newsfirstkannada.com

VIDEO: ಜವಾನ್‌ ಸಕ್ಸಸ್‌ಗೆ ತಿಮ್ಮಪ್ಪನ ಮೊರೆ ಹೋದ ಬಾಲಿವುಡ್ ಬಾದ್ ಷಾ ಶಾರುಖ್‌ ಖಾನ್‌

Share :

05-09-2023

    ಬೆಳ್ಳಂಬೆಳಗ್ಗೆ ತಿಮ್ಮಪ್ಪನ ದರ್ಶನ ಪಡೆದ ಜವಾನ್ ಚಿತ್ರತಂಡ

    ಜವಾನ್ ಸಿನಿಮಾ ಬಿಡುಗಡೆಗೆ ಇನ್ನು ಎರಡೇ ದಿನ ಬಾಕಿ

    ಅಟ್ಲಿ ತಾಯಿಗೆ ಶಾರುಖ್ ಖಾನ್ ನಮಸ್ಕರಿಸಿದ ವಿಡಿಯೋ ವೈರಲ್

ತಿರುಪತಿ: ಬಾಲಿವುಡ್ ನಟ ಶಾರುಖ್ ಖಾನ್ ಅಭಿಮಾನಿಗಳು ಜವಾನ್ ಸಿನಿಮಾವನ್ನ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದೇ ಸೆಪ್ಟೆಂಬರ್ 7ರಂದು ಜವಾನ್ ಸಿನಿಮಾ ಜಗತ್ತಿನಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಜವಾನ್ ರಿಲೀಸ್‌ಗೂ ಮುನ್ನ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರೋ ನಟ ಶಾರುಖ್ ಖಾನ್ ಇಂದು ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ರಿಲೀಸ್​ಗೆ ಮುನ್ನವೇ ಬಾಹುಬಲಿ ದಾಖಲೆ ಮುರಿಯುತ್ತಾ ಶಾರುಖ್​​ ಜವಾನ್​ ಸಿನಿಮಾ..? ಏನದು..?

ಬೆಳ್ಳಂಬೆಳಗ್ಗೆ ಜವಾನ್ ಚಿತ್ರತಂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದೆ. ನಟ ಶಾರುಖ್ ಖಾನ್, ಅವರ ಪುತ್ರಿ ಸುಹಾನ್ ಖಾನ್, ನಟಿ ನಯನಾ ತಾರಾ ದಂಪತಿ ಇಂದು ತಿರುಮಲಕ್ಕೆ ಭೇಟಿ ಕೊಟ್ಟಿದ್ರು. ತಿಮ್ಮಪ್ಪನ ದರ್ಶನ ಪಡೆದು ಬಂದ ಶಾರುಖ್ ಖಾನ್ ಅಭಿಮಾನಿಗಳತ್ತ ಕೈ ಬೀಸಿ ತೆರಳಿದರು. ಜವಾನ್ ಸಿನಿಮಾ ಬಿಡುಗಡೆಗೆ ಎರಡೇ ದಿನ ಬಾಕಿ ಇರುವಂತೆ ಇಡೀ ಚಿತ್ರತಂಡ ತಿರುಪತಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದೆ.

ಶಾರುಖ್​ ಖಾನ್​ ನಟನೆಯ ಜವಾನ್ ಚಿತ್ರ ಇದೇ ಶುಕ್ರವಾರ ತೆರೆ ಮೇಲೆ ಸಜ್ಜಾಗಿದೆ. ಈ ನಡುವೆ ಚೆನ್ನೈನಲ್ಲಿ ಜವಾನ್​ ಚಿತ್ರದ ಟ್ರೇಲರ್​ ಬಿಡುಗಡೆ ವೇಳೆ ಶಾರುಖ್​ ಖಾನ್​ ನಡೆದುಕೊಂಡ ರೀತಿ ಅಭಿಮಾನಿಗಳ ಮನಸ್ಸು ಗೆದ್ದಿದೆ. ಜವಾನ್​ ಚಿತ್ರದ ನಿರ್ದೇಶಕ ಅಟ್ಲಿ ತನ್ನ ತಾಯಿಯೊಂದಿಗೆ ವೇದಿಕೆಗೆ ಬಂದಿದ್ದಾರೆ. ಈ ವೇಳೆ ಶಾರುಖ್​ ಖಾನ್​ ಕೈ ಮುಗಿದು ತಾಯಿಯ ಆಶೀರ್ವಾದ ಪಡೆದಿದ್ದಾರೆ. ಆ ಬಳಿಕ ವೇದಿಕೆ ಮೇಲಿದ್ದ ನಟಿ ಕೂಡ ಅಟ್ಲಿ ತಾಯಿಗೆ ಕೈ ಮುಗಿದಿದ್ದಾರೆ. ಶಾರುಖ್ ಖಾನ್ ಕೈ ಮುಗಿದು ನಮಸ್ಕರಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಜವಾನ್‌ ಸಕ್ಸಸ್‌ಗೆ ತಿಮ್ಮಪ್ಪನ ಮೊರೆ ಹೋದ ಬಾಲಿವುಡ್ ಬಾದ್ ಷಾ ಶಾರುಖ್‌ ಖಾನ್‌

https://newsfirstlive.com/wp-content/uploads/2023/09/Sharukh-Khan.jpg

Load More