newsfirstkannada.com

ಬಾಲಿವುಡ್ ನಟನಿಗೆ ಭಾರೀ ದೋಖಾ.. ವಿವೇಕ್ ಒಬೆರಾಯ್​ಗೆ ನಂಬಿಸಿ ₹1.55 ಕೋಟಿ ವಂಚಿಸಿದ ಆರೋಪಿಗಳು

Share :

22-07-2023

    ಸಿನಿಮಾ ಮಾಡುವ ನೆಪದಲ್ಲಿ ಬಂದು ವಿವೇಕ್ ಒಬೆರಾಯ್​ಗೆ ಮೋಸ

    ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ರೆ ಆದಾಯ ದುಪ್ಪಟ್ಟು ಗಳಿಸಬಹುದು

    ವಿವೇಕ್ ಒಬೆರಾಯ್​ರನ್ನ ನಂಬಿಸಿ ಹಣ ಪಡೆದು ಸ್ವಂತಕ್ಕೆ ಉಪಯೋಗ

ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರಿಗೆ ಮೂವರು ದುಷ್ಕರ್ಮಿಗಳು ಸೇರಿ 1.55 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ. ಸಿನಿಮಾ ನಿರ್ಮಾಣ ಹಾಗೂ ಈವೆಂಟ್​ಗಳಲ್ಲಿ ಹಣ ಹೂಡಿಕೆ ಮಾಡಿದರೆ ಒಳ್ಳೆಯ ಆದಾಯ ಗಳಿಸಬಹುದೆಂದು ವಿವೇಕ್ ಒಬೆರಾಯ್​ರನ್ನ ನಂಬಿಸಿ 1.55 ಕೋಟಿ ರೂ.ಗಳನ್ನು ಪಡೆದು ಮೂವರು ಆರೋಪಿಗಳು ವಂಚನೆ ಎಸಗಿದ್ದಾರೆ ಎನ್ನಲಾಗಿದೆ.

ವಿವೇಕ್ ಒಬೆರಾಯ್ ಅವರ ಬಳಿಗೆ ಬಂದಿದ್ದ ಮೂವರು ಆರೋಪಿಗಳ ಪೈಕಿ ಒಬ್ಬ ನಿರ್ಮಾಪಕ ಕೂಡ ಇದ್ದನು. ಸಿನಿಮಾ ನಿರ್ಮಾಣ ಹಾಗೂ ಈವೆಂಟ್​ಗಳಲ್ಲಿ ಹಣ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಪಡೆಯಬಹುದು. ಇದರಿಂದ ಗರಿಷ್ಠ ಆದಾಯ ಗಳಿಸಬಹುದೆಂದು ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಲು ಕೇಳಿದ್ದರು. ಇದಕ್ಕೆ ಒಪ್ಪಿದ್ದ ನಟ 1 ಕೋಟಿ 55 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು. ಇದರಲ್ಲಿ ಒಬೆರಾಯ್ ಪತ್ನಿಯ ಪಾಲು ಕೂಡ ಇತ್ತು ಎನ್ನಲಾಗಿದೆ.

ಆದರೆ ಈ ಹಣ ಪಡೆದ ಆರೋಪಿಗಳು ಯಾವುದೇ ಸಿನಿಮಾ ಅಥವಾ ಈವೆಂಟ್​ಗಳನ್ನು ಮಾಡದೇ ಬದಲಿಗೆ ತಮ್ಮ ಸ್ವಂತ ವ್ಯವಹಾರ, ಖರ್ಚಿಗೆ ನಟನ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಆ ಬಳಿಕ ನಟ ಈ ಬಗ್ಗೆ ವಿಚಾರಿಸಿದಾಗ ಕೈಗೆ ಸಿಗದಂತೆ ಓಡಾಡುತ್ತಿದ್ದರು.

ಹೀಗಾಗಿ ವಿವೇಕ್ ಒಬೆರಾಯ್ ಅವರ ಚಾರ್ಟರ್ಡ್ ಅಕೌಂಟೆಂಟ್ ಸಿಬ್ಬಂದಿ ಮುಂಬೈನ ಪೂರ್ವ ಭಾಗದಲ್ಲಿ ಬರುವ ಅಂಧೇರಿ ಪೊಲೀಸ್ ಠಾಣೆಯಲ್ಲಿ ವಂಚನೆ ಮಾಡಿದ ಮೂವರ ವಿರುದ್ಧ ಕೇಸ್​ ದಾಖಲು ಮಾಡಿದ್ದಾರೆ. ಸೆಕ್ಷನ್​ 34 ಸಾಮಾನ್ಯ ಉದ್ದೇಶ, ಸೆಕ್ಷನ್ 409 ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ​, 419, 420 ವ್ಯಕ್ತಿತ್ವದಿಂದ ಮೋಸ, ವಂಚನೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಬಾಲಿವುಡ್ ನಟನಿಗೆ ಭಾರೀ ದೋಖಾ.. ವಿವೇಕ್ ಒಬೆರಾಯ್​ಗೆ ನಂಬಿಸಿ ₹1.55 ಕೋಟಿ ವಂಚಿಸಿದ ಆರೋಪಿಗಳು

https://newsfirstlive.com/wp-content/uploads/2023/07/Vivek_Oberoi.jpg

Load More