ವರ್ಷಾಂತ್ಯಕ್ಕೆ ಬೆಂಗಳೂರಿಗರಿಗೆ ಬಿಎಂಟಿಸಿ ಗುಡ್ನ್ಯೂಸ್!
ಸಿಲಿಕಾನ್ ಸಿಟಿ ಅಟ್ರ್ಯಾಕ್ಷನ್ ಹೆಚ್ಚಿಸಲು ಮಾಸ್ಟರ್ ಪ್ಲಾನ್
ರಾಜಧಾನಿಯಲ್ಲಿ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್ ವೈಭವ
ಬೆಂಗಳೂರು: ವರ್ಷಾಂತ್ಯಕ್ಕೆ ಬೆಂಗಳೂರಿಗರಿಗೆ ಗುಡ್ ನ್ಯೂಸ್. ಸಿಲಿಕಾನ್ ಸಿಟಿ ಅಟ್ರ್ಯಾಕ್ಷನ್ ಹೆಚ್ಚು ಮಾಡಲು ಬಿಬಿಎಂಟಿಸಿ ಮಾಸ್ಟರ್ ಪ್ಲ್ಯಾನ್. ಬರೋಬ್ಬರಿ 26 ವರ್ಷಗಳ ನಂತ್ರ ಮತ್ತೆ ನಗರದ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್ ವೈಭವ.
ಹೌದು, ಸಿಲಿಕಾನ್ ಸಿಟಿಯಲ್ಲಿ 1970 ಮತ್ತು 80ರ ಕಾಲದಲ್ಲಿ ಡಬಲ್ ಡೆಕ್ಕರ್ ಬಸ್ ಸೇವೆ ಆರಂಭ ಮಾಡಿತ್ತು. ಶಿವಾಜಿನಗರ, ಗಾಂಧಿಬಜಾರ್, ಶ್ರೀನಗರ, ಕೆ.ಆರ್ .ಮಾರ್ಕೆಟ್ನಿಂದ ಮೆಜೆಸ್ಟಿಕ್ಗೆ ಡಬಲ್ ಡೆಕ್ಕರ್ ಬಸ್ಗಳು ಓಡಾಡುತ್ತಿದ್ದವು. ಆದ್ರೆ ಕಾಲ ಕಳೆದಂತೆ ನಾನಾಕಾರಣಗಳಿಂದ 1997ರಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಬಸ್ ನಿಲ್ಲಿಸಲು ಕಾರಣಗಳೇನು..?
ನಗರದಲ್ಲಿ ಡಬಲ್ ಡೆಕ್ಕರ್ ಬಸ್ ಸಂಚರಿಸ್ತಿರುವಾಗ ರಸ್ತೆಗಳ ವಿಸ್ತೀರ್ಣ ಅಡ್ಡಿಯಾಗಿತ್ತು. ಅಲ್ಲದೆ ರಸ್ತೆಗಳ ಮೇಲ್ಭಾಗದಲ್ಲಿ ತಂತಿಗಳ ಸಂಖ್ಯೆ ಹೆಚ್ಚಾದ್ದರಿಂದ ಬಸ್ ಓಡಾಟಕ್ಕೆ ತೊಂದರೆಯಾಗಿತ್ತು. ಮತ್ತೊಂದು ಕಡೆ ಡಬಲ್ ಡೆಕ್ಕರ್ ಬಸ್ಗಳ ನಿರ್ವಹಣೆ ಕೊರತೆ, ನಗರೀಕರಣ ಬಸ್ ಸಂಚಾರಕ್ಕೆ ಅಡ್ಡಿ ಉಂಟಾದ್ದರಿಂದ 1997ರಲ್ಲಿ ಸಂಚಾರವನ್ನ ಸ್ಥಗಿತಗೊಳಿಸಲಾಗಿತ್ತು.
ಆದ್ರೆ ಇದೀಗ ಪ್ರಯಾಣಿಕರ ಬೇಡಿಕೆ ಮೇರೆಗೆ ಮತ್ತೆ ಡಬಲ್ ಡೆಕ್ಕರ್ ಬಸ್ ರಸ್ತೆಗಿಳಿಸಲು ಪ್ಲ್ಯಾನ್ ನಡೆಯುತ್ತಿದೆ. 10 ಬಸ್ ಖರೀದಿಗೆ 15 ದಿನದಲ್ಲಿ ಟೆಂಡರ್ ಕರೆಯಲು ತಯಾರಿ ನಡೆಸಲಾಗಿದ್ದು, ಕೆಲವೇ ದಿನಗಳಲ್ಲಿ ಟೆಂಡರ್ ಬಿಡ್ ಕರೆಯಲು ಬಿಎಂಟಿಸಿ ತಯಾರಿ ನಡೆಸಿದೆ.
ಡಬಲ್ ಡೆಕ್ಕರ್ ಬಸ್ ವಿಶೇಷತೆಯೇನು ಗೊತ್ತಾ..?
ಈ ಬಾರಿ ಚಾವಣಿ ಮುಚ್ಚಿರುವ ಡಬಲ್ ಡೆಕ್ಕರ್ ಬಸ್ಗಳ ಖರೀದಿಗೆ ಬಿಎಂಟಿಸಿ ಪ್ಲ್ಯಾನ್ ನಡೆಸಿದೆ. ಹೆಚ್ಚಾಗಿ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ಗಳ ಖರೀದಿಗೆ ಒತ್ತು ನೀಡಲಾಗಿದೆ. ಪ್ರತಿ ಬಸ್ಗೆ 2.2 ಕೋಟಿ ವೆಚ್ಚ ತಗಲುವ ಸಾಧ್ಯತೆ ಇದ್ದು, ಪ್ರತಿ ಡಬಲ್ ಡೆಕ್ಕರ್ ಬಸ್ಗಳಲ್ಲಿ 90 ಆಸನಗಳ ಸಾಮರ್ಥ್ಯ ಇರಲಿದೆ. ಇನ್ನು ಹೊರ ವರ್ತುಲಗಳಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ ನಡೆಸಲಿದ್ದು, ಈಗಾಗಲೇ ಡಬಲ್ ಡೆಕ್ಕರ್ ಸಂಚಾರಿಸಬೇಕಾದ ರಸ್ತೆ ಸರ್ವೇಯನ್ನ ಬಿಎಂಟಿಸಿ ನಡೆಸಿದೆ.
ಒಟ್ಟಾರೆ ದಶಕಗಳ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ದಿ ಮೋಸ್ಟ್ ಅಟ್ರ್ಯಾಕ್ಷನ್ ಗೆ ಕಾರಣವಾಗಿದ್ದ ಡಬಲ್ ಡೇಕರ್ ಬಸ್ಗಳು ಮತ್ತೆ ರಸ್ತೆಗಿಳಿಯೋದಕ್ಕೆ ಸಜ್ಜಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ