Advertisment

DeepikaPadukone: ಕೊನೆಗೂ ಆಸೆ ಈಡೇರಿಸಿಕೊಂಡ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ; ಏನದು?

author-image
admin
Updated On
ದೀಪಿಕಾ ಕಪ್ಪು ಬಣ್ಣದ ಗೌನ್​ ಧರಿಸಿದ್ದೇಕೆ? ಏನಿದರ ಸ್ಪೆಷಲ್‌? ಬೆಲೆ ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!
Advertisment
  • ಮದುವೆಯಾದ 5 ವರ್ಷದ ಬಳಿಕ ತಾಯಿಯಾದ ನಟಿ ದೀಪಿಕಾ
  • ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಆಸೆ ಏನಾಗಿತ್ತು?
  • ದೀಪಿಕಾ ಪಡುಕೋಣೆ, ರಣವೀರ್ ಜೋಡಿಗೆ ಶುಭಾಶಯಗಳ ಮಹಾಪೂರ

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅಮ್ಮ ಆಗಿದ್ದಾರೆ. ಮುಂಬೈನ ಪ್ರತಿಷ್ಠಿತ ಹೆಚ್​ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ.

Advertisment

ದೀಪಿಕಾ ಪಡುಕೋಣೆ ಅವರು ಹೆಣ್ಣು ಮಗುವಿನ ತಾಯಿ ಆಗಿರುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಅಭಿಮಾನಿಗಳು ಕಂಗ್ರಾಟ್ಸ್ ಹೇಳಿ ಶುಭಾಶಯ ಕೋರುತ್ತಿದ್ದಾರೆ. ಬಾಲಿವುಡ್‌ಗೆ ಜೂನಿಯರ್ ದೀಪಿಕಾ ಪಡುಕೋಣೆ ಎಂಟ್ರಿ ಕೊಟ್ಟಿರೋದು ಸಂತಸ ತಂದಿದೆ.

ಇದನ್ನೂ ಓದಿ: DeepikaPadukone: ಫ್ಯಾನ್ಸ್​ಗೆ ಖುಷಿ ಸುದ್ದಿ.. ಮುದ್ದಾದ ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ! 

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಜೋಡಿ ನವೆಂಬರ್ 14, 2018ರಲ್ಲಿ ಮದುವೆ ಆಗಿದ್ದರು. 2024ರ ಫೆಬ್ರವರಿಯಲ್ಲಿ ದೀಪಿಕಾ ಪಡುಕೋಣೆ ತಾಯಿಯಾಗುತ್ತಿರುವ ಗುಡ್‌ನ್ಯೂಸ್ ಅನ್ನು ಹಂಚಿಕೊಂಡಿದ್ದರು. ದೀಪಿಕಾ ಪಡುಕೋಣೆ, ರಣವೀರ್ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.

Advertisment

publive-image

ಗರ್ಭಿಣಿಯಾಗಿದ್ದ ದೀಪಿಕಾ ಪಡುಕೋಣೆ ಅವರು ಪ್ರಭಾಸ್ ಅಭಿನಯದ ಕಲ್ಕಿ AD 2898 ಸಿನಿಮಾದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು. ನಿನ್ನೆ ಮಧ್ಯಾಹ್ನ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಮುಂಬೈನ ಹೆಚ್​ಎನ್ ರಿಲಯನ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದೀಗ ಬಂದ ಸುದ್ದಿ ಪ್ರಕಾರ ದೀಪಿಕಾ ಪಡುಕೋಣೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗಳು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.

publive-image

ದೀಪಿಕಾ ಪಡುಕೋಣೆ ಆಸೆ ಏನಾಗಿತ್ತು?
ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಅವರು ಮದುವೆಯಾದ 5 ವರ್ಷದ ಬಳಿಕ ತಾಯಿ ಪಟ್ಟ ಅಲಂಕರಿಸಿದ್ದಾರೆ. ಈ ಹಿಂದೆ ಕರಣ್ ಜೋಹರ್ ಅವರ ಕಾಫಿ ವಿಥ್ ಕರಣ್ ಶೋನಲ್ಲಿ ದೀಪಿಕಾ ಪಡುಕೋಣೆ ತಾಯಿಯಾಗುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.

ಇದನ್ನೂ ಓದಿ: ಡಿಫರೆಂಟ್‌ ಥೀಮ್‌ನಲ್ಲಿ ಬೇಬಿ ಬಂಪ್ಸ್‌ ಫೋಟೋ ಶೂಟ್ ಮಾಡಿದ ದೀಪಿಕಾ ಪಡುಕೋಣೆ; ಫುಲ್‌ ವೈರಲ್‌! 

Advertisment

ಕರಣ್ ಜೋಹರ್‌ ರಾಪಿಡ್ ಫೈರ್ ಪ್ರಶ್ನೆಯಲ್ಲಿ ದೀಪಿಕಾ ಪಡುಕೋಣೆಗೆ ಒಂದು ಪ್ರಶ್ನೆ ಕೇಳಿದ್ದರು. ದೀಪಿಕಾ ನಿಮಗೆ ಮಕ್ಕಳು ಬೇಕಾ? ಬಾಲಿವುಡ್ ಚಿತ್ರಗಳು ಬೇಕಾ ಎಂದು ಕೇಳಲಾಗಿತ್ತು. ಕರಣ್ ಜೋಹರ್ ಪ್ರಶ್ನೆಗೆ ಸ್ಮಾರ್ಟ್‌ ಆಗಿ ಉತ್ತರಿಸಿದ್ದ ದೀಪಿಕಾ ಪಡುಕೋಣೆ ನಾನು ಎರಡನ್ನೂ ಆಯ್ಕೆ ಮಾಡಿಕೊಳ್ಳುತ್ತೇನೆ. ನನ್ನ ಮಕ್ಕಳ ಜೊತೆ ಸಿನಿಮಾಗಳನ್ನು ಮಾಡುತ್ತೇನೆ ಎಂದಿದ್ದಾರೆ. ದೀಪಿಕಾ ಪಡುಕೋಣೆ ಅವರು ತಮ್ಮ ಬದುಕಿನ ಮಹದಾಸೆಯಂತೆ ಈಗ ತಾಯಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment