newsfirstkannada.com

ಘೂಮರ್ ಸಿನಿಮಾ ಟ್ರೈಲರ್​ಗೆ ಕ್ರಿಕೆಟ್​ ಲೋಕ ಫಿದಾ.. ಈ ಬಗ್ಗೆ ಗಂಗೂಲಿ, ಸೆಹ್ವಾಗ್ ಹೇಳಿದ್ದೇನು?

Share :

08-08-2023

    ಬಲಗೈ ಇಲ್ಲದ ಆಟಗಾರ್ತಿಯ ಸಾಹಸಮಯ ಕಥೆ

    ಬಾಕ್ಸ್​ ಆಫೀಸ್​​ನಲ್ಲೂ ಧೂಳೆಬ್ಬಿಸುತ್ತಾ ಘೂಮರ್?

    'ಘೂಮರ್'​​​​​​​​ಗೆ ದಿಗ್ಗಜ ಕ್ರಿಕೆಟರ್ಸ್​ ಉಘೇ ಉಘೇ

ಕ್ರಿಕೆಟ್​​ ಲೋಕದಲ್ಲಿ ಒಂದು ಸಿನಿಮಾ ಟ್ರೈಲರ್​​ ಸಖತ್​ ಸೌಂಡ್​ ಮಾಡ್ತಿದೆ. ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟರ್ಸ್​ ಕೂಡ ಈ ಟ್ರೈಲರ್​ಗೆ ಬೋಲ್ಡ್ ಆಗಿದ್ದಾರೆ. ದಿಗ್ಗಜ ಕ್ರಿಕೆಟಿಗರನ್ನ ಇಂಪ್ರೆಸ್​ ಮಾಡಿರೋ ಸಿನಿಮಾದ ಕಥೆ ಸಖತ್ತಾಗಿದೆ. ಆ ಸಿನಿಮಾ ಯಾವುದು.? ಕಥೆ ಏನು.?

ಎಂ.ಎಸ್ ಧೋನಿ ದಿ ಅನ್​ಟೋಲ್ಡ್ ಸ್ಟೋರಿ, ಸಚಿನ್​ ಎ ಬಿಲಿಯನ್ ಡ್ರೀಮ್ಸ್​​​ ಹಾಗೂ ಅಝರ್​​​. ಕ್ರಿಕೆಟ್ ಆಟ​ ಆಧಾರಿತ ಈ 3 ಬಯೋಪಿಕ್​ ಚಿತ್ರಗಳು ಬಾಲಿವುಡ್​​​ನಲ್ಲಿ ಧೂಳೆಬ್ಬಿಸಿದ್ದವು. ವಿಶ್ವ ವಿಜಯದ ಹೆಮ್ಮೆಯ ಕ್ಷಣಗಳನ್ನ ರಿಕ್ರಿಯೇಟ್​ ಮಾಡಿದ್ದ 83 ವಿಶ್ವಕಪ್​ ಚಿತ್ರವಂತೂ ಇಡೀ ಭಾರತದ ಮನ ಗೆದ್ದಿತ್ತು.

ಘೂಮರ್ ಸಿನಿಮಾ ಪೋಸ್ಟರ್

ಈ ಎಲ್ಲ ಚಿತ್ರಗಳು ಬಾಲಿವುಡ್​​ ಅಂಗಳದಲ್ಲಿ ಸಕ್ಸಸ್​ ಕಂಡಿವೆ. ಎಂ.ಎಸ್​ ಧೋನಿ ದಿ ಅನ್​ ಟೋಲ್ಡ್​ ಸ್ಟೋರಿ ಹಾಗೂ 83 ಸಿನಿಮಾಗಳು ಸೂಪರ್​​ ಡೂಪರ್​​​ ಹಿಟ್ ಆಗಿದ್ವು. ಈಗ ಮತ್ತೊಂದು ಕ್ರಿಕೆಟ್​​​​ ಬೇಸ್ಡ್​​ ಚಿತ್ರ ಬಿಟೌನ್​ನಲ್ಲಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಅದೇ ಘೂಮರ್​​​​.

ಬಾಲಿವುಡ್​​​ ಅಂಗಳದಲ್ಲಿ ಧೂಳೆಬ್ಬಿಸಿದ ‘ಘೂಮರ್’.!​

ಘೂಮರ್​​​.. ಇಂಟರ್​ನೆಟ್​ನಲ್ಲಿ ಸದ್ಯ ಸೆನ್ಷೆಷನ್​​​​​ ಸೃಷ್ಟಿಸಿರುವ ಚಿತ್ರ. ಸ್ಪೋರ್ಟ್ಸ್ ಡ್ರಾಮಾ ಚಿತ್ರ ಇದಾಗಿದ್ದು, ಆರ್​.ಬಾಲ್ಕಿ ಆಕ್ಷನ್​​​ ಕಟ್​ ಹೇಳಿದ್ದಾರೆ. ಸ್ಟಾರ್​​ ನಟ ಅಭಿಷೇಕ್​​ ಬಚ್ಚನ್​​​, ಸೈಯಾಮಿ ಖೇರ್ ಹಾಗೂ ಅಮಿತಾಭ್​​ ಬಚ್ಚನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಒಂದೇ ಕೈಯಲ್ಲೇ ಕ್ರಿಕೆಟರ್​​ ಆಗುವ ಛಲ..!

ಘೂಮರ್​​ ಟ್ರೈಲರ್​​​ ಈ ಮಟ್ಟಿಗೆ ಹಿಟ್ ಆಗಲು ಕಾರಣ ಅದರಲ್ಲಿರೋ ಸ್ಫೂರ್ತಿದಾಯಕ ಕಥೆ. ಹಿಂದಿಯಲ್ಲಿ ಘೂಮರ್​ ಅಂದ್ರೆ, ತಿರುವು ಅಥವಾ ತಿರುಗು ಅನ್ನೋ ಅರ್ಥ ಕೊಡುತ್ತೆ. ಈ ಸಿನಿಮಾದ ವಿಚಾರಕ್ಕೆ ಬಂದ್ರೆ ಸ್ಪಿನ್ನರ್​​ ಅನ್ನೋ ಅರ್ಥವನ್ನ ಇಟ್ಕೋಬೋದು. ಯಾಕಂದ್ರೆ, ಈ ಘೂಮರ್​ ಚಿತ್ರ ಕೂಡ ಸಾಕಷ್ಟು ಟ್ವಿಸ್ಟ್​ & ಟರ್ನ್​ ಹೊಂದಿದೆ. ಬಾಲ್ಯದಿಂದ ಕ್ರಿಕೆಟರ್​ ಆಗಬೇಕೆನ್ನುವ ಕನಸು ಕಂಡು ಟೀಮ್​ ಇಂಡಿಯಾಗೂ ಅನಿನಾ ಅನ್ನೋ ಹುಡುಗಿ ಸೆಲೆಕ್ಟ್​ ಆಗಿರ್ತಾಳೆ. ಆದ್ರೆ, ಆಮೇಲೆ ಶುರುವಾಗುತ್ತೆ ವಿಧಿಯಾಟ.

ಸೋತ ಕೋಚ್​ ಪಾಠ, ಕೈ ಇಲ್ಲದ ಆಟಗಾರ್ತಿಯ ಆಟ

ಟೀಮ್​ ಇಂಡಿಯಾಗೆ ಸೆಲೆಕ್ಟ್​ ಆದ ಬೆನ್ನಲ್ಲೇ ಅನಿನಾ ಆ್ಯಕ್ಷಿಡೆಂಟ್​​ನಲ್ಲಿ ಬಲಗೈ ಕಳೆದುಕೊಳ್ತಾರೆ. ಇದ್ರರೊಂದಿಗೆ ಕ್ರಿಕೆಟರ್​ ಆಗೋ ಕನಸು ಕಮರುತ್ತೆ. ಆದ್ರೆ, ಛಲ ಹಾಗೇ ಉಳಿದಿರುತ್ತೆ. ಅದಾದ ಬಳಿಕ ಸಿಗೋ ಸೋತ ಮಾಜಿ ಕ್ರಿಕೆಟರ್​​, ಅಚಲ ಆತ್ಮವಿಶ್ವಾಸವಿರುವ ಕೋಚ್​ ಆ ಕನಸನ್ನ ನನಸು ಮಾಡಲು ನೆರವಿಗೆ ನಿಲ್ತಾನೆ. ಸೋತ ಕೋಚ್​ ತುಂಬೋ ಆತ್ಮವಿಶ್ವಾಸ ಕೈಯಿಲ್ಲದ ಆಟಗಾರ್ತಿಯಲ್ಲಿ ಕಿಚ್ಚು ಹೊತ್ತಿಸುತ್ತೆ. ಆ ಬಳಿಕ ಆಕೆ ಕಮ್​ಬ್ಯಾಕ್​ ಮಾಡೋದೆ ಈ ಚಿತ್ರದ ಥೀಮ್​.

ಸ್ಪೂರ್ತಿದಾಯಕ ಘೂಮರ್ ಚಿತ್ರದ ಟ್ರೈಲರ್​ ಟೀಮ್ ಇಂಡಿಯಾ ಕ್ರಿಕೆಟರ್ಸ್​ ಫಿದಾ ಆಗಿದ್ದಾರೆ. ಮನಸೋತಿರೋ ಮಾಜಿ ಕ್ಯಾಪ್ಟನ್​​ ಸೌರವ್ ಗಂಗೂಲಿ ಇದೊಂದು ಅದ್ಭುತ. ನೋಡಲು ಸಾಕಷ್ಟು ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ. ಇನ್ನು ವಿರೇಂದ್ರ ಸೆಹ್ವಾಗ್​​ ನಾವು ಯಾವಾಗ ಸ್ಪಿನ್ನರ್​ಗಳನ್ನ ಸಿರೀಯಸ್ ಆಗಿ ತೆಗೆದುಕೊಂಡಿರಲಿಲ್ಲ. ಇದು ನಿಜಕ್ಕೂ ವಿಶೇಷವಾಗಿದೆ ಎಂದು ಕೊಂಡಾಡಿದ್ದಾರೆ.

ಫೆಂಟಾಸ್ಟಿಕ್​ ಟ್ರೈಲರ್​​.. ವಾರ್ನರ್​ ಮೆಚ್ಚುಗೆ..!

ಈ ಟ್ರೈಲರ್​ನ ಖ್ಯಾತಿ ಗಡಿಗಳನ್ನೂ ಮೀರಿ ಪಸರಿಸಿದೆ. ಆಸ್ಟ್ರೇಲಿಯಾ ಸ್ಟಾರ್ ಓಪನರ್​ ಡೇವಿಡ್ ವಾರ್ನರ್​ಗೆ ಮೊದಲೇ ಇಂಡಿಯನ್​ ಮೂವಿಗಳಂದ್ರೆ ಬಲು ಇಷ್ಟ. ಇದೀಗ ಘೂಮರ್ ಚಿತ್ರಕ್ಕೂ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಟ್ರೈಲರ್​​ ನೋಡಿ ಖುಷಿಪಟ್ಟಿರೋ ವಾರ್ನರ್, ಇನ್​ಸ್ಟಾಗ್ರಾಂನಲ್ಲಿ ಎಂತಹ ಅದ್ಭುತ ಟ್ರೈಲರ್ ಎಂದು ಕೊಂಡಾಡಿದ್ದಾರೆ.

ಅಭಿಷೇಕ್ ಬಚ್ಚನ್​

ಮೆಡಲ್​ ಗೆದ್ದ ಶೂಟರ್​​​ ಘೂಮರ್​​ಗೆ ಸ್ಫೂರ್ತಿ

ಘೂಮರ್​ ಪಕ್ಕಾ ಕ್ರಿಕೆಟ್ ಡ್ರಾಮಾ ಚಿತ್ರ ನಿಜ. ಆದ್ರೆ, ಈ ಚಿತ್ರಕ್ಕೆ ಸ್ಪೂರ್ತಿಯಾಗಿರೋದು ಶೂಟರ್​. ಒಂದು ಕೈಯಿಲ್ಲದೇ ಪ್ಯಾರಾಲಿಂಪಿಕ್​​ನಲ್ಲಿ 2 ಮೆಡಲ್​ ಗೆದ್ದು ಚರಿತ್ರೆ ಸೃಷ್ಟಿಸಿದ ಹಂಗೇರಿಯನ್ ಶೂಟರ್ ಈ ಚಿತ್ರಕ್ಕೆ ಸ್ಪೂರ್ತಿ.

ಘೂಮರ್​ ಟ್ರೈಲರ್ ಸಖತ್​ ಸದ್ದು ಮಾಡ್ತಿದೆ. ಅದ್ರಲ್ಲೂ ಪ್ಯಾಡ್​ಮ್ಯಾನ್​ ಖ್ಯಾತಿಯ ಆರ್​.ಬಾಲ್ಕಿ ಡೈರೆಕ್ಷನ್​ ಮತ್ತಷ್ಟು ಕುತೂಹಲವನ್ನ ಹೆಚ್ಚಿಸಿದೆ. ಲೆಜೆಂಡ್ರಿ ಕ್ರಿಕೆಟರ್ಸ್​ ಮನಗೆದ್ದಿರೋ ಘೂಮರ್ ಚಿತ್ರ ಬಾಕ್ಸ್​ ಆಫೀಸ್​​ನಲ್ಲೂ ಧೂಳೆಬ್ಬಿಸುತ್ತಾ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಘೂಮರ್ ಸಿನಿಮಾ ಟ್ರೈಲರ್​ಗೆ ಕ್ರಿಕೆಟ್​ ಲೋಕ ಫಿದಾ.. ಈ ಬಗ್ಗೆ ಗಂಗೂಲಿ, ಸೆಹ್ವಾಗ್ ಹೇಳಿದ್ದೇನು?

https://newsfirstlive.com/wp-content/uploads/2023/08/IND_GROOMER_FILM.jpg

Load More