ಮಾಲಿನ್ಯಮುಕ್ತ ಬೆಂಗಳೂರು ಕಡೆಗೆ ಬಿಎಂಟಿಸಿ ದಿಟ್ಟ ಹೆಜ್ಜೆ..!
ಟಾಟಾ ಕಂಪನಿಯ 921 ಇವಿ ಬಸ್ಗಳು ಶೀಘ್ರವೇ ಆಗಮನ
ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಸರ್ಕಾರಿ ಬಸ್ ಚಾಲಕರು
ಬೆಂಗಳೂರು: ಶಕ್ತಿ ಯೋಜನೆಯನ್ನ ಮೆಚ್ಚಿಕೊಂಡ ನಾರಿಯರು ಬಸ್ ಹತ್ತಿ ತಮ್ಮಿಷ್ಟದೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದರಿಂದಾಗಿ ದಿನನಿತ್ಯ ಓಡಾಡುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಬಸ್ ರಷ್ ಆಗಿ ಸರಿಯಾದ ಸಮಯಕ್ಕೆ ನಿಗದಿತ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಅಲ್ಲಲ್ಲಿ ಬಸ್ನ ಕೊರತೆಯೂ ಎದ್ದು ಕಾಣುತ್ತಿತ್ತು. ಈಗ ಇದೆಲ್ಲದಕ್ಕೂ ಮುಕ್ತಿ ಹಾಡಲು ಸರ್ಕಾರ ಮುಂದಾಗಿದೆ.
ಮಾಲಿನ್ಯ ಮುಕ್ತ ಬೆಂಗಳೂರು ಕಡೆಗೆ ಬಿಎಂಟಿಸಿ ದಿಟ್ಟ ಹೆಜ್ಜೆ ಇಟ್ಟಿದ್ದು, ಮತ್ತಷ್ಟು ಎಲೆಕ್ಟ್ರಿಕ್ ಬಸ್ಗಳು ಬರಲಿವೆ. ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಟಾಟಾ ಕಂಪನಿಯ ಎಲೆಕ್ಟ್ರಿಕ್ ಬಸ್ಗೆ ಇಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಚಾಲನೆ ನೀಡಿದ್ದಾರೆ.
ಮತ್ತಷ್ಟು ‘ಇವಿ’ ಆಗಮನ
ಟಾಟಾ ಇವಿ ಬಸ್ ವಿಶೇಷತೆಯೇನು?
ಪರಿಸರ ಸ್ನೇಹಿ, ಮಾಲಿನ್ಯರಹಿತ ಬಸ್, ಅಂಗವಿಕಲರು, ಹಿರಿಯ ನಾಗರಿಕರಿಗೆ ಇದರಿಂದ ಅನುಕೂಲವಾಗಲಿದೆ. ಅಂಗವಿಕಲರಿಗೆ ಬಸ್ ಹತ್ತಲು ತುಂಬ ಅನುಕೂಲಕಾರಿಯಾಗಿ ಲೋ ಪ್ಲೋರ್ ವ್ಯವಸ್ಥೆ ಇದರಲ್ಲಿ ಇರಲಿದೆ. ಇದು 12 ಮೀಟರ್ ಉದ್ದವಿದೆ. ಹಾಗೆ 35 ಆಸನದ ವ್ಯವಸ್ಥೆಯಿದೆ. ನಾಲ್ಕು ಕಡೆ ಸಿಸಿಟಿವಿ ಅಳವಡಿಕೆ, ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿ.ಮೀಟರ್ವರೆಗೆ ಓಡಾಡಲಿದೆ. ಡ್ರೈವರ್ ಎಕ್ಸ್ ಲೇಟರ್ ಒತ್ತದಿದ್ದರೆ ಆಟೋಮೆಟಿಕ್ ಚಾರ್ಜಿಂಗ್ ಆಗಲಿದೆ. ಈ ಬಸ್ನಲ್ಲಿ ಖಾಸಗಿ ಚಾಲಕರು, ನಿರ್ವಾಹಕರು ಮಾತ್ರ ಇರಲಿದ್ದಾರೆ. ಸದ್ಯ ಈ ಬಸ್ಗಳು ಮೆಜೆಸ್ಟಿಕ್ ಟು ರಾಜಾಜಿನಗರ ಇಂಡಸ್ಟ್ರಿಯಲ್ ಏರಿಯಾಗೆ ಒಂದು ವಾರ ಟ್ರಯಲ್ ರನ್ ಆಗಲಿದೆ. ಇದಾದ ನಂತ್ರ ಮೂರು ತಿಂಗಳಿನಲ್ಲಿ ಇವಿ 921 ಬಸ್ ಸೇವೆ ಲಭ್ಯವಾಗಲಿದೆ.
ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಚಾಲಕರು
ಇವಿ ಬಸ್ಗಳು ಪರಿಸರ ಸ್ನೇಹಿ ಮತ್ತಷ್ಟು ಅನುಕೂಲಕರ ಎಲ್ಲವೂ ಸರಿ ಆದ್ರೆ, ಎಲೆಕ್ಟ್ರಿಕ್ ಬಸ್ಗಳ ಸೇರ್ಪಡೆಯಿಂದಾಗಿ ಕೆಲಸ ಕಳೆದುಕೊಳ್ಳುವ ಆತಂಕ ಬಿಎಂಟಿಸಿ ಚಾಲಕರಲ್ಲಿ ಹೆಚ್ಚಾಗಿದೆ. ಎಲೆಕ್ಟ್ರಿಕ್ ಬಸ್ಗಳಿಗೆ ಖಾಸಗಿ ಸಂಸ್ಥೆ ಡ್ರೈವರ್ಗಳೇ ನೇಮಕವಾಗಲಿರುವುದೇ ಇದಕ್ಕೆ ಕಾರಣ. ಹೀಗಾಗಿ, ಎಲೆಕ್ಟ್ರಿಕ್ ಬಸ್ ಗಳಲ್ಲಿ ಖಾಸಗಿ ಡ್ರೈವರ್ ನೇಮಕಕ್ಕೆ ಮತ್ತೆ ಆಕ್ರೋಶ ಭುಗಿಲೆದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ