newsfirstkannada.com

ಆದಾಯ ಹೆಚ್ಚಿಸಿಕೊಳ್ಳಲು ನಮ್ಮ ಮೆಟ್ರೋ ಮಾಸ್ಟರ್​​ ಪ್ಲಾನ್​​.. ಏನದು..?

Share :

17-06-2023

    ಆದಾಯದ ಮೂಲ ಹೆಚ್ಚಿಸಿಕೊಳ್ಳಲು BMRCL ಕಡೆಯಿಂದ ಸಾಕಷ್ಟು ತಯಾರಿ!

    ಮೊದಲ ಬಾರಿಗೆ ನಮ್ಮ ಮೆಟ್ರೋ ಸ್ಟೇಷನ್​ ಒಳಭಾಗದಲ್ಲಿ ಜಾಹೀರಾತು ಅಳವಡಿಕೆ!

    ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ಬಲ್ಕ್ ಟಿಕೆಟ್ ಯೋಜನೆ ಜಾರಿ!

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಉಂಟಾಗಿದ್ದ ನಷ್ಟವನ್ನು ಸರಿದೂಗಿಸಲು BMRCL ಸಾಕಷ್ಟು ಕಸರತ್ತು ನಡೆಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ಬಲ್ಕ್ ಟಿಕೆಟ್ ಯೋಜನೆ, ವಾಟ್ಸಾಪ್ ಕ್ಯೂ ಆರ್ ಕೋಡ್ ಯೋಜನೆ. ಹೀಗೆ ಸಾಕಷ್ಟು ಯೋಜನೆಗಳ ಪರಿಚಯಿಸಿ ಆದಾಯ ಹೆಚ್ಚಿಸಿ ಕೊಂಡಿದೆ. ಸದ್ಯ ಇನ್ನಷ್ಟು ಸ್ಕಿಮ್​ ಮಾಡುವ ಉದ್ದೇಶದಿಂದ ನಮ್ಮ ಮೆಟ್ರೋ ಸ್ಟೇಷನ್​ಗಳಲ್ಲಿ ಜಾಹೀರಾತು ಅಳವಡಿಕೆಗೆ BMRCL ಮುಂದಾಗಿದೆ.

ಹೌದು, ಆದಾಯದ ಮೂಲ ಹೆಚ್ಚಿಸಿಕೊಳ್ಳಲು BMRCL ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋ ಸ್ಟೇಷನ್​ ಒಳಭಾಗದಲ್ಲಿ ಜಾಹೀರಾತು ಅಳವಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಮೆಟ್ರೋ ಲಿಫ್ಟ್, ಎಸ್ಕಲೇಟರ್, ಮೆಟ್ರೋ ಡೋರ್ಸ್, ಹೀಗೆ ಮೆಟ್ರೋ ಸ್ಟೇಷನ್​​ನ ಇಂಡೋರ್​ನ ಎಲ್ಲಾ ಕಡೆಯೂ ಅಡ್ವರ್ಟೈರ್ಸ್​ಮೆಂಟ್​ ಅಳವಡಿಕೆಗೆ ಇದೀಗ ಬಿಎಂಆರ್​ಸಿಎಲ್​ ಮುಂದಾಗಿದೆ. ಈಗಾಗಲೇ ಟೆಂಡರ್ ಕೂಡ ಕರೆದಾಗಿದ್ದು ಅತೀ ಶೀಘ್ರದಲ್ಲಿ ಜಾಹೀರಾತು ಅಳವಡಿಕೆ ಪ್ರಕ್ರಿಯೆ ಫೈನಲ್ ಆಗಲಿದೆ ಅಂತ BMRCL ಎಂಡಿ ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಮಳಿಗೆ ತೆರೆಯುವ ಬಗ್ಗೆ ಸುದ್ದಿಯಾಗಿದ್ದ ನಮ್ಮ ಮೆಟ್ರೋ, ಈಗ ಜಾಹೀರಾತು ಅಳವಡಿಕೆಗೆ ಚಿಂತನೆ ನಡೆಸಿದೆ. ಸುಮಾರು 50 ಸ್ಟೇಷನ್ಸ್​​ಗಳಲ್ಲಿ ಜಾಹಿರಾತು ಅಳವಡಿಕೆ ಮಾಡಲು ಯೋಜನೆ ರೂಪಿಸಲಾಗಿದ್ದು, ಇದ್ರಿಂದ 30 ರಿಂದ 35 ಕೋಟಿ ರೂಪಾಯಿ ವಾರ್ಷಿಕ ಆದಾಯ ಬರುವ ನೀರಿಕ್ಷೆ ಇದೆ. ಒಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನ ಪರಿಸಯಿಸುವ ಮೂಲಕ ಬಿಎಂಆರ್​ಸಿಎಲ್ ತನ್ನ ಆದಾಯದ ಜೊತೆಗೆ ಪ್ರಯಾಣಿಕರನ್ನ ಹೆಚ್ಚಿಸಲು ಪ್ಲಾನ್ ರೂಪಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆದಾಯ ಹೆಚ್ಚಿಸಿಕೊಳ್ಳಲು ನಮ್ಮ ಮೆಟ್ರೋ ಮಾಸ್ಟರ್​​ ಪ್ಲಾನ್​​.. ಏನದು..?

https://newsfirstlive.com/wp-content/uploads/2023/06/namma-metro-11.jpg

Load More