ಮತ್ತೆ ಟ್ರ್ಯಾಕ್ಗೆ ತರುವ ಜವಾಬ್ದಾರಿ ಸಂತೋಷ್ ಹೆಗಲಿಗೆ
224 ಕ್ಷೇತ್ರದ ಬಿಜೆಪಿ ನಾಯಕರಿಗೂ ಮೀಟಿಂಗ್ಗೆ ಆಹ್ವಾನ
10 ವಿಷಯಗಳ ಮೇಲೆ ಚರ್ಚೆ ನಡೆಸಲಿರುವ ಸಂತೋಷ್
ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಕಮಲಪಾಳಯವನ್ನು ಕಂಗಾಲಿಗಿಸಿದೆ. ಅತ್ತ ವಿಪಕ್ಷ ನಾಯಕನ ಆಯ್ಕೆಯೂ ಇಲ್ಲ. ಇತ್ತ ಲೋಕಸಭೆಗೆ ಸಿದ್ಧತೆಯೂ ಇಲ್ಲ. ಆಡಳಿತ ಪಕ್ಷದ ಗ್ಯಾರಂಟಿ ಸುಂಟರಗಾಳಿ ನಡುವೆ ಸಿಲುಕಿರೋ ಬಿಜೆಪಿ ದಿಕ್ಕುತಪ್ಪಿದ ಹಡಗಿನಂತಾಗಿದೆ. ಹೀಗೆ ಚದುರಂಗದಲ್ಲಿ ಚೆಲ್ಲಾಪಲ್ಲಿಯಾಗಿರೋ ಕೇಸರಿ ಕಾಯಿನ್ಸ್ಗಳನ್ನ ಒಂದೆಡೆ ಜೋಡಿಸಲು, ಸರಿಯಾದ ದಿಕ್ಕಿನತ್ತ ನಿಲ್ಲಿಸಲು ಅಖಾಡಕ್ಕೆ ಬಿ.ಎಲ್ ಸಂತೋಷ್ ಇಳೀತಿದ್ದಾರೆ.
ಸೋಲು.. ಬಹುದೊಡ್ಡ ಸೋಲು.. ಸುಮಾರು 3 ತಿಂಗಳ ಹಿಂದೆ ಬಿಜೆಪಿಗೆ ಕರುನಾಡು ಕೊಟ್ಟ ಪೆಟ್ಟಿನ ಗಾಯ ಇನ್ನೂ ಹಸಿ ಹಸಿಯಾಗೇ ಉಳಿದಿದೆ. ಆಡಳಿತ ಪಕ್ಷದ ನಿರೀಕ್ಷಿತ ಗ್ಯಾರಂಟಿ ಅಸ್ತ್ರಕ್ಕೆ ಕೇಸರಿ ಬ್ರಿಗೇಡ್ ಪ್ರತ್ಯಸ್ತ್ರವಿಲ್ಲದೇಬರಿದಾಗಿದೆ. ಈ ನಡುವೆ ವಿಪಕ್ಷ ನಾಯಕನ ಆಯ್ಕೆಯೂ ಆಗದಿರೋದು ಕಮಲ ಪಾಳಯದ ಪರಿಸ್ಥಿತಿ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ರಾಜ್ಯಾಧ್ಯಕ್ಷರ ಬದಲಾವಣೆಯ ದೊಡ್ಡ ಸದ್ದು ನಾಯಕರ ವೇಗಕ್ಕೆ ತಡೆ ಒಡ್ಡಿದೆ. ಇದೆಲ್ಲದರ ನಡುವೆ ಲೋಕಸಭಾ ಚುನಾವಣೆಗೂ ಸಿದ್ಧತೆ ಮಾಡಿಕೊಳ್ಳಬೇಕಾಗಿದ ಅನಿರ್ವಾಯತೆ ಹೈಕಮಾಂಡ್ ನಾಯಕರಿಗೆ ಎದುರಾಗಿದೆ.
ಈಗಾಗಲೇ ಆಪರೇಷನ್ ಆಟ ಶುರು ಮಾಡಿರೋ ಕಾಂಗ್ರೆಸ್ ಪಾಳಯ ಲೋಕಸಭಾ ಚದುರಂಗದಲ್ಲಿ ಗೇಮ್ ಪ್ಲಾನ್ ಜಾರಿಮಾಡ್ತಿದೆ. ಕಮಲಪಡೆ ಮಾತ್ರ ಮಂಕಾಗಿದೆ. ಯಾವೊಬ್ಬ ಸದಸ್ಯರು ಮನೆಯಿಂದ ಹೊರಬರುತ್ತಿಲ್ಲ. ಸಂಘಟನೆಯಲ್ಲಿ ಭಾಗಿಯಾಗುತ್ತಿಲ್ಲ. ಇದೆಲ್ಲವನ್ನೂ ಗಮನಿಸ್ತಿರೋ ಹೈಕಮಾಂಡ್, ಹಳಿ ತಪ್ಪಿದ ರೈಲನ್ನ ಮರಳಿ ಹಳಿಗೆ ತರೋ ಹೊಣೆ ಬಿ.ಎಲ್ ಸಂತೋಷ್ ಹೆಗಲಿಗೆ ಹೊರಿಸಿದೆ. ಅದರಂತೆ ಸಂತೋಷ್ ಮಹತ್ವದ ಸಭೆ ಕರೆದಿದ್ದಾರೆ.

ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಲೋಕಸಭೆ ಎಲೆಕ್ಷನ್ ಗೆಲ್ಲಲು ಸಂತೋಷ್ ನೇತೃತ್ವದಲ್ಲಿ ತಂತ್ರಗಾರಿಕೆ ಆರಂಭವಾಗಿದೆ. ಪ್ರತಿಯೊಂದು ಕ್ಷೇತ್ರ ನಾಯಕರನ್ನು ಹುರಿದುಂಬಿಸುವ ಸಲುವಾಗಿ ಮಹತ್ವದ ಸಭೆ ಕರೆಯಲಾಗಿದೆ. ಈ ವೇಳೆ ಬೂತ್ ಮಟ್ಟದಲ್ಲಿ ಮತದಾರರನ್ನು ಕ್ರೋಢೀಕರಿಸಲು ಸಂತೋಷ್ ಸೂತ್ರ ಹೆಣೆದು ಕೊಡಲಿದ್ದಾರೆ.
‘ಮತದಾರ’ ಮಂತ್ರ.. ಸಂತೋಷ್ ಸೂತ್ರ!
ಇಂದಿನ ಸಭೆಯಲ್ಲಿ ಕಮಲದೊಳಗಿನ ಕಿಚ್ಚು ಪ್ರತಿಧ್ವನಿಸಿದೆ. ಆಡಳಿತ ಪಕ್ಷ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದೆ. ಅದರೆ ಇಷ್ಟು ದಿನ ಕಳೆದರೂ ವಿಪಕ್ಷ ನಾಯಕನ ಆಯ್ಕೆ ಆಗದಿರೋದು ಬಿಜೆಪಿ ನಾಯಕರಲ್ಲೇ ಗೊಂದಲ ಉಂಟು ಮಾಡಿದೆ. ಹೊಂದಾಣಿಕೆ ಪಾಲಿಟಿಕ್ಸ್ ಕೆಲ ನಾಯಕರ ನಿದ್ದೆಗೆಡಿಸಿದ್ರೆ, ಇನ್ನೂ ಕೆಲ ಸೋತ ನಾಯಕರು ಹಾದಿ ಬೀದಿಯಲ್ಲಿ ಸ್ವಪಕ್ಷದ ನಾಯಕರ ವಿರುದ್ಧವೇ ಕೆಂಡಕಾರುತ್ತಿದ್ದಾರೆ. ಇನ್ನೊಂದಿಷ್ಟು ನಾಯಕರು ಬಿಜೆಪಿಯ ಹೋರಾಟಗಳಿಂದಲೇ ದೂರ ಉಳಿಯುತ್ತಿದ್ದಾರೆ. ಸೋಲಿಗೆ ಹೈಕಮಾಂಡ್ ನಾಯಕರ ಮೇಲೆ ದೂರುತ್ತಿರೋ ಘಟನೆಗಳು ನಡೀತಿವೆ. ಹೀಗೆ ಸಾಕಷ್ಟು ಕಮಲೊದಳಗೆ ತಳಮಳ ಸೃಷ್ಟಿಸಿರೋ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬರಲಿದೆ.
ಸಂತೋಷ್ ಸಭೆಯಲ್ಲಿ ಏನೆಲ್ಲಾ ಚರ್ಚೆ?
ಅಚ್ಚರಿ ಅಂದ್ರೆ ಈ ಸಭೆಗೆ ಮಾಜಿ ಸಿಎಂ ಯಡಿಯೂರಪ್ಪ ಗೈರಾಗಲಿದ್ದಾರೆ. ಶಿವಮೊಗ್ಗ ಪ್ರವಾಸ ಕೈಗೊಂಡ ಹಿನ್ನಲೆ ಇಂದಿನ ಸಭೆಯಿಂದ ದೂರ ಉಳಿಯಲಿದ್ದಾರೆ. ಆದ್ರೆ ಇದು ಬೇರೆಯದ್ದೇ ಚರ್ಚೆಗೂ ದಾರಿ ಮಾಡಿಕೊಟ್ಟರೂ ಅಚ್ಚರಿಯೇನಿಲ್ಲ.
ವಿಶೇಷ ವರದಿ: ಗಣಪತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ