newsfirstkannada.com

ಬಿಜೆಪಿಯಲ್ಲಿ ಮತ್ತೆ ಪುಟಿದೆದ್ದು ನಿಂತ ಬಿ.ಎಸ್​.ಯಡಿಯೂರಪ್ಪ.. ನಿನ್ನೆ ಬೆಂಗಳೂರಲ್ಲಿ ಮಾಡಿದ ಶಪಥ ಏನು ಗೊತ್ತಾ..?

Share :

26-06-2023

  ಯಡಿಯೂರಪ್ಪ ಕಂಬ್ಯಾಕ್.. ರಾಜ್ಯ ಬಿಜೆಪಿಗೆ ಹೊಸ ಕಳೆ ಸೂಚನೆ

  ಕಾಂಗ್ರೆಸ್​ ವಿರುದ್ಧ ಬೆಳಗಾವಿಯಲ್ಲಿ ಬೊಮ್ಮಾಯಿ ಪ್ರತಿಜ್ಞೆ

  ತಮ್ಮದೇ ನಾಯಕ ಯತ್ನಾಳ್​ ಮಾತಿಗೆ ಬೊಮ್ಮಾಯಿ ಕೌಂಟರ್..!

ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಕಾರ್ಯಕರ್ತರಿಗೆ ಉತ್ಸಾಹ ತುಂಬಲು ಬಿಜೆಪಿ ಹಿರಿಯ ನಾಯಕರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಲೋಕಸಭೆ ಚುನಾವಣೆಗೆ ಸಿದ್ಧತೆ ಶುರು ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಿಎಸ್​​ವೈ ರಣಕಹಳೆ ಮೊಳಗಿಸಿದ್ರೆ, ಬೆಳಗಾವಿಯಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಆಯ್ತು. ಪ್ರಧಾನಿ ಮೋದಿಯನ್ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದಾರೆ.

ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತೆ ಆ್ಯಕ್ಟಿವ್​ ಆಗಿದ್ದಾರೆ. ಮುಂಬರುವ ಎಲೆಕ್ಷನ್​​ನಲ್ಲಿ ಹೆಚ್ಚು ಸ್ಥಾನ ಗೆದ್ದು ಕಾಂಗ್ರೆಸ್​​ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಮತ್ತು ರಾಜ್ಯದಲ್ಲಿ ಮತ್ತೆ ಕೇಸರಿ ಪತಾಕೆ ಹಾರಿಸಲು ಬಿಜೆಪಿಗೆ ಬಿಎಸ್​ವೈ ಅನಿವಾರ್ಯ ಆಗಿದ್ದಾರೆ. ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಲು ಸಂಕಲ್ಪ ತೊಟ್ಟಿರುವ ಯಡಿಯೂರಪ್ಪ ಇವತ್ತು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ.

ಕಮಲ ಸೇನೆಗೆ ಲೋಕಸಭೆ ಕದನ ರಣೋತ್ಸಾಹ..!

ಬಿಎಸ್​ವೈ ಅವರ ಈ ರೀ ಎಂಟ್ರಿ ಎದುರಾಳಿಗಳ ಎದೆಯಲ್ಲಿ ಕಂಪನ ಸೃಷ್ಟಿಸಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗುಡುಗಿದ ಯಡಿಯೂರಪ್ಪ, ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಸರ್ಕಾರ ಕಿತ್ತೊಗೆಯೋಣ ಅಂತಾ ಕರೆ ಕೊಟ್ಟಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಗ್ಯಾರಂಟಿಗಳ ಜಾರಿಗೆ ಪ್ರತಿಭಟನೆ ಮಾಡೋಣ ಅಂತ ಪುನರುಚ್ಛರಿಸಿದ್ದಾರೆ. 14 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್​ನ ಗ್ಯಾರಂಟಿ ನಂಬಿ ಜನ ಮೋಸ ಹೋಗಿದ್ದಾರೆ. ಕಾಂಗ್ರೆಸ್ ಸುಳ್ಳಿನ ಗ್ಯಾರಂಟಿ ಪರಿಣಾಮದಿಂದಲೇ 100 ಸ್ಥಾನ ಗೆಲ್ಲೋಕ್ಕೆ ಸಾಧ್ಯವಾಗಲಿಲ್ಲ ಅಂತ ಬಿಎಸ್​​ವೈ ಸೋಲನ್ನ ವಿಮರ್ಶಿಸಿದರು. ಮೊದಲು ಉಚಿತ ಎಂದು ಈಗ ಕಂಡೀಷನ್​​​ ಖಚಿತ ಅಂತಿದ್ದಾರೆ. ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಅಂತ ಕರೆ ಕೊಟ್ಟರು.

ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಅಧಿವೇಶನ ಮುಕ್ತಾಯಗೊಳ್ಳುವವರೆಗೆ ಉಪವಾಸದ ಸತ್ಯಾಗ್ರಹವನ್ನು ಮಾಡದೇ ಪ್ರತಿಭಟನೆ ನಡೆಸೋಣ. ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಬೇಕು. ಇಲ್ಲವಾದರೆ ಅಧಿಕಾರದಿಂದ ಬಿಟ್ಟು ತೊಲಗಬೇಕು.

-ಬಿಎಸ್ ಯಡಿಯೂರಪ್ಪ

ಬಿಎಸ್​​ವೈ ಸಭೆಯಲ್ಲಿ ಕಾರ್ಯಕರ್ತರಿಂದ ಗದ್ದಲ

ವಿಧಾನಸಭೆಯಲ್ಲಿನ ಹಿನ್ನಡೆಯಿಂದ ರೋಸಿ ಹೋಗಿರುವ ಕಾರ್ಯಕರ್ತರು ಸಭೆಯಲ್ಲಿ ಸಿಡಿದೆದ್ದರು. ದಾಸರಹಳ್ಳಿ ಶಾಸಕ ಮುನಿರಾಜು ಭಾಷಣ ಮಾಡ್ತಿದ್ದ ವೇಳೆ ರೊಚ್ಚಿಗೆದ್ದ ಕಾರ್ಯಕರ್ತರು, ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶಗಳು ಸಿಗ್ತಿಲ್ಲ. ಕಾರ್ಯಕರ್ತರು ತಪ್ಪು ಮಾಡಿದಾಗ ಬುದ್ದಿ ಹೇಳ್ತೀರಾ, ಅದೇ ನಾಯಕರು ತಪ್ಪು ಮಾಡಿದಾಗ ಯಾಕೆ ಬುದ್ಧಿ ಹೇಳಲ್ಲ? ಹಿಂದೆ ಯಡಿಯೂರಪ್ಪರನ್ನು ಕೆಳಗಿಳಿಸಿದಾಗ ಯಾಕೆ ನಾಯಕರು ಮಾತನಾಡಲಿಲ್ಲ ಎಂದು ಗದ್ದಲ ಶುರು ಮಾಡಿದರು. ಬಳಿಕ ಬಿಎಸ್​ವೈ ಎದ್ದು ನಿಂತು ಕಾರ್ಯಕರ್ತರನ್ನ ಸಮಾಧಾನ ಮಾಡಿದರು..

3ನೇ ಬಾರಿ ಪ್ರಧಾನಿ ಗದ್ದುಗೆಗೆ ಏರಿಸಲು ಸಂಕಲ್ಪ..!

ಬೆಳಗಾವಿಯಲ್ಲೂ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಮುಗಿದು ಹೋದ ಕಹಿ ಘಟನೆಗಳನ್ನ ಮರೆತು ಮೋದಿಗಾಗಿ ಸಂಕಲ್ಪ ಮಂತ್ರ ಪಠಿಸಲಾಯ್ತು. ವಿಧಾನಸಭೆ ಚುನಾವಣೆ ಸೋಲಿಗೆ ನಾನೇ ಹೊಣೆ‌ ಎಂದ ಬೊಮ್ಮಾಯಿ, ಭಾರತದ ಭವಿಷ್ಯಕ್ಕಾಗಿ ಮೋದಿ ಅವರ ಸ್ವಚ್ಛ, ದಕ್ಷ ಆಡಳಿತ ಬೇಕಿದೆ ಅಂತ ಹೇಳಿದ್ದಾರೆ.

ಕಾರ್ಯಕರ್ತರು ಹಾಗೂ ಅಭಿಮಾನಿ ಬಂಧುಗಳು ಪಣ ತೊಡಬೇಕು. ಸಂಕಲ್ಪವನ್ನು ಮಾಡಬೇಕು. ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೇ ಮಾಡಬೇಕು. ಅದಕ್ಕಾಗಿ ಹಗಲು ರಾತ್ರಿ ಶ್ರಮ ಪಟ್ಟು, 28ಕ್ಕೆ 28 ಸೀಟ್​ ಅನ್ನು ಗೆದ್ದೆ ಗೆಲ್ಲುತ್ತೇವೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇದೇ ಸಭೆಯಲ್ಲಿ ಮಾಜಿ ಸಿಎಂಗಳ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಬಗ್ಗೆ ಯತ್ನಾಳ್​ ಆಡಿದ ಮಾತಿಗೆ ಬೊಮ್ಮಾಯಿ ಕೌಂಟರ್​ ಕೊಟ್ಟರು. ಮನೆಗೆ ಬರೋವವರನ್ನು ಬೇಡ ಎನ್ನಲಾಗಲ್ಲ. ಮನೆ ಹೋಗದೆ ಕೆಲವರು ರಾಜಿ ಮಾಡ್ಕೊಂಡಿದ್ದಾರೆ ಎಂದು ಶಾಸಕ ಯತ್ನಾಳಗೆ ಟಾಂಗ್ ಕೊಟ್ಟರು. ಒಟ್ಟಾರೆ ಲೋಕಸಭೆ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸಬೇಕಿರುವ ಪಕ್ಷದಲ್ಲಿ ನಾಯಕರ ಮಧ್ಯೆ ಮಾತಿನ ಬಾಣಗಳ ಪ್ರಯೋಗ ಮಾತ್ರ ನಿಲ್ಲುತ್ತಲೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಯಲ್ಲಿ ಮತ್ತೆ ಪುಟಿದೆದ್ದು ನಿಂತ ಬಿ.ಎಸ್​.ಯಡಿಯೂರಪ್ಪ.. ನಿನ್ನೆ ಬೆಂಗಳೂರಲ್ಲಿ ಮಾಡಿದ ಶಪಥ ಏನು ಗೊತ್ತಾ..?

https://newsfirstlive.com/wp-content/uploads/2023/06/BSY.jpg

Load More