newsfirstkannada.com

ಹೈಕಮಾಂಡ್​​​ ಅಂಗಳ ತಲುಪಿದ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್​​ ಕಚ್ಚಾಟ; ಇಬ್ಬರ ಜಗಳಕ್ಕೆ ಕಾರಣವೇನು?

Share :

11-09-2023

  ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ!

  ಪದೇ ಪದೇ ವೈಯಕ್ತಿಕವಾಗಿ ಟೀಕೆ ಮಾಡ್ತಿರೋದಕ್ಕೆ ಸಿದ್ದು ಬೇಸರ!

  ಬಿ.ಕೆ.ಹರಿಪ್ರಸಾದ್ ಹೇಳಿಕೆ ಅನವಶ್ಯಕ ಎಂದ ಹೆಚ್​.ವಿಶ್ವನಾಥ್

ಗ್ಯಾರಂಟಿಗಳ ಹಳಿಗಳ ಮೇಲೆ ಒದ್ದಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ಭುಗಿಲೆದ್ದಿದೆ. ತಮ್ಮ ವಿರುದ್ಧ ಬೆಂಕಿಯುಗುಳುತ್ತಿರುವ ಬಿ.ಕೆ.ಹರಿಪ್ರಸಾದ್​​​ ಬಗ್ಗೆ ಸಿಎಂ ತೀವ್ರ ಬೇಸರ ವ್ಯಕ್ತಪಡಿಸಿದ್ದು ದೂರು ಹೈಕಮಾಂಡ್ ಅಂಗಳ ತಲುಪಿದೆ.  ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ವೇದಿಕೆ ಮೇಲೆಯೇ ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಸಚಿವ ಸ್ಥಾನ ಸಿಗದ ಸಿಟ್ಟು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಕ್​ ಪ್ರಹಾರವಾಗಿ ಬದಲಾಗಿತ್ತು. ಸಚಿವರ ಬಗ್ಗೆ ಶಾಸಕರ ಪತ್ರ ಸಮರ. ಸಿಎಂ ಸಿದ್ದರಾಮಯ್ಯ ವಿರುದ್ಧವೇ ಸ್ವಪಕ್ಷೀಯರ ಟೀಕೆ. ಕಾಂಗ್ರೆಸ್​ ಆಂತರಿಕ ಕಲಹ ಬೀದಿಗೆ ಬಂದಿದೆ.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ಅಧಿಕಾರ ಮುಳ್ಳಿನ ಹಾಸಿಗೆಯಂತಾಗಿದೆ. ನಿನ್ನೆ ಹರಿಪ್ರಸಾದ್ ಆಡಿದ್ದ ಮಾತುಗಳು ಸಿಎಂ ಸಿದ್ದರಾಮಯ್ಯಗೆ ಅತೀವ ಬೇಸರ ತರಿಸಿದೆ. ನಿನ್ನೆ ಈಡಿಗ ಸಮುದಾಯದ ಕಾರ್ಯಕ್ರಮದಲ್ಲಿ ಪಂಚೆ, ಒಳಗೆ ಖಾಕಿ ಚಡ್ಡಿ ಹಾಕೋರು ಸಮಾಜವಾದಿಗಳಲ್ಲ. ಅಂತ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದರು. ಟೀಕೆಗಳು ಮಿತಿ ಮೀರಿದ ಬೆನ್ನಲ್ಲೇ ಹರಿಪ್ರಸಾದ್​​ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್​ಗೆ ದೂರು ನೀಡಿದ್ದಾರೆ. ಬಹಿರಂಗ ಹೇಳಿಕೆ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡ್ತಿದ್ದಾರೆ. ಇದಕ್ಕೆಲ್ಲಾ ಬ್ರೇಕ್ ಹಾಕಬೇಕು ಅಂತ ಮನವಿ ಮಾಡಿದ್ದಾರೆ. ಬಹಿರಂಗವಾಗಿ ಹೇಳಿಕೆಗಳನ್ನ ನೀಡೋ ಮೂಲಕ ನಮ್ಮ ತೇಜೋವಧೆ ಮಾಡ್ತಿದ್ದಾರೆ ಅಂತ ಕೆ.ಸಿ.ವೇಣುಗೋಪಾಲ್, ಸುರ್ಜೇವಾಲಾಗೆ ಕರೆ ಮಾಡಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಬಹಿರಂಗವಾಗಿ ಟಾರ್ಗೆಟ್ ಮಾಡಿ ಮಾತಾಡ್ತಿರೋದು ಸರಿಯಲ್ಲ, ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಗಳಲ್ಲಿ ಮಾತನಾಡಲಿ, ಮಾಧ್ಯಮಗಳ ಮುಂದೆ ಹೀಗೆ ಹೇಳಿಕೆಗಳನ್ನ ನೀಡುವುದು ಸರಿಯಲ್ಲ, ಹಿರಿಯ ನಾಯಕರು ಅನಿಸಿಕೊಂಡವರೇ ಹೀಗೆ ಮಾತನಾಡಿದರೆ ಹೇಗೆ?, ಹೇಳಿಕೆಗಳನ್ನ ನೀಡದಂತೆ ಮೊದಲು ಸ್ಪಷ್ಟ ಸೂಚನೆಯನ್ನ ಕೊಡಬೇಕು, ಸೂಚನೆ ಕೊಡಿ ಅಂತ ಕೋಪದಿಂದಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ. ದೇವರಾಜ್ ಅರಸು ಕಾರಲ್ಲಿ ಕೂತವರೆಲ್ಲಾ ಅರಸು ಆಗಲ್ಲ ಹಾಗೂ ಜಾತಿ ರಾಜಕರಣದ ಬಗ್ಗೆ ಬಿ.ಕೆ.ಹರಿಪ್ರಸಾದ್ ಹೇಳಿಕೆ ಅನವಶ್ಯಕ ಅಂತ ಎಂಎಲ್​ಸಿ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

‘ಒಂದು ಜಾತಿ ಮೇಲೆ ಆರೋಪ ಮಾಡೋದ್ರೆ ಒಪ್ಪೋದಿಲ್ಲ’

ಇನ್ನು ಕಾಂಗ್ರೆಸ್​ ಆಂತರಿಕ ಕಚ್ಚಾಟಕ್ಕೆ ಬಿಜೆಪಿ ಲೇವಡಿ ಮಾಡಿದೆ. ಹರಿಪ್ರಸಾದ್ ಪದೇ ಪದೇ ಅಸಮಾಧಾನ ಹೊರ ಹಾಕುತ್ತಿರುವುದು ಸಿದ್ದರಾಮಯ್ಯ ಪಕ್ಷ ವಿರೋಧಿ ನಡವಳಿಕೆಯನ್ನು ಸೂಚಿಸುತ್ತದೆ. ಕಾಂಗ್ರೆಸ್​​ನಲ್ಲಿ ಭೂಕಂಪದ ಎಲ್ಲಾ ಮುನ್ಸೂಚನೆಗಳು ಕಾಣುತ್ತಿದೆ ಅಂತ ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಸ್ವಪಕ್ಷೀಯರ ಟೀಕೆಗಳ ಸಿಎಂ ಸಿದ್ದರಾಮಯ್ಯಗೆ ಬಿಸಿತುಪ್ಪವಾದಂತಾಗಿದೆ.. ಸದ್ಯ ಸಿದ್ದರಾಮಯ್ಯ ನೀಡಿರುವ ದೂರು ಹೈಕಮಾಂಡ್​ ಅಂಗಳದಲ್ಲಿದ್ದು ಹರಿಪ್ರಸಾದ್​ ಹೇಳಿಕೆಗಳಿಗೆ ಬ್ರೇಕ್ ಬೀಳುತ್ತಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈಕಮಾಂಡ್​​​ ಅಂಗಳ ತಲುಪಿದ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್​​ ಕಚ್ಚಾಟ; ಇಬ್ಬರ ಜಗಳಕ್ಕೆ ಕಾರಣವೇನು?

https://newsfirstlive.com/wp-content/uploads/2023/07/SIDDU-3-1.jpg

Load More