ಮುಂಬೈನ ಜುಹು ಬಂಗಲೆಯನ್ನು ಹರಾಜಿಗೆ ಇಟ್ಟ ಬ್ಯಾಂಕ್
ಸಾಲ ಮರುಪಾವತಿ ಮಾಡದ ಕಾರಣ ಮನೆ ಹರಾಜು ಮಾಡಲು ಮುಂದಾಗಿತ್ತು
ಸೆಪ್ಟೆಂಬರ್ 25ರಂದು ಮನೆ ಹರಾಜು ಪ್ರಕ್ರಿಯೆ ನಡೆಸುವುದಾಗಿ ಹೇಳಿತ್ತು
ಬಾಲಿವುಡ್ ನಟ ಸನ್ನಿ ಡಿಯೋಲ್ ಮನೆ ಮೇಲೆ ಸಾಲ ತೆಗೆದುಕೊಂಡಿದ್ದರು. ಮುಂಬೈನ ಜುಹು ಬಂಗಲೆಯ ಮೇಲೆ 56 ಕೋಟಿ ರೂಪಾಯಿಯನ್ನು ಬ್ಯಾಂಕ್ ಆಪ್ ಬರೋಡಾದ ಮೂಲಕ ಸಾಲ ಪಡೆದುಕೊಂಡಿದ್ದರು. ಆದರೆ ಸಾಲ ಮರುಪಾವತಿಸದ ಹಿನ್ನಲೆ ಬ್ಯಾಂಕ್ ನಟನ ಮನೆಯನ್ನು ಹರಾಜಿಗೆ ಇಟ್ಟಿತ್ತು. ಈ ಬಗ್ಗೆ ಜಾಹೀರಾತನ್ನು ನೀಡಿತ್ತು. ಆದರೀಗ ಅದೇ ಬ್ಯಾಂಕ್ ಮನೆ ಹರಾಜಿನ ನೋಟೀಸ್ ಅನ್ನು ಹಿಂಪಡೆದಿದೆ. ತಾಂತ್ರಿಕ ಕಾರಣಗಳ ಹಿನ್ನಲೆಯಲ್ಲಿ ಮನೆ ಹರಾಜಿನ ನೋಟೀಸ್ ಅನ್ನು ವಾಪಸ್ ಪಡೆದುಕೊಂಡಿದೆ.
ಬ್ಯಾಂಕ್ ಆಫ್ ಬರೋಡಾಗೆ ಸನ್ನಿ ಡಿಯೋಲ್ 56 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕಿತ್ತು. ಆದರೆ ಸಾಲ ಮರುಪಾವತಿಸದೇ ಇರೋ ಕಾರಣ ಸೆಪ್ಟೆಂಬರ್ 25 ರಂದು ಮನೆಯನ್ನು ಹರಾಜು ಹಾಕುವುದಾಗಿ ಬ್ಯಾಂಕ್ ಜಾಹೀರಾತು ನೀಡಿತ್ತು.
ಇನ್ನು ಈ ಬಗ್ಗೆ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಮಾತನಾಡಿದ್ದು, ಯಾರ ಕಾರಣದಿಂದ ಮನೆ ಹರಾಜಿನ ನೋಟೀಸ್ ವಾಪಸ್ ಪಡೆಯಲಾಯ್ತು ಎಂಬುದು ಅಚ್ಚರಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಅಂದಹಾಗೆಯೇ ಸನ್ನಿ ಡಿಯೋಲ್ ಅಭಿನಯದ ಗದ್ದರ್-2 ಸಿನಿಮಾ ಬಿಡುಗಡೆಗೊಂಡು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಇದರ ನಡುವೆ ಸನ್ನಿ ಡಿಯೋಲ್ ಮನೆ ಹರಾಜಿಗೆ ಬಂದು ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಬೇಗನೇ 56 ಕೋಟಿ ರೂಪಾಯಿ ಬ್ಯಾಂಕ್ ಸಾಲ ಮರುಪಾವತಿ ಮಾಡಿದರೆ ಮನೆಯನ್ನು ಹಿಂತಿರುಗಿ ಪಡೆಯಬಹುದು ಎಂದು ಹೇಳಲಾಗಿತ್ತು. ಆದರೆ ಈ ಮಾತುಗಳ ನಡುವೆ ಬ್ಯಾಂಕ್ ಆಫ್ ಬರೋಡಾ ತಾನು ಹೊರಡಿಸಿದ್ದ ಹರಾಜು ಜಾಹೀರಾತನ್ನು ಹಿಂಪಡೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ