ಮೊಹ್ಸಿನ್ ಅಖ್ತರ್ ಮಿರ್ ಜೊತೆ ಮದುವೆಯಾಗಿದ್ದ ನಟಿ ಊರ್ಮಿಳಾ
ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾಗೆ ಮಾತ್ರ ಗೊತ್ತಿದ್ದ ಮದುವೆ
42ನೇ ವಯಸ್ಸಿಗೆ ಮದುವೆಯಾಗಿದ್ದ ಊರ್ಮಿಳಾ ಗಂಡ, ಮಕ್ಕಳ ಬಗ್ಗೆ ಹೇಳಿದ್ದೇನು?
ಮುಂಬೈ: ಬಾಲಿವುಡ್‌ನಲ್ಲಿ ಬಿಗ್ ಸ್ಟಾರ್ಸ್ ಡಿವೋರ್ಸ್ ಅನ್ನೋದು ಹೊಸದೇನಲ್ಲ. ಸೆಲೆಬ್ರಿಟಿಗಳ ಬ್ರೇಕ್ ಅಪ್ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇರುತ್ತೆ. ಈ ಸಾಲಿಗೆ ಇದೀಗ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಸೇರ್ಪಡೆಯಾಗಿದ್ದಾರೆ. ರಂಗೀಲಾ ಖ್ಯಾತಿಯ ಬಾಲಿವುಡ್ ಬೆಡಗಿ ಊರ್ಮಿಳಾ ತಮ್ಮ ವೈವಾಹಿಕ ಬದುಕಿಗೆ ಗುಡ್‌ಬೈ ಹೇಳಲು ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: ಸ್ನಾನ ಮಾಡದ ಗಂಡನಿಗೆ ಡಿವೋರ್ಸ್.. 40 ದಿನದ ನವವಿವಾಹಿತೆ ನಿರ್ಧಾರಕ್ಕೆ ಎಲ್ರೂ ಶಾಕ್; ಅಸಲಿಗೆ ಆಗಿದ್ದೇನು?
ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ವರಿಸಿದ್ದರು. ಊರ್ಮಿಳಾ ಅವರು ತಮ್ಮ 42ನೇ ವಯಸ್ಸಿನಲ್ಲಿ ಗುಟ್ಟಾಗಿ ಮದುವೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಮದುವೆಯಾದ 8 ವರ್ಷಕ್ಕೆ ಈ ಸ್ಟಾರ್ ಜೋಡಿ ದಾಂಪತ್ಯ ಬದುಕು ಮುರಿದು ಬಿದ್ದಿದೆ.
ಮೂಲಗಳ ಪ್ರಕಾರ ಈಗಾಗಲೇ ಊರ್ಮಿಳಾ ಅವರು ತಮ್ಮ ಪತಿಯಿಂದ ಡಿವೋರ್ಸ್‌ಗೆ ಅರ್ಜಿ ಹಾಕಿದ್ದರು. ಈಗಾಗಲೇ ಅದಕ್ಕೆ ಅನುಮತಿಯೂ ಸಿಕ್ಕಿದೆ ಎನ್ನಲಾಗಿದೆ. ಇಡೀ ಬಾಲಿವುಡ್‌ಗೆ ಊರ್ಮಿಳಾ ಅವರ ಮದುವೆ ಒಂದು ಸರ್‌ಪ್ರೈಸ್ ಆದ್ರೆ ಅವರ ಡಿವೋರ್ಸ್ ಸುದ್ದಿ ಕೂಡ ಅಷ್ಟೇ ಶಾಕಿಂಗ್ ನ್ಯೂಸ್ ಆಗಿದೆ.
ಇದನ್ನೂ ಓದಿ: ಡಿವೋರ್ಸ್ ಕೇಳಿದ ದಂಪತಿಗೆ ಗವಿಸಿದ್ದೇಶ್ವರ ಮಠಕ್ಕೆ ಹೋಗಿ ಬನ್ನಿ ಎಂದ ಜಡ್ಜ್.. ಆಮೇಲೇನಾಯ್ತು?
42 ವರ್ಷಕ್ಕೆ ಮೊಹ್ಸಿನ್ ಅಖ್ತರ್ ಮಿರ್ ಜೊತೆ ಗುಟ್ಟಾಗಿ ಮದುವೆಯಾಗಿದ್ದ ಊರ್ಮಿಳಾ ಅವರು ತನ್ನ 50ನೇ ವರ್ಷಕ್ಕೆ ಏಕಾಂಗಿಯಾಗಿದ್ದಾರೆ. ಡಿವೋರ್ಸ್ ಬಗ್ಗೆ ಇಬ್ಬರಲ್ಲೂ ಪರಸ್ಪರ ಒಪ್ಪಿಗೆ ಮೂಡಿಲ್ಲ. ಹೀಗಾಗಿ ಇನ್ನೂ ಕೆಲವೊಂದು ಕಾನೂನು ಪ್ರಕ್ರಿಯೆಗಳು ಬಾಕಿ ಉಳಿದಿವೆ. ಊರ್ಮಿಳಾ ಅವರು ಈಗಾಗಲೇ ತನ್ನ ಪತಿಯಿಂದ ದೂರವಾಗಿದ್ದು ಅಧಿಕೃತವಾಗಿ ಡಿವೋರ್ಸ್ ಸುದ್ದಿಯನ್ನು ಪ್ರಕಟ ಮಾಡುವ ಸಾಧ್ಯತೆ ಇದೆ.
ಊರ್ಮಿಳಾ ಡಿವೋರ್ಸ್‌ಗೆ ಕಾರಣವೇನು?
ಇವರಿಬ್ಬರ ಸೀಕ್ರೆಟ್ ಮದುವೆಗೆ ಬಾಲಿವುಡ್ ಸೆಲೆಬ್ರಿಟಿ ಡಿಸೈನರ್ ಆದ ಮನೀಶ್ ಮಲ್ಹೋತ್ರಾ ಮಾತ್ರವೇ ಹಾಜರಿದ್ದರು. ಅಷ್ಟೇ ಅಲ್ಲ ಊರ್ಮಿಳಾ ಅವರು ತಮ್ಮ ಪತಿ ಮೊಹ್ಸಿನ್ ಅಖ್ತರ್ ಮಿರ್ ಅವರು 10 ವರ್ಷ ದೊಡ್ಡವರಾಗಿದ್ದರು. ಈ ವಯಸ್ಸಿನ ಅಂತರವೇ ಇವರಿಬ್ಬರ ಮಧ್ಯೆ ದಾಂಪತ್ಯ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಹಿಂದೆಯೇ ಊರ್ಮಿಳಾ ಅವರು ತಮ್ಮ ಸಂದರ್ಶನದಲ್ಲಿ ತಮ್ಮ ದಾಂಪತ್ಯದ ಬಗ್ಗೆ ಮುಕ್ತವಾದ ಮಾತುಗಳನ್ನಾಡಿದ್ದರು. ಮದುವೆಯಾಗಿ ಎಷ್ಟೋ ವರ್ಷಗಳಾದ್ರೂ ಊರ್ಮಿಳಾ ಅವರಿಗೆ ಮಕ್ಕಳಾಗಿರಲಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಊರ್ಮಿಳಾ ಅವರು ಇನ್ನು ಹೆಚ್ಚು ದಿನ ಈ ಸಂಬಂಧ ಮುಂದುವರಿಯುವುದಿಲ್ಲ. ಪ್ರತಿಯೊಬ್ಬ ಮಹಿಳೆಯು ತಾಯಿಯಾಗುವ ಅನಿವಾರ್ಯತೆ ಇಲ್ಲ ಎಂದಿದ್ದರು. ನನಗೆ ಮಕ್ಕಳಂದ್ರೆ ತುಂಬಾ ಇಷ್ಟ ಆದ್ರೆ ತಾಯಿತನಕ್ಕೆ ಸರಿಯಾದ ಕಾರಣಗಳು ಇರಬೇಕು ಎಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ