ಎನ್‌ಸಿಪಿ, ಶಿವಸೇನೆ ಜತೆಗೆ ಬಿಜೆಪಿ ಮೈತ್ರಿ
ಬಿಜೆಪಿ ಮೈತ್ರಿ ಬಗ್ಗೆ ಮಾತಾಡಿದ ಫಡ್ನವೀಸ್
ಶಿವಸೇನೆ ಜತೆ ಭಾವನಾತ್ಮಕ ಮೈತ್ರಿ- ಡಿಸಿಎಂ
ಮುಂಬೈ: ಬಿಜೆಪಿ ಶಿವಸೇನೆಯೊಂದಿಗೆ ಭಾವನಾತ್ಮಕ ಮೈತ್ರಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಜತೆ ಪೊಲಿಟಿಕಲ್ ಅಲಿಯನ್ಸ್ ಮಾಡಿಕೊಂಡಿದೆ ಎಂದು ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮುಂದಿನ ವರ್ಷ ನಡೆಯಲಿರೋ ಲೋಕಸಭಾ ಚುನಾವಣೆ ಗೆಲ್ಲಲು ಮಹಾರಾಷ್ಟ್ರದ ಬಿಜೆಪಿ ಭಾರೀ ತಯಾರಿ ನಡೆಸಿಕೊಂಡಿದೆ. ಇಂದು ಇದರ ಭಾಗವಾಗಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ `ಮಹಾವಿಜಯ್ 2024′ ಕಾರ್ಯಾಗಾರದಲ್ಲಿ ದೇವೇಂದ್ರ ಫಡ್ನವೀಸ್ ಭಾಗಿಯಾಗಿದ್ದರು.
ವೇದಿಕೆ ಮೇಲೆ ಮಾತಾಡಿದ ಡಿಸಿಎಂ ದೇವೇಂದ್ರ ಫಡ್ನವೀಸ್, ಯಾರು ಬೇಕಾದರೂ ಬಿಜೆಪಿ ಸೇರಬಹುದು. ಆದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ತತ್ವಗಳನ್ನು ಹೊಂದಿರಬಾರದು. ಬಿಜೆಪಿ ಎಂದಿಗೂ ಕಾಂಗ್ರೆಸ್ ಚಿಂತನೆಯನ್ನು ಒಪ್ಪುವುದಿಲ್ಲ ಎಂದರು.
ಬಿಜೆಪಿ, ಶಿವಸೇನೆಯದ್ದು 25 ವರ್ಷಗಳ ಸ್ನೇಹ
ಬಿಜೆಪಿ, ಶಿವಸೇನೆಯದ್ದು 25 ವರ್ಷಗಳ ಸ್ನೇಹ. ಹೀಗಾಗಿ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಜತೆಗೆ ಭಾವನಾತ್ಮಕ ಮೈತ್ರಿ ಹೊಂದಿದ್ದೇವೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಜತೆ ರಾಜಕೀಯ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ