ಬ್ಯಾಂಕಾಕ್ನಲ್ಲಿ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ
ಶೋಕ ಸಾಗರದಲ್ಲಿ ನಟ ವಿಜಯ್ ರಾಘವೇಂದ್ರ ಕುಟುಂಬಸ್ಥರು
ಸ್ಪಂದನಾ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ಕೊಟ್ಟ ಬಿ.ಕೆ ಹರಿಪ್ರಸಾದ್
ಬೆಂಗಳೂರು: ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 37 ವರ್ಷದ ಸ್ಪಂದನಾ ಅವರಿಗೆ ಹೃದಯಾಘಾತ ಆಗಿರುವುದು ಎಲ್ಲರಿಗೂ ದೊಡ್ಡ ಆಘಾತವುಂಟು ಮಾಡಿದೆ. ಸದ್ಯ ನಟ ವಿಜಯ್ ರಾಘವೇಂದ್ರ ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ನಾಳೆ ಸಂಜೆ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುವುದು ಎಂದು ಸ್ಪಂದನಾ ತಂದೆ ಬಿ.ಕೆ ಶಿವರಾಂ ಸಹೋದರ ಬಿ.ಕೆ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಚಿಕ್ಕಪ್ಪ ಬಿ ಕೆ ಹರಿಪ್ರಸಾದ್ ಹೇಳಿದ್ದೇನು..?
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪಂದನಾ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್ ಅವರು, ಸ್ಪಂದನಾ ಅವರ ಪೋಸ್ಟ್ ಮಾರ್ಟಮ್ ಮುಗಿದಿದೆ. ನಾಳೆ ಸಾಯಂಕಾಲ ಹೊರಟು ರಾತ್ರಿ ಮೃತದೇಹ ಬೆಂಗಳೂರಿಗೆ ಬರುತ್ತದೆ. ಬುಧವಾರ ಸ್ಪಂದನಾ ಅಂತ್ಯಕ್ರಿಯೆ ಮಾಡುತ್ತೇವೆ. ವಿದೇಶಾಂಗ ಪ್ರಕ್ರಿಯೆ ಬೇಗ ಮುಗಿದರೆ ಸ್ಪೆಷಲ್ ಫ್ಲೈಟ್‌ನಲ್ಲಿ ಕರೆಸಬಹುದು. ಸ್ಪಂದನಾ ತಂದೆ ಎಲ್ಲರ ಜೊತೆ ಮಾತುಕತೆ ಮಾಡಿದ್ದೇವೆ. ನಮ್ಮ ಹಿರಿಯರಿಗೆ ಹೇಗೆ ಅಂತ್ಯಕ್ರಿಯೆ ಮಾಡಿದ್ದೇವೆ ಹಾಗೇ ಸ್ಪಂದನಾ ಅಂತ್ಯಕ್ರಿಯೆ ಮಾಡುತ್ತೇವೆ. ವಿಜಯರಾಘವೇಂದ್ರ ಅವರ ಜೊತೆ ಸ್ನೇಹಿತರು ಇದ್ದಾರೆ. ಅಂತಿಮ ದರ್ಶನ, ಅಂತ್ಯಕ್ರಿಯೆಗೆ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಅನ್ನೋದು ವಿಜಯರಾಘವೇಂದ್ರ ಅವರೇ ನಿರ್ಧಾರ ಮಾಡ್ತಾರೆ ಎಂದು ಹೇಳಿದ್ದಾರೆ.
ಸ್ಪಂದನಾ ಭಾರತೀಯ ಪ್ರಜೆಯಾಗಿದ್ದು ವಿದೇಶದಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ವಿದೇಶದಿಂದ ಮೃತದೇಹ ತರಲು ಹಲವು ಪ್ರಕ್ರಿಯೆಗಳನ್ನು ಪಾಲಿಸಬೇಕಿದೆ. ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಸ್ಪಂದನಾ ಮೃತದೇಹ ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ. ಸ್ಪಂದನಾ ಮೃತದೇಹ ಶಿಫ್ಟ್ ಮಾಡುವಾಗ ಏನೆಲ್ಲಾ ಪ್ರಕ್ರಿಯೆಗಳು ನಡೆಯುತ್ತೆ ಅನ್ನೋ ವಿವರ ಇಲ್ಲಿದೆ ನೋಡಿ.
ಮೃತದೇಹ ಶಿಫ್ಟ್ ಮಾಡೋ ಪ್ರಕ್ರಿಯೆ?
ಬ್ಯಾಂಕಾಕ್ನ ಆಸ್ಪತ್ರೆಯಿಂದ ವೈದ್ಯಕೀಯ ವರದಿ ಪಡೆಯಬೇಕು
ವೈದ್ಯಕೀಯ ವರದಿಯ ಜೊತೆ ಮರಣ ಪ್ರಮಾಣ ಪತ್ರ ಇರಬೇಕು
ಸಂಪೂರ್ಣವಾಗಿ ಪೊಲೀಸ್ ರಿಪೋರ್ಟ್ ಪಡೆದುಕೊಳ್ಳಬೇಕು
ವರದಿ ಬೇರೆ ಭಾಷೆಯಲ್ಲಿದ್ರೆ, ಇಂಗ್ಲೀಷ್ಗೆ ತರ್ಜುಮೆ ಮಾಡಿಸಬೇಕು
ಮೃತರ ಪಾಸ್ಪೋರ್ಟ್, ವೀಸಾ ಜೆರಾಕ್ಸ್ ಪ್ರತಿ ಮಾಡಿಸಬೇಕು
ಎಲ್ಲವನ್ನೂ ಥಾಯ್ಲೆಂಡ್ನಲ್ಲಿರುವ ಭಾರತೀಯ ಎಂಬೆಸಿಗೆ ನೀಡಬೇಕು
ನಂತರ ಮೃತದೇಹ ರವಾನೆಗೆ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು
ಸ್ಯಾಂಡಲ್ವುಡ್ ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸ್ಪಂದನಾಳ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.@HariprasadBK2 #newsfirstlive #NewsFirstKan #Vijayraghavendra #Spandana #Sandalwood #sadnews pic.twitter.com/geIBE9fJOS
— NewsFirst Kannada (@NewsFirstKan) August 7, 2023
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ