ರಘು ದೀಕ್ಷಿತ್ ವಿಲನ್ ಆಗಿ ಮಿಂಚಲಿರುವ ಸಿನಿಮಾದ ಹೆಸರು ಬ್ಯಾಂಗ್
ನಟ ಧನ್ವೀರ್ ಗೌಡ ನಟನೆಯ ವಾಮನ ಚಿತ್ರದ ಮೊದಲ ಸಾಂಗ್ ರಿಲೀಸ್
ಕನ್ನಡ ಚಿತ್ರರಂಗಕ್ಕೆ ಮತ್ತೆ ಸುಗ್ಗಿ ಕಾಲ, ಥಿಯೇಟರ್ಗಳತ್ತ ಮುಖ ಮಾಡಿದ ಜನ
ಡಾನ್ ಡ್ಯಾಡಿಯಾಗಿ ರಘು ದೀಕ್ಷಿತ್ ಮಿಂಚು
ಸಂಗೀತ ನಿರ್ದೇಶಕ ಕಮ್ ಗಾಯಕ ರಘು ದೀಕ್ಷಿತ್ ವಿಲನ್ ಆಗಿ ಮಿಂಚಲಿದ್ದಾರೆ. ರಘು ದೀಕ್ಷಿತ್ ವಿಲನ್ ಆಗಿ ಮಿಂಚಲಿರುವ ಸಿನಿಮಾದ ಹೆಸರು ಬ್ಯಾಂಗ್. ಈ ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ರಘು ದೀಕ್ಷಿತ್, ಶಾನ್ವಿ ಶ್ರೀವಾತ್ಸವ್ ನಟನೆಯ ಬ್ಯಾಂಗ್ ಸಿನಿಮಾದ ಟ್ರೈಲರ್ಗೆ ಕಿಚ್ಚ ಸುದೀಪ್ ಹಿನ್ನಲೆ ಧ್ವನಿ ನೀಡೋದ್ರ ಮೂಲಕ ಸಾಥ್ ನೀಡಿದ್ದಾರೆ. ಕಳೆದ ದಿನ ಬ್ಯಾಂಗ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಈ ಚಿತ್ರದಲ್ಲಿ ರಘು ದೀಕ್ಷಿತ್ ವಿಲನ್ ಆಗಿ ನಟಿಸಿರೋದು ವಿಶೇಷ.
ಧನ್ವೀರ್ ನಟನೆಯ ವಾಮನ ಸಾಂಗ್ ರಿಲೀಸ್..
ಬಜಾರ್ ಖ್ಯಾತಿಯ ಧನ್ವೀರ್ ಗೌಡ ನಟನೆಯ ನಿರೀಕ್ಷಿತ ಸಿನಿಮಾ ವಾಮನ ಸಿನಿಮಾದ ಮೊದಲ ಸಾಂಗ್ ಬಿಡುಗಡೆಯಾಗಿದೆ. ವಾಮನ ಚಿತ್ರದಲ್ಲಿ ಧನ್ವೀರ್ ಗೌಡ ಅವರ ಇಂಟ್ರಡಕ್ಷನ್ ಸಾಂಗ್ ಇದಾಗಿದ್ದು ಬಿ.ಅಜನೀಶ್ ಲೋಕನಾಥ್ ಸಂಗೀತ, ಬಹುದ್ದೂರ್ ಚೇತನ್ ಸಾಹಿತ್ಯ ಶಶಾಂಕ್ ಶೇಷ್ ಗಿರಿ ಗಾಯನದಲ್ಲಿ ಹಾಡು ಮೂಡಿಬಂದಿದೆ.
ಲಿಯೋ ಬಳಗದಲ್ಲಿ ಸಂಜಯ್ ದತ್ ಬಿಗ್ ಡಾನ್
ತಮಿಳಿನ ಹೆಸರಾಂತ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ಲಿಯೋ ಸಿನಿಮಾದ ಸಂಜಯ್ ದತ್ ಲುಕ್ ಟೀಸರ್ ಈಗ ಸಖತ್ ವೈರಲ್ ಆಗ್ತಾ ಇದೆ. ಇಳಯ ದಳಪತಿ ವಿಜಯ್ ನಟನೆಯ ಲಿಯೋ ಸಿನಿಮಾದಲ್ಲಿ ವಿಲನ್ ಆಗಿ ಬಿಟೌನ್ ಮುನ್ನಭಾಯ್ ಸಂಜಯ್ ದತ್ ನಟಿಸುತ್ತಿದ್ದು ಕಳೆದ ದಿನ ಸಂಜಯ್ ದತ್ ಬರ್ತ್ಡೇ ಪ್ರಯುಕ್ತವಾಗಿ ಟೀಸರ್ ಒಂದನ್ನ ಬಿಡುಗಡೆ ಮಾಡಿದೆ ಚಿತ್ರತಂಡ. ಗ್ಯಾಂಗ್ ಸ್ಟರ್ ಸಿನಿಮಾಗಳನ್ನ ಮಾಡೋದ್ರಲ್ಲಿ ಲೋಕೇಶ್ ಕನಗರಾಜ್ ಈಗಾಗಲೇ ಹೆಸರುವಾಸಿಯಾಗಿದ್ದು ಸಂಜಯ್ ದತ್ ಪಾತ್ರ ಈಗ ಸಖತ್ ಕ್ಯೂರಿಯಸಿಟಿಯನ್ನ ಬಿಲ್ಡ್ ಮಾಡುತ್ತಾ ಇದೆ.
ಕನ್ನಡ ಚಿತ್ರರಂಗಕ್ಕೆ ಮತ್ತೆ ಸುಗ್ಗಿ ಕಾಲ ಬಂತು..
ಥಿಯೇಟರ್ಗೆ ಪ್ರೇಕ್ಷಕರು ಬರುತ್ತಿಲ್ಲ ಅಂತ ಫಿಲ್ಮ್ ಮೇಕರ್ಸ್ ಬೇಸರ ಮಾಡಿಕೊಂಡಿದ್ದರು. ಸ್ಯಾಂಡಲ್ವುಡ್ ಪ್ರೇಕ್ಷಕರು ಒಳ್ಳೆಯ ಸಿನಿಮಾಕ್ಕಾಗಿ ಎದುರು ನೋಡುತ್ತಾ ಇದ್ದರು. ಈಗ ಕೊನೆಗೂ ಸ್ಯಾಂಡಲ್ವುಡ್ಗೆ ಸುಗ್ಗಿ ಕಾಲ ಮತ್ತೆ ಶುರುವಾಗಿದೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಮತ್ತು ಕೌಸಲ್ಯ ಸುಪ್ರಜಾ ರಾಮ ಸಿನಿಮಾಗಳಿಗಾಗಿ ಜನರು ಥಿಯೇಟರ್ ದಾರಿ ಹಿಡಿದಿದ್ದು ಉತ್ತಮ ಗಳಿಕೆ ಮತ್ತು ಪ್ರಶಂಸೆಯನ್ನು ಈ ಎರಡು ಸಿನಿಮಾಗಳು ಪಡೆದುಕೊಳ್ಳುತ್ತಿವೆ.
ಕೊನೆಗೂ ಶೂಟಿಂಗ್ ಸೆಟ್ಗೆ ಕಿಚ್ಚ ಸುದೀಪ್ ಎಂಟ್ರಿ
ಕಿಚ್ಚ @46 ಡಿಮೋನ್ ಸಿನಿಮಾದ ಟೀಸರ್ ಬಿಟ್ಟು ಸದ್ದು ಗದ್ದಲ್ಲ ಮಾಡಿದ್ದ ಕಿಚ್ಚ ಸುದೀಪ್ ಈಗ ಶೂಟಿಂಗ್ ಸೆಟ್ ಕಡೆ ಮುಖ ಮಾಡಿದ್ದಾರೆ. ಕಬಾಲಿ ಖ್ಯಾತಿಯ ನಿರ್ಮಾಪಕ ಕಲೈಪುಲಿ ಎಸ್ ಥಾನು ನಿರ್ಮಾಣದಲ್ಲಿ ಯುವ ಪ್ರತಿಭೆ ವಿಜಯ್ ನಿರ್ದೇಶನದಲ್ಲಿ ಸುದೀಪ್ ಅವರ ಮುಂದಿನ ಸಿನಿಮಾ ಮೂಡಿಬರಲಿದ್ದು, ಇಂದಿನಿಂದ ಚೆನ್ನೈನಲ್ಲಿ ಶೂಟಿಂಗ್ ಪ್ರಾರಂಭವಾಗಿದೆ. ಶೂಟಿಂಗ್ಗೆ ತೆರಳುವ ಮುನ್ನ ಕಳೆದ ದಿನ ತಿರುಪತಿಗೆ ಭೇಟಿ ಕೊಟ್ಟು ದೇವರ ದರ್ಶನ ಪಡೆದಿದ್ದರು ಸುದೀಪ್.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ