newsfirstkannada.com

BJP-JDS ಮೈತ್ರಿ ಆಟ ಈಗ ಶುರು.. ದೇವೇಗೌಡರ ಮನೆಗಿಂದು ಬಿ.ವೈ ವಿಜಯೇಂದ್ರ ಭೇಟಿ; ಏನಿದು ತಂತ್ರಗಾರಿಕೆ?

Share :

13-11-2023

    ದೇವೇಗೌಡರನ್ನ ಭೇಟಿಯಾಗಿ ವಿಜಯೇಂದ್ರ ರಚಿಸ್ತಾರಾ ಲೋಕ ಸೂತ್ರ?

    ಬಿಜೆಪಿ ಅಧ್ಯಕ್ಷರಾಗ್ತಿದ್ದಂತೆ ಪುತ್ರನಿಗೆ ಯಡಿಯೂರಪ್ಪ ಮಹತ್ವದ ಸಲಹೆ

    ಕಾಂಗ್ರೆಸ್​​ ಗ್ಯಾರಂಟಿ ಬಿರುಗಾಳಿಯನ್ನ ಹಿಡಿದಿಡೋದಕ್ಕೆ ತಂತ್ರಗಾರಿಕೆ ಶುರು

ರಾಜ್ಯಾಧ್ಯಕ್ಷ ಪಟ್ಟ ಹೆಗಲೇರ್ತಿದ್ದಂತೆ ವಿಜಯೇಂದ್ರ ಫುಲ್ ಌಕ್ಟೀವ್ ಆಗಿದ್ದಾರೆ. ಆರ್​ಎಸ್​ಎಸ್​ ನಾಯಕರನ್ನ, ಪಕ್ಷದ ಪ್ರಮುಖರನ್ನ ಭೇಟಿಯಾಗ್ತಿದ್ದಾರೆ. ಸಮನ್ವಯ ಸೂತ್ರದ ಸಂಘಟನೆ ಮಂತ್ರ ಜಪಿಸ್ತಿದ್ದಾರೆ. ಇದೀಗ ಮೈತ್ರಿಯನ್ನ ಮತ್ತಷ್ಟು ಗಟ್ಟಿಗೊಳಿಸೋದಕ್ಕೆ ಮೊದಲ ದೊಡ್ಡ ಹೆಜ್ಜೆ ಇಡ್ತಿದ್ದಾರೆ.

ಬಿ.ವೈ ವಿಜಯೇಂದ್ರ ಶಿಕಾರಿ ವೀರ ಅಂತಲೇ ಕರೆಸಿಕೊಳ್ತಿದ್ದ ಯಡಿಯೂರಪ್ಪರ ಪುತ್ರ ಇದೀಗ ರಾಜ್ಯ ಬಿಜೆಪಿಯ ಕ್ಯಾಪ್ಟನ್. ಕೇಸರಿ ಪಡೆಗೆ ಯುವ ನಾಯಕ​​​ ಸಿಕ್ಕಿದ್ದು, ಪಕ್ಷದ ಸಂಘಟನೆಗೆ ಬೂಸ್ಟ್​​ ನೀಡಿದೆ. ಭವಿಷ್ಯದಲ್ಲಿ ಬೆಟ್ಟದಷ್ಟು ಸವಾಲು ಹೊತ್ತಿರೋ ಬಿಎಸ್​ವೈ ಪುತ್ರ ಗೇಮ್ ಪ್ಲಾನ್ ಶುರು ಮಾಡಿದ್ದಾರೆ. ಅದರ ಮೊದಲ ಟಾರ್ಗೆಟ್ ಲೋಕಸಭಾ ಎಲೆಕ್ಷನ್.

‘ಲೋಕ’ ಸಮರ.. ಇದುವೇ ಬಿ.ವೈ ವಿಜಯೇಂದ್ರ ಮುಂದಿರೋ ಅತಿದೊಡ್ಡ ಸವಾಲು. ಕಾಂಗ್ರೆಸ್​​ ಗ್ಯಾರಂಟಿ ಬಿರುಗಾಳಿಯನ್ನ ಹಿಡಿದಿಡೋದಕ್ಕೆ ತಂತ್ರಗಾರಿಕೆ ಶುರು ಮಾಡಿಯಾಗಿದೆ. ತೆರೆಮರೆಯಲ್ಲಿ ಬೈ ಎಲೆಕ್ಷನ್​ಗಳನ್ನ ಗೆದ್ದು ತೋರಿಸಿ ಕಮಾಲ್ ಮಾಡಿದ್ದ ವಿಜಯ ಕೇಸರಿಗೆ ಈಗ ಲೋಕಸಭಾ ಕದನದ ದೊಡ್ಡ ಸವಾಲು ಎದುರಾಗಿದೆ. ಪಟ್ಟಕ್ಕೇರ್ತಿದ್ದಂತೆ ತತ್​ಕ್ಷಣ ಯುದ್ಧಕ್ಕೆ ಅಣಿಯಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ಭಾಗವಾಗಿ ಕಾರ್ಯತಂತ್ರ ಮಾಡೋದಕ್ಕೂ ಶುರು ಮಾಡಿಯಾಗಿದೆ. ಈಗಾಗಲೇ ಟಾರ್ಗೆಟ್​​ 25 ಫಿಕ್ಸ್​​ ಮಾಡಿರುವ ಕಮಲಾಧಿಪತಿ, ಸವಾಲಿನ ಸಾಗರ ಈಜಲು, ಮೈತ್ರಿ ಮಂತ್ರ ಪಠಿಸ್ತಿದ್ದಾರೆ.

ಲೋಕಸಭೆಗೆ ವಿಜಯೇಂದ್ರ ತಂತ್ರ.. ಮೈತ್ರಿ ಮಂತ್ರ
ದೇವೇಗೌಡರನ್ನ ಭೇಟಿಯಾಗಿ ರಚಿಸ್ತಾರಾ ಸೂತ್ರ?

ಲೋಕಸಭಾ ಚುನಾವಣಾ ದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿಯ ಹೆಜ್ಜೆ ಇಟ್ಟಿವೆ. ಇದೀಗ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರೋ ಬಿ.ವೈ ವಿಜಯೇಂದ್ರ ಕೂಡ ಮೈತ್ರಿಯನ್ನ ಮಹತ್ವವಾಗಿ ಪರಿಗಣಿಸಿದಂತಿದೆ. ಇದರ ಭಾಗವಾಗಿ ಇಂದು ದೇವೇಗೌಡರನ್ನ ವಿಜಯೇಂದ್ರ ಭೇಟಿಯಾಗಲಿದ್ದಾರೆ. ಬೆಳಗ್ಗೆ 11ಗಂಟೆಗೆ ದೇವೇಗೌಡರ ಪದ್ಮನಾಭನಗರದಲ್ಲಿರೋ ನಿವಾಸಕ್ಕೆ ಭೇಟಿ ಕೊಡಲಿರೋ ವಿಜಯೇಂದ್ರ ಮೈತ್ರಿ ಮಾತುಕತೆ ನಡೆಸಲಿದ್ದಾರೆ.

ದೇವೇಗೌಡರನ್ನ ವಿಜಯೇಂದ್ರ ಭೇಟಿಯಾಗ್ತಿರೋದು ಸಾಕಷ್ಟು ಮಹತ್ವವನ್ನೂ ಪಡೆದುಕೊಂಡಿದೆ. ಯಾಕಂದ್ರೆ, ಮೈತ್ರಿಯೇ ವಿಜಯೇಂದ್ರ ಮುಂದಿರೋ ದೊಡ್ಡ ಚಾಲೆಂಜ್. ಒಂದು ರಾಷ್ಟ್ರೀಯ ಪಕ್ಷ ಮತ್ತೊಂದು ಪ್ರಾದೇಶಿಕ ಪಕ್ಷ. ಅದೇ ರೀತಿ ಚಿಂತನೆಗಳು, ಕಾರ್ಯಕರ್ತರ ಅಜೆಂಡಾಗಳು ಭಿನ್ನವಾಗಿವೆ. ಮೈತ್ರಿಯಿಂದ ಗಲಾಟೆಗಳು, ವಾಕ್ಸಮರ, ಕಾರ್ಯಕರ್ತರ ಭಿನ್ನಮತ, ಅಭ್ಯರ್ಥಿ ಆಯ್ಕೆಯ ವೇಳೆ ಸಾಕಷ್ಟು ಸವಾಲು ಬರಬಹುದು. ಸದ್ಯ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಇದನ್ನ ಸರಿಯಾಗಿ ನಿಭಾಯಿಸಬೇಕಿದೆ. ಅಲ್ಲದೇ ಲಿಂಗಾಯತ ಪ್ಲಸ್ ಒಕ್ಕಲಿಗ ನಾಯಕತ್ವವನ್ನ ಒಟ್ಟಾಗಿ ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ದೇವೇಗೌಡರ ಜೊತೆಗಿನ ಇಂದಿನ ಮಾತುಕತೆ ಮಹತ್ವವನ್ನ ಪಡೆದುಕೊಂಡಿದೆ.

ಬಿಜೆಪಿ ಅಧ್ಯಕ್ಷರಾಗ್ತಿದ್ದಂತೆ ಪುತ್ರನಿಗೆ ಯಡಿಯೂರಪ್ಪ ಸಲಹೆ
ರಾಜ್ಯ ಪ್ರವಾಸ ಮಾಡುವಂತೆ ಬಿ.ವೈ ವಿಜಯೇಂದ್ರಗೆ ಸೂಚನೆ

ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಆಗ್ತಿದ್ದಂತೆ ವಿಜಯೇಂದ್ರಗೆ ಯಡಿಯೂರಪ್ಪ ಒಂದಷ್ಟು ಸಲಹೆ ಸೂಚನೆಗಳನ್ನ ಕೊಟ್ಟಿದ್ದಾರೆ. ಒಂದೇ ಒಂದು ನಿಮಿಷವು ಸುಮ್ಮನೆ ಕೂರದೇ ರಾಜ್ಯ ಪ್ರವಾಸ ಮಾಡಲು ಸೂಚಿಸಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಪ್ರವಾಸಕ್ಕೆ ಕಮಲಾಧಿಪತಿ ಸಜ್ಜಾಗಿದ್ದಾರೆ.

ಇನ್ನೆರಡು ದಿನದಲ್ಲಿ ರಾಜ್ಯಾಧ್ಯಕ್ಷನಾಗಿ‌ ಪದಗ್ರಹಣ ಮಾಡಲು ವಿಜಯೇಂದ್ರ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಪದಗ್ರಹಣ ನಡೆಯಲಿದ್ದು, ಕಮಲಪಡೆಯ ಘಟಾನುಘಟಿಗಳು ಭಾಗಿಯಾಗಲಿದ್ದಾರೆ.

ಪದಗ್ರಹಣಕ್ಕೆ ಸಜ್ಜಾಗ್ತಿರುವ ವಿಜಯೇಂದ್ರ, ಅಸಲಿ ಆಟ ಶುರು ಮಾಡಲು ಉತ್ಸುಕರಾಗಿದ್ದಾರೆ. ಮಠಗಳ ಯಾತ್ರೆಗೆ ಚಾಲನೆ ನೀಡಿರುವ ವಿಜಯೇಂದ್ರ, ಪಕ್ಷದ ಸಂಘಟನೆಯನ್ನೂ ಶುರು ಮಾಡಿಯಾಗಿದೆ. ಇದೀಗ ದೋಸ್ತಿ ದಾಳವನ್ನೂ ಉರುಳಿಸಲು ಅಖಾಡಕ್ಕಿಳಿತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BJP-JDS ಮೈತ್ರಿ ಆಟ ಈಗ ಶುರು.. ದೇವೇಗೌಡರ ಮನೆಗಿಂದು ಬಿ.ವೈ ವಿಜಯೇಂದ್ರ ಭೇಟಿ; ಏನಿದು ತಂತ್ರಗಾರಿಕೆ?

https://newsfirstlive.com/wp-content/uploads/2023/11/Hd-Devegowda-By-Vijayendra.jpg

Load More