newsfirstkannada.com

ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತಾಡಿದ್ದ ಬಿ.ಕೆ ಹರಿಪ್ರಸಾದ್​​ಗೆ ಎಐಸಿಸಿಯಿಂದ ನೋಟಿಸ್​​​!

Share :

12-09-2023

    ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ!

    ತನ್ನನ್ನು ಮಂತ್ರಿ ಮಾಡದ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ

    ಭಾರೀ ಆಕ್ರೋಶ ಹೊರಹಾಕಿದ ಕಾಂಗ್ರೆಸ್​ ನಾಯಕ ಹರಿಪ್ರಸಾದ್​​!

ಬೆಂಗಳೂರು: ತನ್ನನ್ನು ಮಂತ್ರಿ ಮಾಡದ ಸಿಎಂ ಸಿದ್ದರಾಮಯ್ಯ ವಿರುದ್ಧ ಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಬಿ.ಕೆ ಹರಿಪ್ರಸಾದ್ ಆಕ್ರೋಶ ಹೊರ ಹಾಕಿದ್ದರು. ಇದರ ಬೆನ್ನಲ್ಲೇ ಬಿ.ಕೆ ಹರಿಪ್ರಸಾದ್​ಗೆ ಎಐಸಿಸಿ ಶಿಸ್ತು ಸಮಿತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಹತ್ತು ದಿನದೊಳಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಸದ್ದು ಮಾಡಿದ ಲಾಂಗು, ಮಚ್ಚು; ಆವಾಜ್​​ ಹಾಕಿದ್ದಕ್ಕೆ ಡೆಡ್ಲಿ ಅಟ್ಯಾಕ್​​

ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹಿಂದುಳಿದ ವರ್ಗಗಳ ಸಮಾವೇಶದ ವೇದಿಕೆ ಮೇಲೆಯೇ ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಈ ಸಂಬಂಧ ಹೈಕಮಾಂಡ್ ಬಳಿ ತೀವ್ರ ಅಸಮಾಧಾನ ಸಿಎಂ ಸಿದ್ದರಾಮಯ್ಯ ಹೊರ ಹಾಕಿದ್ದರು.

ಬಿ.ಕೆ ಹರಿಪ್ರಸಾದ್ ಹೇಳಿದ್ದೇನು..?

ನಮ್ಮ ಸಮಾವೇಶಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಬರಲಿದ್ದಾರೆ. ನಮ್ಮ ಸಮಾವೇಶವನ್ನು ಸರ್ಕಾರದ ‘ಉನ್ನತ ಅಧಿಕಾರಿಗಳು’ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನೇಮಕಾತಿ ಮತ್ತು ಪ್ರಮುಖ ಹುದ್ದೆಗಳಲ್ಲಿ ನಮ್ಮವರಿಗೆ ಸಾಕಷ್ಟು ಪ್ರಮಾಣದಲ್ಲಿ ಅವಕಾಶಗಳು ಒದಗಿಸಬೇಕು. ಬಡವರ ಬಂಧು ಬಂಗಾರಪ್ಪ ಎಂದು ಜಾತಿ ರಾಜಕೀಯ ಮಾಡಿಲ್ಲ. ಕಾಗೋಡು ತಿಮ್ಮಪ್ಪ ಸಮಾಜವಾದಿ ಆಗಿದ್ದರು. ಇಂದಿಗೂ ಅವರಿಗೆ ಒಂದು ಕಾರಿಲ್ಲ. ಸಮಾಜವಾದ ಎಂದರೆ ಎಲ್ಲರಿಗೂ ಸಮಾನ ಹಕ್ಕು ನೀಡುವುದು. ಯಾರೋ ಕೆಲವರು ವಾಚ್​​ ಹಾಕಿಕೊಂಡು, ಪಂಚೆ ಕಟ್ಕೊಂಡು, ಒಳಗೆ ಕಾಕಿ ಚಡ್ಡಿ ಹಾಕಿಕೊಂಡು ಸಮಾಜವಾದದ ಬಗ್ಗೆ ಮಾತಾಡುತ್ತಾರೆ. ಇದು ಕೇವಲ ತೋರ್ಪಡಿಕೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕಿರಿಕಾರಿದ್ದರು ಹರಿಪ್ರಸಾದ್​​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತಾಡಿದ್ದ ಬಿ.ಕೆ ಹರಿಪ್ರಸಾದ್​​ಗೆ ಎಐಸಿಸಿಯಿಂದ ನೋಟಿಸ್​​​!

https://newsfirstlive.com/wp-content/uploads/2023/07/Hari-Prasad-BK.jpg

Load More