ಬೆಂಗಳೂರಿನ ಮಂದಿಗೆ ಬಿಎಂಟಿಸಿಯಿಂದ ಗುಡ್‌ನ್ಯೂಸ್
ಇನ್ಮುಂದೆ ರಾತ್ರಿ ಬಸ್ ಇಲ್ಲ ಅನ್ನೋ ಚಿಂತೆ ಬೇಡವೇ ಬೇಡ
ಮಹತ್ವದ ನಿರ್ಧಾರ ಕೈಗೊಂಡ ಸಿಎಂ ಸಿದ್ದರಾಮಯ್ಯ ಸರ್ಕಾರ
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗೋಕೆ ಸಾಕಷ್ಟು ಮಂದಿ ಬಿಎಂಟಿಸಿಯನ್ನೇ ಬಳಸ್ತಾರೆ. ಆದ್ರೆ ಕೆಲವೊಂದಿಷ್ಟು ಜನಕ್ಕೆ ಯಾವ ಬಸ್ ಹತ್ತಬೇಕು ಅನ್ನೋದು ಗೊತ್ತಿರಲ್ಲ. ಲೇಟ್ ಆಗ್ತಿದೆ ಬಸ್ ಎಷ್ಟೊತ್ತಿಗೆ ಬರುತ್ತೋ ಅನ್ನೋ ಟೆನ್ಷನ್ ಬೇರೆ. ಇನ್ಮುಂದೆ ನೀವು ಚಿಂತೆ ಮಾಡೋದು ಬೇಡ. ನಮ್ ಪ್ರಯಾಣಿಕರಿಗೆ ಬಿಎಂಟಿಸಿ ಗುಡ್‌ನ್ಯೂಸ್ ಕೊಟ್ಟಿದೆ.
ಹೌದು! ನೀವು ಇದ್ದಲ್ಲೇ ಬಸ್‌ನ ಸಂಪೂರ್ಣ ಮಾಹಿತಿ ಇನ್ಮುಂದೆ ತಿಳಿಬಹುದು. ನೀವು ಇರೋ ಸ್ಥಳಕ್ಕೆ ಬಸ್ ಎಷ್ಟೊತ್ತಿಗೆ ಬರುತ್ತೆ. ಎಲ್ಲಿಂದ ಎಲ್ಲಿಯವರೆಗೆ ಎಷ್ಟು ಚಾರ್ಜ್ ಆಗುತ್ತೆ ಎಂಬುದು ನಿಮ್ಮ ಮೊಬೈಲ್‌ನಲ್ಲಿ ಗೊತ್ತಾಗುತ್ತೆ. ಇದೇ ಸೆಪ್ಟೆಂಬರ್ 25ಕ್ಕೆ ಬಿಎಂಟಿಸಿ ಸಿಲ್ವರ್ ಜ್ಯುಬಿಲಿ ಇರೋದ್ರಿಂದ ಅವತ್ತೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಮ್ಮ ಬಿಎಂಟಿಸಿ ಆ್ಯಪ್‌ನ ಬಿಡುಗಡೆ ಮಾಡಲಿದ್ದಾರೆ.
ಇನ್ನು, ಬಿಎಂಟಿಸಿ ಕಥೆ ಇದಾದ್ರೆ ನಮ್ಮ ಮೆಟ್ರೋ ಪ್ರಯಾಣಿಕರಿಗೂ ಕೂಡ ಗುಡ್‌ನ್ಯೂಸ್ ಸಿಕ್ಕಿದೆ. ಇಂದು ಜಯನಗರ ಮೆಟ್ರೋ ನಿಲ್ದಾಣದ ಬಳಿ ನೂತನ ಮೆಟ್ರೋ ಮಿತ್ರಾ ಆಟೋ ಸೇವೆಗೆ ಚಾಲನೆ ಸಿಗುತ್ತೆ. ಈ ಆ್ಯಪ್‌ನ ಡೌನ್‌ಲೋಡ್ ಮಾಡೋದು ಬೇಡ. ಅದ್ರ ಬದ್ಲಿಗೆ ಸ್ಕ್ಯಾನರ್‌ನ ಸ್ಕ್ಯಾನ್ ಮಾಡಿದ್ರೆ ಸಾಕು.
ಒಟ್ನಲ್ಲಿ ಜನ್ರಿಗೆ ಅನುಕೂಲ ಆಗ್ಲಿ ನಮ್ಮ ಬಿಎಂಟಿಸಿ ಹಾಗೂ ಮೆಟ್ರೋ ಮಿತ್ರಾ ಆ್ಯಪ್‌ಗೂ ಜಾರಿಗೆ ಬರ್ತಿವೆ. ಇವೆರಡನ್ನು ಕೂಡ ಜನ್ರು ಎಷ್ಟರ ಮಟ್ಟಿಗೆ ಉಪಯೋಗಿಸ್ತಾರೆ ಎಂದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ