ಇನ್ಮುಂದೆ ಮೆಟ್ರೋ ಸ್ಮಾರ್ಟ್ ಕಾರ್ಡ್ ಮಾಯ ಆಗಲಿದೆ..!
ಸ್ಮಾರ್ಟ್ ಕಾರ್ಡ್ ಬದಲಿಗೆ ಮೊಬಿಲಿಟಿ ಕಾರ್ಡ್ ಬಳಕೆಗೆ ಒತ್ತು
ಮಹತ್ವದ ನಿರ್ಧಾರ ತೆಗೆದುಕೊಂಡ BMRCL; ಏನಿದು ಸ್ಟೋರಿ..?
ಬೆಂಗಳೂರು: ಮೆಟ್ರೋನಲ್ಲಿ ಓಡಾಡೋಕೆ ಸ್ಮಾರ್ಟ್ ಕಾರ್ಡ್ ಬಂದ ಮೇಲೆ ಜನರಿಗೆ ಕ್ಯೂನಲ್ಲಿ ನಿಂತು ಟಿಕೆಟ್ ತಗೊಳೋದ್ರಲ್ಲಿ ಟೈಮ್ ಸೇವ್ ಆಗ್ತಿತ್ತು. ಇನ್ಮುಂದೆ ಸ್ಮಾರ್ಟ್ ಕಾರ್ಡ್ ಮಾಯ ಆಗಿ, ಕಾಮನ್ ಮೊಬಿಲಿಟಿ ಕಾರ್ಡ್ ಮಾತ್ರ ಜಾರಿಯಲ್ಲಿರುತ್ತೆ. ಹಾಗಂತಾ ಸ್ಮಾರ್ಟ್ ಕಾರ್ಡ್ ಇರೋರು ಚಿಂತೆ ಮಾಡಬೇಕಾಗಿಲ್ಲ.
ಫುಲ್ ಟ್ರಾಫಿಕ್ ಜಂಜಾಟದಲ್ಲಿರೋ ಬೆಂಗಳೂರು ಜನರಿಗೆ ಕೆಲಸಕ್ಕೆ ಬೇಗ ಹೋಗ್ಬೇಕು ಅಂದ್ರೆ ಮೆಟ್ರೋ ಬೇಕೇ ಬೇಕು. ಇಲ್ಲ ಅಂದ್ರೆ ಒಂದು ಸ್ಥಳಕ್ಕೆ ಹೋಗೋಕು 1 ಗಂಟೆಯಾದ್ರೂ ಬೇಕು. ಇಲ್ಲಿ ವಾಸಿಸೋ ಲಕ್ಷಾಂತರ ಜನರು ಮೆಟ್ರೋಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಮೊದಲೆಲ್ಲಾ ಸ್ಮಾರ್ಟ್ ಕಾರ್ಡ್ ತಗೊಂಡು ರಿಚಾರ್ಜ್ ಮಾಡಿಸಿದ್ರೆ ಸಾಕಾಗ್ತಿತ್ತು. ಆದ್ರೀಗ ನಮ್ಮ ಮೆಟ್ರೋ ಒನ್ ನೇಷನ್ ಒನ್ ಕಾರ್ಡ್ ಜಾರಿಗೆ ತಂದಿದೆ. ಅದು ಬಂದಿದ್ದೆ ತಡ ಸ್ಮಾರ್ಟ್ ಕಾಡ್ ಸ್ಥಗಿತಕ್ಕೆ ಚಿಂತನೆ ನಡೆಸಿದೆ.
ಒನ್ ನೇಷನ್ ಒನ್ ಕಾರ್ಡ್ ಮಾದರಿಯ ಕಾಮನ್ ಮೊಬಿಲಿಟಿ ಕಾರ್ಡ್ ಬಳಕೆಗೆ ಹೆಚ್ಚು ಒತ್ತು ಕೊಟ್ಟು, ಸ್ಮಾರ್ಟ್ ಕಾರ್ಡ್ ರದ್ದಿಗೆ ಬಿಎಂಆರ್‌ಸಿಎಲ್ ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ 48 ಲಕ್ಷ ಕಾರ್ಡ್ ಬಳಕೆದಾರರಿಗೆ ಸಮಸ್ಯೆ ಆಗದ ರೀತಿ ಸ್ಮಾರ್ಟ್ ಕಾರ್ಡ್ ರದ್ದು ಮಾಡೋಕೆ BMRCL ವ್ಯವಸ್ಥಿತ ಯೋಜನೆ ಹಾಕಿಕೊಂಡಿದೆ..
ಏನಿದು ‘NCMC’ ಕಾರ್ಡ್?
NCMC ಕಾರ್ಡ್ ರುಪೇ ಡೆಬಿಟ್/ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ನಿಮ್ಮ ಕೈ ಸೇರುತ್ತೆ. ಈ ಕಾರ್ಡ್ನಿಂದ ಮೆಟ್ರೊ, ಬಸ್, ರೇಲ್ವೆ ಮತ್ತಿತರ ಸೇವೆ ಪಡೆಯಬಹುದು. ಇನ್ನು ಟೋಲ್ಗೇಟ್, ವಾಹನ ಪಾರ್ಕಿಂಗ್ನಲ್ಲಿ ಶುಲ್ಕ ಕಟ್ಟೋಕೆ ಈ ಕಾರ್ಡ್ ಸಹಕಾರಿಯಾಗಿದೆ. ಅಷ್ಟೆ ಅಲ್ಲದೆ, ಬಿಲ್ ಪೇಮೆಂಟ್, ಕ್ಯಾಶ್‍ಬ್ಯಾಕ್ ಆಫರ್ ಕೂಡ ಇದರಲ್ಲಿ ಲಭ್ಯವಿದೆ. ವಿವಿಧ ರಾಜ್ಯಗಳ ಸಾರಿಗೆ ನಿಗಮ ಹಾಗೂ ಮೆಟ್ರೋಗಳಲ್ಲಿಯೂ ಇದನ್ನು ಬಳಕೆ ಮಾಡಬಹುದಾಗಿದೆ.
BMRCL, RBL Bank, ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಮೊಬೈಲ್ ಅಪ್ಲಿಕೇಶನ್ನಲ್ಲಿ ಗ್ರಾಹಕರು ತಾವೇ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಈ ಕಾರ್ಡ್‌ನ ಹೇಗೆ ಪಡೆಯಬಹುದು ಎಂದು ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.
ಒಟ್ಟಾರೆ.. ಈಗಾಗಲೇ ದೆಹಲಿ, ಚೆನ್ನೈ ಮೆಟ್ರೋದಲ್ಲಿ ರಿಚಾರ್ಜ್ ಮಾದರಿಯ ಸ್ಮಾರ್ಟ್ ಕಾರ್ಡ್ ಬಳಕೆ ಸ್ಥಗಿತಗೊಂಡಿದ್ದು, ಇದೇ ಮಾದರಿಯನ್ನು ಬೆಂಗಳೂರು ಮೆಟ್ರೋದಲ್ಲಿ ಬಳಕೆಗೆ ಬಿಎಂಆರ್‌ಸಿಎಲ್ ಮುಂದಾಗಿದೆ. ಆದ್ರೆ, ಹಳೆಯ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ನಮ್ಮ ಮೆಟ್ರೋ ಸಂಸ್ಥೆ ಮೇಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ