newsfirstkannada.com

ಆಂಧ್ರದಲ್ಲಿ ಮತ್ತೆ ‘ರಕ್ತ’ ರಾಜಕೀಯ.. ಸಿಎಂ ಜಗನ್‌ಗೆ ಚಂದ್ರಬಾಬು ನಾಯ್ಡು ಖಡಕ್ ವಾರ್ನಿಂಗ್‌

Share :

09-08-2023

    ನೀವು ಯುದ್ಧ ಘೋಷಿಸಿದರೆ ನಾನು ಯುದ್ಧ ಘೋಷಿಸುತ್ತೇನೆ

    ನಮ್ಮ ಕಾರ್ಯಕರ್ತರ ಒಂದು ಹನಿ ರಕ್ತವೂ ನನ್ನ ರಕ್ತ ಇದ್ದಂತೆ

    YSR ಕಾಂಗ್ರೆಸ್, TDP ಪಕ್ಷದ ಮಧ್ಯೆ ಮತ್ತೊಂದು ‘ರಕ್ತ’ ಚರಿತ್ರೆ

ಹೈದರಾಬಾದ್: ನೀವು ದೊಣ್ಣೆ ತೆಗೆದುಕೊಂಡು ಬಂದ್ರೆ ನಾನು ದೊಣ್ಣೆ ತಗೊಂಡು ಬರ್ತೀನಿ. ನೀವು ಯುದ್ಧ ಘೋಷಿಸಿದರೆ ನಾನು ಯುದ್ಧ ಘೋಷಿಸುತ್ತೇನೆ. ನಮ್ಮ ಕಾರ್ಯಕರ್ತರ ಒಂದು ಹನಿ ರಕ್ತವೂ ನನ್ನ ರಕ್ತವೇ. ಹುಷಾರ್.. ಹುಷಾರ್‌.. ಇದು ಆಂಧ್ರದ ಮಾಜಿ ಸಿಎಂ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಇಂದು ಹೇಳಿರುವ ಖಡಕ್ ಡೈಲಾಗ್‌ಗಳು. ತೆಲುಗು ಸಿನಿಮಾ ಡೈಲಾಗ್‌ ರೀತಿಯೇ ಕಾಣೋ ಈ ಮಾತುಗಳು ನಿಜಕ್ಕೂ ಆಂಧ್ರ ರಾಜಕೀಯದಲ್ಲಿ ಅಲ್ಲೋಲ, ಕಲ್ಲೋಲವನ್ನೇ ಸೃಷ್ಟಿಸಿದೆ. ಸಿಎಂ ಜಗನ್‌ ನೇತೃತ್ವದ YSR ಕಾಂಗ್ರೆಸ್ ಪಕ್ಷದ ವಿರುದ್ಧ TDP ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನೀನಾ, ನಾನಾ ನೋಡೇ ಬಿಡೋಣ. ರಾಜಕೀಯ ಅಖಾಡಕ್ಕೆ ಬನ್ನಿ ಅಂತಾ ಪಂಥಾಹ್ವಾನ ಕೊಟ್ಟಿದ್ದಾರೆ.

TDP ಪಕ್ಷದ ಕಾರ್ಯಕರ್ತರ ಜೊತೆ ಚಂದ್ರಬಾಬು ನಾಯ್ಡು ಯಾತ್ರೆ

ಇತ್ತೀಚೆಗೆ ಅಂದ್ರೆ ಆಗಸ್ಟ್ 4ರಂದು ಚಿತ್ತೂರು ಜಿಲ್ಲೆಯ ಅನ್ನಮಯ್ಯದಲ್ಲಿ ಹಿಂಸಾಚಾರ ನಡೆದಿತ್ತು. YSR ಕಾಂಗ್ರೆಸ್ ಹಾಗೂ TDP ಕಾರ್ಯಕರ್ತ ಮಧ್ಯೆ ಮಾರಾಮಾರಿ ನಡೆದಿದ್ದು ರಕ್ತಪಾತವೇ ಹರಿದಿತ್ತು. ಈ ಘಟನೆಯಲ್ಲಿ ಪೊಲೀಸರು ಸೇರಿದಂತೆ YSRC ಹಾಗೂ TDP ಪಕ್ಷದ 20ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದರು. ಹಿಂಸಾಚಾರದ ಮಧ್ಯೆ ಹಲವು ವಾಹನಗಳು ಜಖಂಗೊಂಡಿದ್ದವು. ಈ ಘಟನೆ ಸಂಬಂಧ ಸಿಎಂ ಜಗನ್ ಸರ್ಕಾರ TDP ಮುಖ್ಯಸ್ಥ ಚಂದ್ರಬಾಬು ನಾಯ್ಡು ವಿರುದ್ಧ ಎರಡು ಎಫ್ಐಆರ್ ದಾಖಲಿಸಿದೆ. ಈ ಕಾನೂನು ಕ್ರಮದ ವಿರುದ್ಧ ರೊಚ್ಚಿಗೆದ್ದಿರವ ಚಂದ್ರಬಾಬು ನಾಯ್ಡು ಕೆರಳಿ ಕೆಂಡವಾಗಿದ್ದಾರೆ. ಉದ್ದೇಶಪೂರ್ವಕವಾಗಿ ತನ್ನ ಹಾಗೂ ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಲಾಗಿದೆ. ನಮ್ಮ ಕಾರ್ಯಕರ್ತರ ಒಂದು ಹನಿ ರಕ್ತವೂ ನನ್ನ ರಕ್ತವೇ. ನೀವು ರಾಜ್ಯದಲ್ಲಿ ಹಿಂಸಾಚಾರವನ್ನೇ ಬಯಸುತ್ತಿದ್ದರೆ ನಾವೂ ಹಿಂಸಾಚಾರಕ್ಕೆ ಸಿದ್ಧರಿದ್ದೇವೆ ಎಂದು ಎಚ್ಚರಿಸಿದ್ದಾರೆ.

ಚಂದ್ರಬಾಬು ನಾಯ್ಡು ಬಂಧನವಾಗುತ್ತಾ?

ಆಗಸ್ಟ್ 4ರಂದು ಅನ್ನಮಯ್ಯದಲ್ಲಿ ನಡೆದ ಹಿಂಸಾಚಾರವನ್ನು ಸಿಎಂ ಜಗನ್ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಒಟ್ಟು 12 ಎಫ್‌ಐಆರ್‌ಗಳನ್ನು ಹಾಕಲಾಗಿದ್ದು, 245 ಜನರನ್ನು ಆರೋಪಿಸಲಾಗಿದೆ. ಇದರಲ್ಲಿ ಈಗಾಗಲೇ 87 ಮಂದಿಯನ್ನ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರ ಮೇಲೆ ಕ್ರಿಮಿನಲ್ ಆರೋಪಗಳನ್ನು ಹೊರಿಸಲಾಗಿದೆ.

ಮುಂದಿನ ಆರು ತಿಂಗಳಲ್ಲಿ ಆಂಧ್ರದಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದೆ. ಈ ಹಿನ್ನೆಲೆ ಚಂದ್ರಬಾಬು ನಾಯ್ಡು ಅವರು ರಾಜ್ಯಾದ್ಯಂತ ಯಾತ್ರೆ ಕೈಗೊಂಡಿದ್ದಾರೆ. ಈ ಯಾತ್ರೆಯ ಮಧ್ಯೆಯೇ YSRC ಹಾಗೂ TDP ಪಕ್ಷದ ಕಾರ್ಯಕರ್ತರ ಮಧ್ಯೆ ಹಿಂಸಾಚಾರ ಸಂಭವಿಸಿ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಪ್ರಕರಣ ಸಂಬಂಧ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸೋ ಸಾಧ್ಯತೆ ಇದೆ. ಈ ಹಿನ್ನೆಲೆ ಚಂದ್ರಬಾಬು ನಾಯ್ಡು ಅವರು ಜಗನ್ ಸರ್ಕಾರದ ವಿರುದ್ಧ ಗುಡುಗುತ್ತಿದ್ದಾರೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಮತ್ತಷ್ಟು ರೋಚಕ ರಾಜಕೀಯಕ್ಕೆ ನಾಂದಿಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಆಂಧ್ರದಲ್ಲಿ ಮತ್ತೆ ‘ರಕ್ತ’ ರಾಜಕೀಯ.. ಸಿಎಂ ಜಗನ್‌ಗೆ ಚಂದ್ರಬಾಬು ನಾಯ್ಡು ಖಡಕ್ ವಾರ್ನಿಂಗ್‌

https://newsfirstlive.com/wp-content/uploads/2023/08/AP-Chandra-babu-Naidu-Vs-Jagan.jpg

Load More