ರಾಮ್ ಚರಣ್ ಹೊಸ ಚಿತ್ರದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್!
ಮತ್ತೊಂದು ಹೊಚ್ಚ ಹೊಸ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
ಜಗನ್ ಮೋಹನ್ ರೆಡ್ಡಿ ಆಧಾರಿತ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ರಾಮ್ ಚರಣ್ಗೆ ಜಾಹ್ನವಿ ಹೀರೋಯಿನ್!
RRR ಸ್ಟಾರ್ ರಾಮ್ ಚರಣ್ ಹೊಸ ಚಿತ್ರದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಚಿತ್ರದಲ್ಲಿ ನಟಿಸುತ್ತಿರುವ ರಾಮ್ ಚರಣ್ ಇದಾದ ಬಳಿಕ ಬುಚ್ಚಿಬಾಬು ನಿರ್ದೇಶನದಲ್ಲಿ 16ನೇ ಸಿನಿಮಾ ಮಾಡಲಿದ್ದಾರೆ. ಈ ಚಿತ್ರದಲ್ಲಿ ಮೆಗಾಪುತ್ರನಿಗೆ ಶ್ರೀದೇವಿ ಮಗಳು ಜೋಡಿಯಾಗುವ ಸಾಧ್ಯತೆ ಇದೆಯಂತೆ. ಸ್ಪೆಷಲ್ ಅಂದ್ರೆ ಎಆರ್ ರೆಹಮಾನ್ ಸಂಗೀತ ನೀಡಲಿದ್ದು, ತಮಿಳು ನಟ ವಿಜಯ್ ಸೇತುಪತಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಸಲಾರ್ 2000 ಕೋಟಿ ಗಳಿಸುತ್ತೆ ಎಂದ ನಟ!
ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಸಲಾರ್ ಸಿನಿಮಾ ಬಾಕ್ಸಾಫೀಸ್ನಲ್ಲಿ 2000 ಕೋಟಿ ಗಳಿಸುತ್ತೆ ಅಂತ ಹಾಸ್ಯನಟ ಸಪ್ತಗಿರಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಸಲಾರ್ ಚಿತ್ರದ ಡಬ್ಬಿಂಗ್ ಮುಗಿಸಿದ ಸಪ್ತಗಿರಿ, ಸಲಾರ್ ಸಿನಿಮಾ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಬರೆದಿಟ್ಟುಕೊಳ್ಳಿ ಈ ಚಿತ್ರ 2000 ಕೋಟಿ ಗಳಿಸುತ್ತೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ತಮಿಳು ನಿರ್ಮಾಪಕನ ಚಿತ್ರದಲ್ಲಿ ಕಿಚ್ಚ!
‘ಡೆಮೊನ್’ ಚಿತ್ರದ ನಂತರ ಕಿಚ್ಚ ಸುದೀಪ್ ಮತ್ತೊಬ್ಬ ತಮಿಳು ನಿರ್ಮಾಪಕನೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಸದ್ಯ 46ನೇ ಚಿತ್ರವನ್ನ ತಮಿಳಿನ ಕಲೈಪುಲಿ ಎಸ್ ತನು ನಿರ್ಮಾಣ ಮಾಡ್ತಿದ್ದು, ಇದಾದ ಬಳಿಕ ತಮಿಳು ನಿರ್ದೇಶಕ ವೆಂಕಟ್ ಪ್ರಭು ಜೊತೆ ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ಕಾಲಿವುಡ್ನ ‘ಸತ್ಯಜ್ಯೋತಿ ಫಿಲಂಸ್’ ಸಂಸ್ಥೆ ಬಂಡವಾಳ ಹಾಕಲಿದೆಯಂತೆ. ಕ್ಯಾಪ್ಟನ್ ಮಿಲ್ಲರ್, ವಿಶ್ವಾಸಂ, ವಿವೇಗಂ, ಪಟಾಸ್ ಅಂತಹ ಹಿಟ್ ಚಿತ್ರಗಳನ್ನ ಈ ಸಂಸ್ಥೆ ನಿರ್ಮಿಸಿದೆ.
ಜಗನ್ ಮೋಹನ್ ರೆಡ್ಡಿ ಚಿತ್ರದ ಫಸ್ಟ್ ಲುಕ್
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಜೀವನ ಆಧರಿಸಿ ಸಿನಿಮಾ ತಯಾರಾಗ್ತಿದ್ದು, ಯಾತ್ರಾ 2 ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ರಾಘವ ಮೇಕಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಮೋಷನ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಸದ್ಯಕ್ಕೆ ಜಗನ್ ಪಾತ್ರದಲ್ಲಿ ಯಾರು ನಟಿಸ್ತಾರೆ ಅಂತ ಅಧಿಕೃತವಾಗಿ ರಿವೀಲ್ ಆಗಿಲ್ಲವಾದರೂ, ನಟ ಜೀವಾ ಈ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಇನ್ನು ಮುಂದಿನ ವರ್ಷ ಆಂಧ್ರದಲ್ಲಿ ಜನರಲ್ ಎಲೆಕ್ಷನ್ ಇದ್ದು ಅದಕ್ಕೂ ಮುಂಚೆ ಸಿನಿಮಾ ರಿಲೀಸ್ ಮಾಡುವ ಯೋಜನೆ ಇದೆ.
ಓ ಮೈ ಗಾಡ್ 2 ಝಲಕ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ 2 ಚಿತ್ರದ ಟೀಸರ್ ಜುಲೈ 11ಕ್ಕೆ ರಿಲೀಸ್ ಆಗ್ತಿದೆ. ಇದಕ್ಕೂ ಮುಂಚೆ ಓ ಮೈ ಗಾಡ್ನ ಸಣ್ಣ ಝಲಕ್ ಬಿಡುಗಡೆಯಾಗಿದ್ದು, ಈಶ್ವರನ ಗೆಟಪ್ನಲ್ಲಿ ಅಕ್ಷಯ್ ಕುಮಾರ್ ಸ್ಪೆಷಲ್ ಎಂಟ್ರಿ ಕೊಟ್ಟಿದ್ದಾರೆ. ಅಮಿತ್ ರೈ ಈ ಚಿತ್ರ ನಿರ್ದೇಶಿಸ್ತಿದ್ದು, ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
११.०७.२०२३ 🙏 #OMG2Teaser out on July 11. #OMG2 in theaters on August 11. pic.twitter.com/MlYB0FUo9s
— Akshay Kumar (@akshaykumar) July 9, 2023
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ