ಬಿಎಂಟಿಸಿ ಬಸ್ನಲ್ಲಿ ನಿರ್ವಾಹಕನ ಹುಚ್ಚಾಟದಿಂದ ಯುವತಿಗೆ ಮುಜುಗರ
ಟಿಕೆಟ್ ಕೊಡುವ ವೇಳೆ ಯುವತಿಯ ಪಕ್ಕದಲ್ಲಿಯೇ ಬಂದು ಕುಳಿತ ನಿರ್ವಾಹಕ
ಯುವತಿಗೆ ಮುಜುಗರವಾಗುವಂತೆ ವರ್ತಿಸಿದ ಕಂಡಕ್ಟರ್ನ ವಿಡಿಯೋ ವೈರಲ್!
ಬೆಂಗಳೂರು: ಈ ಬಿಎಂಟಿಸಿ ಡ್ರೈವರ್ಗಳು ಒಂದಲ್ಲಾ ಒಂದು ಯಡವಟ್ಟು ಮಾಡಿಕೊಳ್ಳುತ್ತಾರೆ. ಇಲ್ಲವೇ ಕಂಡಕ್ಟರ್ಗಳು ಒಂದಿಲ್ಲೊಂದು ಯಡವಟ್ಟು ಮಾಡಿಕೊಂಡು ಸುದ್ದಿಯಾಗುತ್ತಾರೆ. ಈಗ ಮಾಗಡಿ ರೋಡ್ ಮಾರ್ಗದಲ್ಲಿ ಹೊರಟಿದ್ದ ಬಿಎಂಟಿಸಿ ಬಸ್‌ನ ನಿರ್ವಾಹಕನ ಅತಿರೇಕದ ವರ್ತನೆಯಿಂದ ದೊಡ್ಡ ಸುದ್ದಿಯಾಗಿದೆ. ಯುವತಿಯೊಬ್ಬಳು ಕೂತಿದ್ದ ಸೀಟ್ನಲ್ಲಿಯೇ ಯುವತಿಗೆ ಅಂಟಿಕೊಂಡು ಕೂರುವ ಮೂಲಕ ಬಿಎಂಟಿಸಿ ಬಸ್‌ನ ನಿರ್ವಾಹಕ ತನ್ನ ಅತಿರೇಕದ ವರ್ತನೆ ತೋರಿದ್ದಾನೆ.
ಇದನ್ನೂ ಓದಿ: ಹಾಸನದಲ್ಲಿ ರೌಡಿಶೀಟರ್ ಅಟ್ಟಹಾಸ.. ಅಮಾಯಕ ಯುವಕನಿಗೆ ಚಾಕು ಇರಿದು ಪರಾರಿ; ಆಗಿದ್ದೇನು?
ಕಂಡಕ್ಟರ್ನ ಈ ವರ್ತನೆ ಆ ಯುವತಿಯ ಜೊತೆ ಜೊತೆಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಇತರರಿಗೂ ಕೂಡ ಮುಜಗರ ಉಂಟು ಮಾಡಿದೆ. ಟಿಕೆಟ್ ವಿತರಣೆ ಮಾಡುವಾಗ ಕಂಡಕ್ಟರ್ ಈ ರೀತಿಯ ಕೆಲಸ ಮಾಡಿದ್ದಾನೆ ಯುವತಿ ಕೂತಿರುವ ಸೀಟ್ ಹಾಕಲಾಗಿರುವ ಸೇಫ್ಟಿ ಕಂಬಿಯ ಮೇಲೆ ಕುಳಿತ ಕಂಡಕ್ಟರ್ ಯುವತಿಗೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ.
ಇದನ್ನೂ ಓದಿ: Stop Hindi Diwas: ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್ ರಾಜ್
ಸದ್ಯ ಬಿಎಂಟಿಸಿ ಬಸ್ ನಿರ್ವಾಹಕನ ಈ ಅಸಭ್ಯ ವರ್ತನೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಕಂಡಕ್ಟರ್ ಅಣ್ಣಾ ಇದೇನಾ ನೀವು ಡ್ಯೂಟಿ ಮಾಡೋ ಸ್ಟೈಲ್ ಅಂತೆಲ್ಲಾ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೆಟ್ಟಿಗರಿಂದ ಕೂಡಲೇ ನಿರ್ವಾಹಕನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ. ಪ್ರತಿ ಬಸ್ನಲ್ಲಿಯೂ ಕಂಡಕ್ಟರ್ಗೆ ಅಂತಲೇ ಒಂದು ಸೀಟು ಮೀಸಲಿರುತ್ತೆ. ಅದನ್ನು ಬಿಟ್ಟು ಈತ ಅಲ್ಲಿ ಬಂದು ಕೂತಿದ್ದೇಕೆ ಎಂಬ ವಾದಗಳು ಕೇಳಿ ಬರುತ್ತಿವೆ.
ಈ ಘಟನೆ ನಡೆದಿದ್ದು ಯಾವ ಬಸ್ನಲ್ಲಿ, ಬಸ್ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿತ್ತು ಎಂಬುದು ತಿಳಿದು ಬಂದಿಲ್ಲ. ಆದ್ರೆ ಆ ನಿರ್ವಾಹಕನ ನಡೆಯನ್ನು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಎಲ್ಲರೂ ಖಂಡಿಸುತ್ತಿದ್ದಾರೆ. ಕೂಡಲೇ ಆತನನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಗುಡುಗಿದ್ದಾರೆ.
ಸಸ್ಪೆಂಡ್ ಮಾಡಿದ ಬಿಎಂಟಿಸಿ!
ನ್ಯೂಸ್ ಫಸ್ಟ್ ಚಾನೆಲ್ ಕಂಡಕ್ಟರ್ ಈ ವರ್ತನೆ ಬಗ್ಗೆ ಬಿಎಂಟಿಸಿ ಗಮನಕ್ಕೆ ತಂದಿದೆ. ಈ ಬಗ್ಗೆ ಡಿಪೋ ಮ್ಯಾನೇಜರ್ ಬಳಿ ಮಾಹಿತಿ ಕಲೆ ಹಾಕಿದ್ದ ಬಿಎಂಟಿಸಿ ಅಧಿಕಾರಿಗಳು ಈಗಾಗಲೇ ಈ ಕಂಡಕ್ಟರ್ ಅನ್ನು ಸಸ್ಪೆಂಡ್ ಮಾಡಿದ್ದಾರೆ. ಇದು ಕಳೆದ ಎರಡು ತಿಂಗಳ ಹಿಂದೆ ನಡೆದಿರೋ ಘಟನೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗ ವಿಡಿಯೋ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ