newsfirstkannada.com

ಕಾಳು ಮೆಣಸಿಗೆ ಬಂಗಾರದ ಬೆಲೆ.. ‘ಕಪ್ಪು ಬಂಗಾರ’ ಬೆಳೆದ ರೈತರ ಮೊಗದಲ್ಲಿ ಮಂದಹಾಸ

Share :

26-08-2023

  ಕಮರಿ ಹೋಗಿದ್ದ ಕಾಳು ಮೆಣಸಿನ ದರ ಏರಿಕೆ

  ಕಾಳು ಮೆಣಸಿಗೆ ಸೊರಗು ರೋಗ ಮತ್ತು ಎಲೆಚುಕ್ಕಿ ರೋಗ

  ವಿಯೆಟ್ನಾಂ ನಿಂದ ಕಳ್ಳಮಾರ್ಗದಲ್ಲಿ ಬರುತ್ತಿದ್ದ ಮೆಣಸು

ರೈತರ ಪರಿಸ್ಥಿತಿ ಮೊದಲಿನಿಂದಲೂ ಹಾಗೇನೇ. ಹಲ್ಲಿದ್ದಾಗ ಕಡಲೆ ಇಲ್ಲ. ಕಡಲೆ ಇದ್ದಾಗ ಹಲ್ಲಿಲ್ಲ ಅನ್ನೋ ಗಾದೆ ಮಾತಿನಂತೆ ದರ ಇದ್ದಾಗ ಬೆಳೆ ಸರಿಯಾಗಿರಲ್ಲ. ಬೆಳೆ ಸರಿಯಾಗಿದ್ದಾಗ ದರ ಇರಲ್ಲ. ಈ ಸಲ ಕೂಡ ಇದೇ ಪರಿಸ್ಥಿತಿ ಬೆಳೆಗಾರರದ್ದು. ಕಪ್ಪು ಬಂಗಾರ ಅಂತಾನೇ ಕರೆಸಿಕೊಂಡಿರೋ ಬೆಳೆಯೊಂದು ಇದೀಗ ಏಕಾಏಕಿ ಮತ್ತೆ ದರ ಏರಿಕೆ ಕಂಡಿದೆ. ಬಂಗಾರದ ದರ ಬಂದ್ರೂ ಕೂಡ ರೈತ ಮಾತ್ರ ಸರಿಯಾದ ಬೆಳೆಯಿಲ್ಲದೇ ಕೊರಗುವಂತಾಗಿದೆ. ಹಾಗಿದ್ರೆ ಯಾವುದಿ ಬೆಲೆ ಏರಿಕೆ ಕಂಡ ಕಪ್ಪು ಬಂಗಾರ ಅಂತೀರಾ? ಈ ಸ್ಟೋರಿ ಓಡಿ.

ಸೊರಗು ರೋಗ ಮತ್ತು ಎಲೆಚುಕ್ಕಿ ರೋಗ

ಕಮರಿ ಹೋಗಿದ್ದ ಕಾಳು ಮೆಣಸಿನ ದರ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಅಡಿಕೆ ಮತ್ತು ಕಾಳುಮೆಣಸಿನ ನಡುವೆ ದರ ಪೈಪೋಟಿ ಕಂಡ ಬೆಳೆಗಾರ ಹಿರಿ ಹಿರಿ ಹಿಗ್ಗಿದ್ದಾ‌ನೆ. ಹೌದು, ಕಳೆದ ನಾಲ್ಕು ವರ್ಷದಿಂದ ಪಾತಾಳಕ್ಕಿಳಿದಿದ್ದ ಕಾಳುಮೆಣಸಿನ ದರ ಕಳೆದ ವರ್ಷದಿಂದ ಚೇತರಿಕೆ ಕಂಡಿದ್ದು ಇದೀಗ ದಿಢೀರ್ ಏರಿಕೆಯಾಗಿದೆ. ಕೇವಲ 50000 ರೂಪಾಯಿ ಇದ್ದ ಕಾಳುಮೆಣಸು ತಿಂಗಳಿಂದ ಏರಿಕೆ ಕಂಡು ಒಮ್ಮೆಲೇ 65000ಕ್ಕೆ ಏರಿಕೆಯಾಗಿದೆ. ಶಿರಸಿ ನಗರದ ಟಿಎಂಎಸ್ ಸಹಕಾರಿ ಸಂಘದಲ್ಲಿ 65176 ರೂಪಾಯಿಗೆ ಮಾರಾಟವಾಗಿದೆ. ಇದೇ ವೇಳೆ ಕ್ವಿಂಟಲ್ ಅಡಿಕೆಗೂ 50000 ರೂಪಾಯಿ ಬೆಲೆ ಬಂದಿರೋದು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಆದ್ರೆ ಕಳೆದ ದಶಕದಿಂದ ಕಾಳುಮೆಣಸಿಗೆ ರೋಗ ಬಾಧೆ ಕಾಡುತ್ತಲೇ ಇದೆ. ಹೆಚ್ಚು ಉತ್ಪಾದನೆ ಇರೋ ಕೇರಳದಲ್ಲಿ ಸೊರಗು ರೋಗ ತೀವ್ರವಾಗಿದೆ. ಇನ್ನು ಜಿಲ್ಲೆಯ ಪರಿಸ್ಥಿತಿ ಸಹ ಹೀಗೆಯೇ ಇದೆ. ಜಿಲ್ಲೆಯಲ್ಲಿ 4787 ಹೆಕ್ಟೇರ್ ಪ್ರದೇಶದಲ್ಲಿ ಕಾಳು ಮೆಣಸು ಬೆಳೆಯಲಾಗುತ್ತಿದ್ದು, 2375 ಟನ್ ಉತ್ಪಾದನೆ ಆಗುತ್ತಿದೆ. ಶಿರಸಿ ಹೆಚ್ಚು ಅಂದರೆ 2272, ಸಿದ್ದಾಪುರದಲ್ಲಿ 1326, ಯಲ್ಲಾಪುರದಲ್ಲಿ 385 ಹೆಕ್ಟೇರ್ ಪ್ರದೇಶದಲ್ಲಿ ಮೆಣಸು ಬೆಳೆಯಲಾಗುತ್ತಿದೆ. ಆದರೆ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಸೊರಗು ರೋಗ ಮತ್ತು ಎಲೆಚುಕ್ಕಿ ರೋಗದಿಂದ ಸಾಕಷ್ಟು ಹಾನಿ ಸಂಭವಿಸಿದೆ. ಪರಿಣಾಮ ಬೆಳೆ ಪೂರೈಕೆಯೂ ತಗ್ಗಿದೆ.

ಭಾರತದ ಮೆಣಸಿಗೆ ಬೇಡಿಕೆ ಬಂದಿದೆ

ಇನ್ನು ಕಾಳು ಮೆಣಸು ದರ ಹೆಚ್ಚಳಕ್ಕೆ ನಾನಾ ಕಾರಣಗಳಿದ್ದರೂ ಮುಖ್ಯವಾಗಿ ವಿಯೆಟ್ನಾಂನಲ್ಲಿ ಕಾಳುಮೆಣಸಿಗೆ ರೋಗ ತಗುಲಿದ್ದು, ಅಲ್ಲಿನ ರೈತರು ಪರ್ಯಾಯ ಬೆಳೆಗೆ ಮೊರೆಹೋಗಿದ್ದರಿಂದ ಭಾರತದ ಮೆಣಸಿಗೆ ಬೇಡಿಕೆ ಬಂದಿದೆ ಎನ್ನಲಾಗುತ್ತಿದೆ. ಈ ನಡುವೆ ಕರೋನಾ ನಂತರ ವಿದೇಶಿ ವ್ಯವಹಾರ ಬದಲಾಗಿದೆ. ಪರಿಣಾಮ ವಿಯೆಟ್ನಾಂ ನಿಂದ ಕಳ್ಳಮಾರ್ಗದಲ್ಲಿ ಬರುತ್ತಿದ್ದ ಮೆಣಸು ಆಮದು ನಿಂತಿದೆ. ಹೀಗಾಗಿ ದೇಶದಲ್ಲಿ ತಾತ್ಕಾಲಿಕ ಕೊರತೆ ಸೃಷ್ಟಿಯಾಗಿದೆ ಅನ್ನೋದು ಮಾರುಕಟ್ಟೆ ತಜ್ಞರು ಅಭಿಪ್ರಾಯ.

ಕಪ್ಪು ಬಂಗಾರ

ಕಾಳುಮೆಣಸು ಪೂರೈಕೆಯಲ್ಲಿ ಶ್ರೀಲಂಕಾದ ಪಾತ್ರ ಮಹತ್ವದ್ದಾಗಿದ್ದು, ಅಲ್ಲಿನ ರಾಜಕೀಯ ವಿಪ್ಲವ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ವಿಯೆಟ್ನಾಂನ ಮೆಣಸು ಶ್ರೀಲಂಕಾದ ಮೂಲಕ ಭಾರತಕ್ಕೆ ಬರುತ್ತಿತ್ತು. ಅದು ಈಗ ಸ್ಥಗಿತಗೊಂಡಿದೆ. ಪರಿಣಾಮ ಕಪ್ಪುಬಂಗಾರಕ್ಕೆ ಬೇಡಿಕೆ ಹೆಚ್ಚಿದೆ ಎನ್ನಲಾಗಿದೆ. ಕಾಳುಮೆಣಸು ಅರಣ್ಯ ಬೆಳೆಯಾದರೂ ಜಿಲ್ಲೆಯ ಮಟ್ಟಿಗೆ ಅದು ಅಡಿಕೆ ತೋಟದ ಉಪಬೆಳೆಯಾಗಿಯೇ ಗುರುತಿಸಿಕೊಂಡಿದೆ. ಅಡಿಕೆ ದರ ಕುಸಿದಾಗ, ಆಪತ್ತು ಬಂದು ಹಣಕಾಸಿನ ಮುಗ್ಗಟ್ಟು ಎದುರಾದಾಗ ಕಾಳುಮೆಣಸು ಮಾರಾಟ ಮಾಡುವ ರೂಢಿ ಇಂದಿಗೂ ಇದೆ. ಇದೇ ಕಾರಣಕ್ಕೆ ಇದನ್ನ ಕಪ್ಪು ಬಂಗಾರ ಅಂತ ಕರೆಯಲಾಗುತ್ತಿದೆ.

ಒಟ್ಟಿನಲ್ಲಿ ಕಾಳು ಮೆಣಸಿನ ದರ ಏರಿಕೆಯಾದ್ರೂ ಬೆಳೆ ಕಡಿಮೆ ಇರೋದು ಬೇಡಿಕೆಗೆ ಕಾರಣವಾಗಿದೆ. ಆದ್ರೆ ಹೀಗೆ ಅಡಿಕೆ ಮತ್ತು ಕಾಳು ಮೆಣಸು ಜತೆಯಾಗಿ ದರ ಏರಿಕೆ ಸಮರಕ್ಕಿಳಿದಿದ್ದು ಅಪರೂಪ. ಜಿಲ್ಲೆಯ ಎರಡು ಮುಖ್ಯ ವಾಣಿಜ್ಯ ಬೆಳೆಗಳು ದರ ಜಿಗಿತ ಕಂಡಿರೋದು ಬೆಳೆಗಾರರ ಸಂತೋಷಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಳು ಮೆಣಸಿಗೆ ಬಂಗಾರದ ಬೆಲೆ.. ‘ಕಪ್ಪು ಬಂಗಾರ’ ಬೆಳೆದ ರೈತರ ಮೊಗದಲ್ಲಿ ಮಂದಹಾಸ

https://newsfirstlive.com/wp-content/uploads/2023/08/Pepper-2.jpg

Load More