newsfirstkannada.com

ಸರಯೂ ನದಿಯಲ್ಲಿ ಬೋಟ್ ಮುಳುಗಿ ದುರಂತ; ಇಬ್ಬರು ಮಹಿಳೆಯರು ಸಾವು, ಹಲವರು ನಾಪತ್ತೆ

Share :

02-11-2023

  ಈಜಿ ಜೀವ ಉಳಿಸಿಕೊಂಡ 9 ಜನರು

  ಬೋಟ್​ನಲ್ಲಿ ಒಟ್ಟು 18 ಪ್ರಯಾಣಿಕರಿದ್ದರು

  ಮುಳುಗಿದವರಿಗಾಗಿ ಮುಂದುವರಿದ ಶೋಧಕಾರ್ಯ

ಬಿಹಾರದ ಸರನ್ ಜಿಲ್ಲೆಯ ಸರಯೂ ನದಿಯಲ್ಲಿ ಬೋಟ್ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಿಬ್ಬರು ಮಹಿಳೆಯರು ಎನ್ನಲಾಗಿದ್ದು, 9 ಮಂದಿ ಈಜಿ ಜೀವ ಉಳಿಸಿಕೊಂಡಿದ್ದಾರೆ.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಇನ್ನೂ ಹಲವು ಮಂದಿ ನದಿ ನೀರಿನಲ್ಲಿ ಮುಳುಗಿದ್ದಾರೆ. ನಿನ್ನೆ ಸಂಜೆ 6.30ರ ಸುಮಾರಿಗೆ 18 ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬೋಟ್ ಮುಳುಗಿದೆ. ಮಾಂಝಿ ಬ್ಲಾಕ್​ನ ಮತಿಯಾರ್ ಘಾಟ್ ಬಳಿ ದುರ್ಘಟನೆ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಅಮನ್ ಸಮೀರ್​ ಮಾಹಿತಿ ನೀಡಿದ್ದಾರೆ.

ನಾಪತ್ತೆ ಆದವರ ರಕ್ಷಣೆಗೆ ಹುಡುಕಾಟ ನಡೆಯುತ್ತಿದೆ. ಇತ್ತೀಚೆಗೆ ನಡೆದ ಎರಡನೇ ಬೋಟ್ ದುರಂತ ಇದಾಗಿದೆ. ಸೆಪ್ಟೆಂಬರ್ 14 ರಂದು ಭಾಗಮತಿಯಲ್ಲಿ ನದಿಯಲ್ಲಿ ಬೋಟ್ ಮುಳುಗಿತ್ತು. ಈ ವೇಳೆ 15 ಮಕ್ಕಳು ನೀರಿನಲ್ಲಿ ಮುಳುಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರಯೂ ನದಿಯಲ್ಲಿ ಬೋಟ್ ಮುಳುಗಿ ದುರಂತ; ಇಬ್ಬರು ಮಹಿಳೆಯರು ಸಾವು, ಹಲವರು ನಾಪತ್ತೆ

https://newsfirstlive.com/wp-content/uploads/2023/11/BIHAR-1.jpg

Load More