‘ಕೈ’ ಪಾಳಯದಲ್ಲಿ ಸಂಚಲನ ಸೃಷ್ಟಿಸಿದ್ದ ಬಿಕೆಹೆಚ್ ಹೇಳಿಕೆ
ವಿಪಕ್ಷಗಳ ಬಾಯಿಗೆ ಆಹಾರವಾದ ಬಿಕೆಹೆಚ್ ವಾಗ್ಬಾಣ..!
ಹರಿಪ್ರಸಾದ್ ವಿರುದ್ಧ ಕಾಂಗ್ರೆಸ್ ನಾಯಕರ ಅಸಮಾಧಾನ
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ ನೀಡಿದ ಒಂದು ಹೇಳಿಕೆ ಸದ್ಯ ಹಸ್ತ ಕೋಟೆಯೊಳಗೆ ಹಲ್ಚಲ್ ಎಬ್ಬಿಸಿದೆ. ಸಿಎಂ ಸಿದ್ದರಾಮಯ್ಯ ಬಗ್ಗೆ ಆಡಿದ ಮಾತು ಕಾಂಗ್ರೆಸ್ನ ಇತರ ನಾಯಕರಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಇತ್ತ ವಿಪಕ್ಷಗಳ ಬಾಯಿಗೆ ಇದು ಆಹಾರವಾಗಿದ್ದು ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
ನನಗೆ ಸಿಎಂ ಮಾಡುವುದು ಗೊತ್ತಿದೆ. ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವುದು ಗೊತ್ತಿದೆ. ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿದ ಇದೊಂದು ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಹರಿಪ್ರಸಾದ್ ವಿರುದ್ಧ ಹಸ್ತ ಪಾಳಯದ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ರೂ ಈ ಬೇಗುದಿ ಇನ್ನೂ ಶಮನವಾಗಿಲ್ಲ.
ಬಿ.ಕೆ. ಹರಿಪ್ರಸಾದ್ ಹೇಳಿಕೆಯಿಂದ ಕಾಂಗ್ರೆಸ್ಗೆ ತೀವ್ರ ಮುಜುಗರವಾಗಿದೆ. ಹೀಗಾಗಿ ಅವರ ಹೇಳಿಕೆ ಬಗ್ಗೆ ಹೈಕಮಾಂಡ್ಗೆ ದೂರು ನೀಡಲು ರಾಜ್ಯ ನಾಯಕರು ಪ್ಲಾನ್ ಮಾಡಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.
ಯಾಕೆ ದೂರು?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 2 ತಿಂಗಳಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಸರ್ಕಾರ ಸಾಕಷ್ಟು ಶ್ರಮ ಹಾಕುತ್ತಿದೆ. ಸರ್ಕಾರ ಟೇಕ್ ಆಫ್ ಆಗೋ ಸಮಯದಲ್ಲಿ ಹರಿಪ್ರಸಾದ್ ನೀಡಿರುವ ಹೇಳಿಕೆಯಿಂದಾಗಿ ಭಾರೀ ಮುಜುಗರ ಉಂಟಾಗಿದೆ. ಕೇಂದ್ರ ಮಟ್ಟದಲ್ಲೂ ಕೆಲಸ ಮಾಡಿದವರಿಂದ ಈಗ ಪಕ್ಷಕ್ಕೆ ಹಿನ್ನಡೆ ಆಗ್ತಿದೆ. ಹಿರಿಯ ನಾಯಕರ ಹೇಳಿಕೆಯಿಂದ ಪಕ್ಷದಲ್ಲಿ ಬೇರೆ ವಾತಾವರಣ ನಿರ್ಮಾಣವಾಗುವಂತಾಗಿದೆ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲು ನಿರ್ಧರಿಸಲಾಗಿದೆ.
ಇನ್ನು ಬಿಕೆ ಹರಿಪ್ರಸಾದ್ ಹೇಳಿಕೆ ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ. ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಇಳಿಸಲು, ತಮ್ಮ ಆತ್ಮೀಯರಾದ ಬಿ. ಕೆ. ಹರಿಪ್ರಸಾದ್ ಭುಜದ ಮೇಲೆ ಬಂದೂಕು ಇಟ್ಟು ಡಿಕೆಶಿ ಗುಂಡು ಹಾರಿಸುತ್ತಿದ್ದಾರೆಯೇ? ಸಿಎಂ ಕುರ್ಚಿಗೆ ವ್ಯಾಲಿಡಿಟಿ ಕಡಿಮೆ ಇರುವ ಕಾರಣ, ಶ್ಯಾಡೋ ಸಿಎಂ ಯತೀಂದ್ರ ರಾಜ್ಯವನ್ನು ಮನಸ್ಸಿಗೆ ಬಂದಂತೆ ವರ್ಗಾವಣೆ ದಂಧೆಯ ಮೂಲಕ ಕೊಳ್ಳೆ ಹೊಡೆಯುತ್ತಿರಬಹುದು ಅಂತ ಬಿಜೆಪಿ ವ್ಯಂಗ್ಯವಾಡಿದೆ.
ಇನ್ನು ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹರಿಪ್ರಸಾದ್ ಕೂಡ ಶ್ರಮಿಸಿದ್ದಾರೆ ಅಂತ ಹೇಳಿದ್ದಾರೆ.
ಹರಿಪ್ರಸಾದ್ ಹೇಳಿಕೆಗೆ ಸಚಿವ ಆರ್.ಬಿ.ತಿಮ್ಮಾಪುರ ಅಸಮಾಧಾನ
ಸಿಎಂ ಸ್ಥಾನದ ವಿಚಾರವಾಗಿ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿ.ಕೆ.ಹರಿಪ್ರಸಾದ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಒಬ್ಬ ಎಂಎಲ್ಸಿ ಮುಖ್ಯಮಂತ್ರಿಗಳನ್ನ ಏರಿಸೋಕು ಆಗಲ್ಲ, ಇಳಿಸೋಕು ಆಗಲ್ಲ ಅಂತ ಹೇಳಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ನೀಡಿದ ಹೇಳಿಕೆಯಿಂದ ಕಾಂಗ್ರೆಸ್ನಲ್ಲಿ ಮತ್ತೆ ಸಿಎಂ ಸಮರ ಮುನ್ನೆಲೆಗೆ ಬಂದಿದೆ. ಮಾತ್ರವಲ್ಲದೇ ವಿಪಕ್ಷಗಳ ಬಾಯಿಗೆ ಆಹಾರವಾಗಿದೆ. ಈ ಬಗ್ಗೆ ರಾಜ್ಯ ಕೈ ನಾಯಕರು ದೂರು ನೀಡಿದ್ರೆ ಹೈಕಮಾಂಡ್ ಏನು ಕ್ರಮ ಕೈಗೊಳ್ಳುತ್ತೋ ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ