಾನುಭವಿಗಳಿಗೆ ಹಣ ವರ್ಗಾಯಿಸುತ್ತೇವೆ ಎಂಬುದನ್ನು ನಾವು ಖಂಡಿಸುತ್ತೇವೆ ಎಂದು ಬಿಜೆಪಿ ಮತ್ತೊಂದು ಟ್ವೀಟ್​ ಮಾಡಿದೆ.

ಕಾಂಗ್ರೆಸ್​ ಟ್ವೀಟ್​ನಲ್ಲಿ ಏನಿದೆ..?

ಹಸಿವಿನ ಬೇನೆ ನಾಡಿನ ಬಡಜನರನ್ನು ಬಾಧಿಸದಿರಲಿ ಎಂಬ ಸದುದ್ದೇಶದೊಂದಿಗೆ ನಾವು ಇಂದಿನಿಂದ ‘ಅನ್ನಭಾಗ್ಯ’ ಯೋಜನೆಯಡಿ ಬಡಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ ರೂ. 170 ನೀಡಲಿದ್ದೇವೆ. ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಿಗೆ ನೀಡುವ ಹಣವನ್ನು ಆಹಾರ ಪದಾರ್ಥಗಳ ಖರೀದಿಗೆ ಮಾತ್ರ ಬಳಕೆ ಮಾಡಬೇಕೆಂದು ನಾಡ ಬಾಂಧವರಲ್ಲಿ ಮನವಿ ಮಾಡುತ್ತೇನೆ. ಹಸಿವಿನ ಸಂಕಟ ಅನುಭವಿಸಿದವರಿಗೆ ಮಾತ್ರ ಅರಿವಿರಲು ಸಾಧ್ಯ. ಹಸಿವುಮುಕ್ತ ಕರ್ನಾಟಕ ನಿರ್ಮಾಣದ ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿತ್ತು. ಈಗ ಕಾಂಗ್ರೆಸ್​ ಟ್ವೀಟ್​ಗೆ ಬಿಜೆಪಿ ಕೌಂಟರ್​ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘5 ಕೆಜಿ ಅಕ್ಕಿ ಮೋದಿಯದ್ದು, ಲೇಬಲ್​ ಮಾತ್ರ ಸಿದ್ದರಾಮಯ್ಯದು’- ಅನ್ನಭಾಗ್ಯದ ಬಗ್ಗೆ ಬಿಜೆಪಿ ವ್ಯಂಗ್ಯ

https://newsfirstlive.com/wp-content/uploads/2023/07/Siddaramaiah_Rice.jpg

Load More