newsfirstkannada.com

ಕೆನಡಾ ಪೌರತ್ವ ಪಡೆದ ಅಕ್ಕಿಗೆ ಮನಪರಿವರ್ತನೆ.. ‘ನನಗೆ ಭಾರತವೇ ಸರ್ವಸ್ವ’ ಎಂದ ಅಕ್ಷಯ್ ಕುಮಾರ್

Share :

25-02-2023

    ಕೆನಡಾ ದೇಶದ ಪಾಸ್‌ಪೋರ್ಟ್‌ ತ್ಯಜಿಸುವ ನಿರ್ಧಾರಕ್ಕೆ ಬಂದ ನಟ

    ಕಷ್ಟದ ದಿನಗಳನ್ನು ನೆನೆದು ಭಾವುಕರಾದ ಅಕ್ಷಯ್ ಕುಮಾರ್

    ಕೆನಡಾ ಪೌರತ್ವ ಪಡೆದಿರುವುದಕ್ಕೆ ಕೆಲವರು ಟೀಕಿಸಿದ್ದಾರೆ ಎಂದ ಅಕ್ಕಿ

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್, ಕೆನಡಾ ದೇಶದ ಪಾಸ್‌ಪೋರ್ಟ್‌ ತ್ಯಜಿಸುವ ನಿರ್ಧಾರ ಕೈಗೊಂಡಿದ್ದಾರೆ. ನನಗೆ ಭಾರತವೇ ಎಲ್ಲಾ.. ಹೆಸರು, ಕೀರ್ತಿ ಸಂಪಾದಿಸಿದ್ದೆಲ್ಲವೂ ಭಾರತದಲ್ಲೇ. ಹೀಗಾಗಿ ಪಾಸ್​ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಅಕ್ಷಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಯಾಕೆ ಆಂಟಿ ತರ ಆಗಿದ್ದೀರಿ?- ಡಾರ್ಲಿಂಗ್​​ ಅನುಷ್ಕಾ ವಿರುದ್ಧ ಆಕ್ರೋಶ ಹೊರಹಾಕಿದ ಫ್ಯಾನ್ಸ್​​

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಕ್ಷಯ್ ಕುಮಾರ್, 1990ರ ಅವಧಿಯಲ್ಲಿ ನಾನು ಸಾಕಷ್ಟು ಸಂಕಷ್ಟಗಳನ್ನ ಎದುರಿಸಿದ್ದೆ. ನನ್ನ ಸಿನಿ ಜರ್ನಿಯಲ್ಲಿ 15 ಫ್ಲಾಪ್ ಚಿತ್ರಗಳನ್ನ ಕಂಡಿದ್ದೇನೆ. ನನ್ನ ಸಿನಿಮಾಗಳು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಸೋಲುತ್ತಿದ್ದವು. ಕೊನೆಗೆ ಸೋತು, ಸೋತು ಬೇರೆ ಕೆಲಸ ಹುಡುಕುವ ಸ್ಥಿತಿಗೆ ಬಂದಿದೆ.

ಕೆನಡಾದಲ್ಲಿದ್ದ ನನ್ನ ಸ್ನೇಹಿತನ ಸಹಾಯದಿಂದ ಕೆಲಸ ಹುಡುಕಲು ಹೋಗಿದ್ದೆ. ಆಗಲೇ ನನ್ನ ಎರಡು ಚಿತ್ರಗಳು ಸೂಪರ್ ಹಿಟ್ ಆದವು. ಆಗ ನನ್ನ ಸ್ನೇಹಿತ ವಾಪಸ್ ಭಾರತಕ್ಕೆ ಹೋಗೋ ಸಲಹೆ ಕೊಟ್ಟ. ಭಾರತಕ್ಕೆ ಮರಳಿ ಬಂದ ಮೇಲೆ ನನಗೆ ಮತ್ತಷ್ಟು ಹಿಟ್ ಚಿತ್ರಗಳು ಸಿಕ್ಕಿದವು. ಆಮೇಲೆ ನನ್ನ ಬಳಿ ಕೆನಡಾ ಪಾಸ್‌ಪೋರ್ಟ್‌ ಇರೋದನ್ನೇ ಮರೆತು ಬಿಟ್ಟಿದ್ದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಕೆನಡಾ ಪೌರತ್ವ ಪಡೆದಿರುವುದಕ್ಕೆ ಕೆಲವರು ನನ್ನನ್ನು ಟೀಕಿಸಿದ್ದಾರೆ. ಆ ಮಾತುಗಳನ್ನ ಕೇಳಲು ನನಗೆ ತುಂಬಾ ಬೇಸರವಾಗುತ್ತದೆ. ಹೀಗಾಗಿ ನನ್ನ ಪಾಸ್‌ಪೋರ್ಟ್ ಅನ್ನು ಬದಲಾಯಿಸಲು ಅರ್ಜಿ ಸಲ್ಲಿಸಿದ್ದೇನೆ ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆನಡಾ ಪೌರತ್ವ ಪಡೆದ ಅಕ್ಕಿಗೆ ಮನಪರಿವರ್ತನೆ.. ‘ನನಗೆ ಭಾರತವೇ ಸರ್ವಸ್ವ’ ಎಂದ ಅಕ್ಷಯ್ ಕುಮಾರ್

https://newsfirstlive.com/wp-content/uploads/2023/02/Akshay.jpg

Load More