ಅಕ್ಕಿಯೊಂದಿಗೆ ಹಣ ನೀಡುತ್ತೇವೆ ಎಂದರೂ ಬಿಜೆಪಿಯಿಂದ ವಿರೋಧ
ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು
ಸೋಲಿನ ಹತಾಶೆಯಿಂದ ಸಿದ್ದರಾಮಯ್ಯ ಮೇಲೆ ಮುಗಿಬಿದ್ರಾ ಬಿಜೆಪಿಗರು?
ಬೆಂಗಳೂರು: ಅನ್ನಭಾಗ್ಯ ಯೋಜನೆ ಜಾರಿಗೆ ಸರ್ಕಾರ ಪ್ಲಾನ್ ಬಿ ಮೊರೆ ಹೋಗಿದೆ. ಬಡವರ ಹೊಟ್ಟೆ ತುಂಬಿಸುವಷ್ಟು ಅಕ್ಕಿ ಸಿಗದೇ ಹಣ ಕೊಡಲು ಮುಂದಾಗಿದೆ. ಆದ್ರೀಗ ಅಕ್ಕಿ ಬದಲಿಗೆ ಕಾಂಚಾಣ ಕೊಡ್ತಿರೋ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ನಾಯಕರು ಅಪಸ್ವರ ಎತ್ತಿದ್ದಾರೆ. ಕಾಂಗ್ರೆಸ್ ಕೊಟ್ಟ ಮಾತನ್ನ ತಪ್ಪಿದೆ ಅಂತಾ ಕಿಡಿಕಾರುತ್ತಿದ್ದಾರೆ. ಇದು ಕೈ ನಾಯಕರ ಕಣ್ಣು ಕೆಂಪಾಗಿಸಿದೆ. ಕೇಸರಿ ಸೇನೆಯ ಮಾತಿನ ವಿರುದ್ಧ ರೈಸ್ ಸಮರ ಸಾರಿದ್ದಾರೆ.
ಅನ್ನಭಾಗ್ಯ ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಪ್ರತಿ ಬಡ ಕುಟುಂಬದ ಮನೆ ತಲುಪುವ ಒಂದು ಯೋಜನೆ. ಹಸಿದ ಜನರ ಹೊಟ್ಟೆ ತುಂಬಿಸ್ತಿರೋ ಅನ್ನರಾಮಯ್ಯ ಸ್ಕೀಂ. ಆದ್ರೀಗ ಈ ಅನ್ನಭಾಗ್ಯ ಯೋಜನೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಕಿತ್ತಾಟಕ್ಕೆ ಕಾರಣವಾಗಿದೆ. ಬಡವರ ಮನೆ ಊಟದ ವಿಚಾರಕ್ಕೆ ರೈಸ್ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ಅಕ್ಕಿಯುದ್ಧಕ್ಕೆ ಕಾರಣವಾಗಿದೆ.
5 ಕೆಜಿ ಅಕ್ಕಿ, 5 ಕೆಜಿಗೆ ‘ಧನಭಾಗ್ಯ’ ನೀಡ್ತಿರೋದಕ್ಕೆ ಬಿಜೆಪಿ ಕಿಡಿ
ಅನ್ನಭಾಗ್ಯ ಯೋಜನೆ ಜಾರಿಗೆ ಮುಂದಾಗಿದ್ದ ಸರ್ಕಾರಕ್ಕೆ ಅಕ್ಕಿ ಅಭಾವ ಎದುರಾಗಿತ್ತು. ಅಕ್ಕಿ ಕೊಡುತ್ತೇವೆ ಎಂದಿದ್ದ ಎಫ್‌ಸಿಐ ಕೊನೆ ಟೈಮಲ್ಲಿ ಕೈಕೊಟ್ಟಿತ್ತು. ನೆರೆ ರಾಜ್ಯಗಳ ನೆರವು ಕೇಳಿದ್ದ ಸರ್ಕಾರಕ್ಕೆ ಅಲ್ಲಿಯೂ ಅಕ್ಕಿ ಸಿಗದಾಗಿತ್ತು. ಕೊನೆ ಬಿಪಿಎಲ್ ಕಾರ್ಡುದಾರರ ಮನೆಗೆ ಜುಲೈ 1ಕ್ಕೆ ಹೇಗೆ ಅನ್ನಭಾಗ್ಯವನ್ನ ತಲುಪಿಸೋದು ಎಂಬ ಚಿಂತೆ ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಿತ್ತು. ಹೀಗಾಗಿ ಸರ್ಕಾರ 5 ಅಕ್ಕಿ, ಇನ್ನುಳಿದ 5 ಕೆಜಿ ಅಕ್ಕಿ ಬದಲಿಗೆ ಕುಟುಂಬದ ಪ್ರತಿ ಸದಸ್ಯನಿಗೆ ತಲಾ 34 ರೂಪಾಯಿಯಂತೆ 170 ರೂಪಾಯಿ ಕೊಡಲು ನಿರ್ಧರಿಸಿದೆ. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ಕಿ ಬದಲು ಹಣ ಕೊಡ್ತಿರೋದಕ್ಕೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಸರಿ ಕಲಿಗಳು ಕಿಡಿಕಾರುತ್ತಿದ್ದಾರೆ. ಅಲ್ಲದೇ ಹಣ ಕೊಡೋದೆ ಆದ್ರೆ 10 ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಹಣ ಕೊಡಿ ಅಂತಾ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ.
ಬಿಜೆಪಿ ನಾಯಕರಿಗೆ ಎಂ.ಬಿ ಪಾಟೀಲ್ ತಿರುಗೇಟು
ಅಕ್ಕಿ ಬದಲಿಗೆ ಹಣ ನೀಡ್ತಿರೋ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವನ್ನ ಬಿಜೆಪಿ ಟೀಕಿಸ್ತಿರೋದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಡ್ತಿದ್ದಾರೆ. ಈ ಬಗ್ಗೆ ಮಾತನಾಡಿರೋ ಸಚಿವ ಎಂ.ಬಿ ಪಾಟೀಲ್, ಕೇಂದ್ರ ಅಕ್ಕಿ ನೀಡ್ತಿಲ್ಲ. ಹೀಗಾಗಿ ಹಣ ಕೊಡ್ತಿದ್ದೇವೆ. ಬೊಮ್ಮಾಯಿ ಕೂಡ ಹಣ ಕೊಡಿ ಎಂದಿದ್ರು. ಆದ್ರೀಗ ಬಿಜೆಪಿ ನಾಯಕರು ಪುಂಗಿ ಊದುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಬಡವರ ಹಸಿವಿನಲ್ಲಿ ರಾಜಕೀಯ ಬೇಡ ಎಂದ ಪರಮೇಶ್ವರ್
ಇನ್ನೂ ಕೇಸರಿ ಪಾಳಯದ 10 ಕೆಜಿ ಅಕ್ಕಿ ವಾದಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಕೂಡಾ ಕೌಂಟರ್ ಕೊಟ್ಟಿದ್ದಾರೆ. ಬಡವರ ಹಸಿವಿನಲ್ಲಿ ರಾಜಕೀಯ ಮಾಡಬಾರದು ಎಂದು ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಇತ್ತ ವಿರೋಧ ಪಕ್ಷಗಳು ಟೀಕೆ ಮಾಡಬೇಕು. ಆದ್ರೆ ಹತಾಶರಾಗಿ ಬಾಯಿಗೆ ಬಂದಹಾಗೆ ಮಾತಾಡ್ತಿದ್ದಾರೆ ಅಂತಾ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಒಟ್ಟಾರೆ, ಸಿದ್ದರಾಮಯ್ಯ ಸರ್ಕಾರವೇನೋ ಅನ್ನಭಾಗ್ಯ ಜಾರಿಗೆ ಪ್ಲಾನ್ ಬಿ ಹಾದಿ ತುಳಿದಿದೆ. ಜನರಿಗೆ 5 ಕೆಜಿ ಅಕ್ಕಿ ಬದಲು ಹಣ ನೀಡ್ತಿದೆ. ಆದ್ರೆ ಇದೇ ವಿಚಾರ ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ಜಟಾಪಟಿಗೂ ಕಾರಣವಾಗಿದೆ. ಅದೇನೆ ಇರ್ಲಿ, ಸರ್ಕಾರ ಕೊಡ್ತಿರೋ ಹಣವಾದ್ರೂ ಬಡ ಜನರಿಗೆ ನ್ಯಾಯಯುತವಾಗಿ ತಲುಪುತ್ತಾ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ