newsfirstkannada.com

ತಂದೆ ಹುಟ್ಟೂರಿನಿಂದಲೇ ‘ವಿಜಯ’ಯಾತ್ರೆ ಆರಂಭ; ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಾರಥಿಯ ರಣತಂತ್ರ; ಏನದು?

Share :

20-11-2023

    ಮಂಡ್ಯ, ಮೈಸೂರಿಗೆ ಬಿಜೆಪಿ ಸಾರಥಿಯ ಎಂಟ್ರಿಯಿಂದ ಸಂಚಲನ

    ಬಿಜೆಪಿಗೆ ನವಚೈತನ್ಯ ತುಂಬಲು ಬಿ.ವೈ ವಿಜಯೇಂದ್ರ ಪ್ರವಾಸ

    ಯಡಿಯೂರಪ್ಪ ತವರೂರಿನಲ್ಲಿ ವಿಜಯೇಂದ್ರಗೆ ಅದ್ಧೂರಿ ಸ್ವಾಗತ!

ನೂತನ ರಾಜ್ಯಾಧ್ಯಕ್ಷರ ನೇಮಕ, ವಿಪಕ್ಷ ನಾಯಕನ ಆಯ್ಕೆ ಬಳಿಕ ಕಮಲ ಪಡೆಯಲ್ಲಿ ವಿಜಯ ಯಾತ್ರೆ ಆರಂಭವಾಗಿದೆ. ಹಳೇ ಮೈಸೂರು ಭಾಗದ ಕಮಲ ಕಲಿಗಳಿಗೆ ಹೊಸ ಹುಮ್ಮಸ್ಸಿನ ಕಿಚ್ಚು ಹಚ್ಚಲು ವಿಜಯೇಂದ್ರ ಫೀಲ್ಡಿಗಿಳಿದಿದ್ದಾರೆ. ಬಿಜೆಪಿ ಸಾರಥಿಯ ಆಗಮನದಿಂದ ಮಂಡ್ಯ, ಮೈಸೂರಿನಲ್ಲಿ ಬಿಜೆಪಿಗೆ ನವ ಚೈತನ್ಯ ಬಂದಿದ್ದು, ಒಗ್ಗಟ್ಟಿನ ಮಂತ್ರ ಮೊಳಗಿದೆ. ರಾಜ್ಯ ಬಿಜೆಪಿಯಲ್ಲಿ ವಿಜಯಯಾತ್ರೆ ಆರಂಭವಾಗಿದೆ.

ನೂತನ ರಾಜ್ಯಾಧ್ಯಕ್ಷರ ಆಯ್ಕೆ ಬಳಿಕ ಕೇಸರಿ ಪಡೆಯಲ್ಲಿ ಹೊಸ ಹುಮ್ಮಸ್ಸು ಕಳೆಗಟ್ಟಿದೆ. ಕಮಲ ಪಡೆಗೆ ವಿಜಯೇಂದ್ರ ಸಾರಥಿ ಅನ್ನೋ ಖ್ಯಾತಿ ಕೇಸರಿ ಕಲಿಗಳನ್ನ ಬಡಿದೆಬ್ಬಿಸಿದೆ. ರಾಜ್ಯದ ಉದ್ದಗಲಕ್ಕೂ ಕೇಸರಿ ಕಲರವವನ್ನ ಕಳೆಗಟ್ಟಿಸಿ ಕಾರ್ಯಕರ್ತರಿಗೆ ಹೊಸ ಉತ್ಸಾಹ ತುಂಬಲು ವಿಜಯೇಂದ್ರ ಇಂದು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಹಳೇ ಮೈಸೂರಿನ ಮೇಲೆ ವಿಜಯೇಂದ್ರ ದೃಷ್ಟಿ ನೆಟ್ಟಿದ್ದು, ದಳಕೋಟೆಯನ್ನ ಛಿದ್ರ ಮಾಡಿ ಕೇಸರಿ ಪ್ರಬಲ್ಯ ಸಾಧಿಸುವ ರಣತಂತ್ರ ಹಣೆದಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ‘ವಿಜಯ’ಯಾತ್ರೆ

ಎರಡು ದಿನಗಳ ಕಾಲ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರವಾಸ ಕೈಗೊಂಡಿದ್ದಾರೆ. ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ನಗರದ ಹಿಡಿತಕ್ಕೆ ತೆಗೆದುಕೊಳ್ಳಲು ವಿಜಯೇಂದ್ರ ಹೊಸ ತಂತ್ರ ಹಣೆದಿದ್ದಾರೆ. ಈ ಮೂಲಕ ಜೆಡಿಎಸ್​ ಭದ್ರ ಕೋಟೆಯಲ್ಲಿ ಬಿಜೆಪಿಗೆ ಭದ್ರ ನೆಲೆ ಕಟ್ಟಲು ವಿಜಯೇಂದ್ರ ಅಡಿ ಇಟ್ಟಿದ್ದಾರೆ.

ಸಕ್ಕರೆ ನಾಡಿನಿಂದ ಆರಂಭವಾಯ್ತು ‘ವಿಜಯ’ಯಾತ್ರೆ
ಕೆ.ಆರ್​ ಪೇಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಕಲರವ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಆಯ್ಕೆಯಾದ ಬಳಿಕ ಮೊಟ್ಟ ಮೊದಲ ಬಾರಿಗೆ ಬಿಜೆಪಿ ರಥವನ್ನ ಸಕ್ಕರೆ ನಾಡಿನತ್ತ ನಡೆಸಿದ್ದಾರೆ. ಅಪ್ಪನ ಹುಟ್ಟೂರಿಗೆ ಪಾದಾರ್ಪಣೆ ಮಾಡಿದ ಬಿ.ವೈ ವಿಜಯೇಂದ್ರ ರಾಜ್ಯ ಪ್ರವಾಸದ ಹಾದಿಗೆ ಮುನ್ನುಡಿ ಬರೆದ್ದರು. ಬೆಳಗ್ಗೆ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿದ ನೂತನ ಬಿಜೆಪಿ ರಾಜ್ಯಾಧ್ಯಕ್ಷರನ್ನ ಪಟಾಕಿ ಸಿಡಿಸಿ, ಹಾರ ತುರಾಯಿ ಹಾಕಿ ಕಾರ್ಯಕರ್ತರು ವಿಜಯೇಂದ್ರರನ್ನ ಆದರದಿಂದ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ವಿಜಯೇಂದ್ರ ಮುಂದಿನ ಲೋಕಸಭೆ ಚುನಾವಣೆಗೆ ಮೋದಿ ಕೈ ಬಲಪಡಿಸೋದೆ ನಮ್ಮ ಗುರಿ ಅಂತ ತಿಳಿಸಿದ್ದರು.

ತವರೂರಿನಲ್ಲಿ ವಿಜಯೇಂದ್ರಗೆ ಅದ್ಧೂರಿ ಸ್ವಾಗತ
ಬೂಕನಕೆರೆಯಲ್ಲಿ ಬಿಜೆಪಿ ಸಾರಥಿಯ ಸಂಚಲನ

ಮಂಡ್ಯದ ಕೆ.ಆರ್​ ಪೇಟೆಯಿಂದ ಬಿಎಸ್​ವೈ ಹುಟ್ಟೂರು ಬೂಕನಕೆರೆಗೆ ಆಗಮಿಸಿದ ಬಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅದ್ದೂರಿ ಸ್ವಾಗತ ಸಿಕ್ತು. ವಿಜಯೇಂದ್ರ ಪರ ಜೈಕಾರದ ಸುರಿಮಳೆ ಸುರಿಸಿದ ಕಾರ್ಯಕರ್ತರು ವಿಜಯೇಂದ್ರ ಆಗಮನಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಬೂಕನ ಕೆರೆಯ ಸಂಬಂಧಿಕರ ನಿವಾಸದಲ್ಲಿ ಬಾಳೆ ಎಲೆ ಊಟ ಸವಿದ ವಿಜಯೇಂದ್ರ ತಂದೆಯ ಹಳೆ ನೆನಪುಗಳನ್ನ ಮೆಲುಕುಹಾಕಿದ್ರು.

ಅರಮನೆ ನಗರಿಯಲ್ಲಿ ಬಿಜೆಪಿ ಸಾರಥಿಯ ರೌಂಡ್ಸ್
ಮಠ-ಮಂದಿರಗಳಿಗೆ ಭೇಟಿ ನೀಡಿದ ವಿಜಯೇಂದ್ರ

ಮಂಡ್ಯ ಬಳಿಕ ಮೈಸೂರಿನತ್ತ ಪ್ರಯಾಣ ಬೆಳೆಸಿದ ವಿಜಯೇಂದ್ರ ಮೈಸೂರು- ಬೆಂಗಳೂರು‌ ಹೆದ್ದಾರಿಯಲ್ಲಿರೋ ಏಟ್ರಿಯಾ ಹೋಟೆಲ್‌ಗೆ ಭೇಟಿ‌ ನೀಡಿದ್ದರು. ಈ ವೇಳೆ ಹೂವಿನ‌ ಮಳೆಗರೆದು ಭವ್ಯ ಸ್ವಾಗತ ಕೋರಿದ ಕಾರ್ಯಕರ್ತರು, ಬೃಹತ್ ಸೇಬಿನ ಹಾರ ಹಾಕಿದ್ದರು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟ ಬಿ.ವೈ ವಿಜಯೇಂದ್ರಗೆ ಸಂಸದ ಪ್ರತಾಪ ಸಿಂಹ ಸೇರಿ‌ ಹಾಗೂ ಹಲವು ನಾಯಕರು ಸಾಥ್​ ನೀಡಿದ್ದರು. ಬಳಿಕ ಮೈಸೂರಿನ ಲಕ್ಷ್ಮೀಪುರಂನಲ್ಲಿ ಇರುವ ಆರ್‌ಎಸ್‌ಎಸ್‌‌ನ ಕಚೇರಿ ಹಾಗೂ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ನಾಡ ಅದಿದೇವತೆ ಚಾಮುಂಡಿ ತಾಯಿಯ ದರ್ಶನ ಸಹ ಪಡೆದು, ಸುತ್ತೂರು ಮಠಕ್ಕೂ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಜೆಡಿಎಸ್​ ಭದ್ರಕೋಟೆಗೆ ದಾಂಗುಡಿ ಇಟ್ಟಿರೋ ವಿಜಯೇಂದ್ರ ಕಾರ್ಯಕರ್ತರ ಮನಸಲ್ಲಿ ಉತ್ಸಾಹದ ಕಿಚ್ಚು ಹಚ್ಚಿದ್ದರು. ದಳ ಕೋಟೆಯನ್ನ ಛಿದ್ರ ಮಾಡಿ ಕೇಸರಿ ಪ್ರಾಬಲ್ಯ ಸಾಧಿಸುವ ಹಂಬಲದಲ್ಲಿ ಹಳೇ ಮೈಸೂರಿನ ಕಮಲ ಪಡೆಯನ್ನ ಕಳೆಗಟ್ಟಿಸಿದ್ದರು. ನೂತನ ರಾಜ್ಯಾಧ್ಯಕ್ಷ ಮೊದಲ ಭೇಟಿ ರಾಜ್ಯ ಸಂಚಾರದ ಮೊದಲ ಹೆಜ್ಜೆಗೆ ಮುನ್ನುಡಿ ಬರೀತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂದೆ ಹುಟ್ಟೂರಿನಿಂದಲೇ ‘ವಿಜಯ’ಯಾತ್ರೆ ಆರಂಭ; ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಾರಥಿಯ ರಣತಂತ್ರ; ಏನದು?

https://newsfirstlive.com/wp-content/uploads/2023/11/vijayendra-3.jpg

Load More