ಜಾಲತಾಣಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
ಸ್ಫೋಟದ ಸತ್ಯ ಕೆದಕಲು ಪೊಲೀಸರು ಅಲರ್ಟ್
ಕನ್ವೆನ್ಷನ್ ಹಾಲ್ನಲ್ಲಿ ಬ್ಯಾಕ್ ಟು ಬ್ಯಾಕ್ ಬ್ಲಾಸ್ಟ್!
ದೇವರ ನಾಡನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಫೋಟ ನಡೆಸಿ ಕೇರಳ ಜನರನ್ನ ಕಂಗಲಾಗಿಸಿದ್ದಾರೆ. ಸ್ಫೋಟ ಹಿಂದಿನ ಕರಾಳ ಸತ್ಯವನ್ನ ಕೆದಕಲು ತನಿಖಾ ತಂಡಗಳು ಫೀಲ್ಡ್ಗಿಳಿದಿವೆ. ಸ್ಫೋಟದ ಬೆನ್ನಲ್ಲೇ ಕರ್ನಾಟಕದಲ್ಲೂ ಅಲರ್ಟ್ ಇರುವಂತೆ ಗೃಹಸಚಿವರು ಹುಕ್ಕುಂ ಹೊರಡಿಸಿದ್ದಾರೆ.
ದೇವರ ನಾಡು ವನ್ಯಜೀವಿಗಳ ಬೀಡು. ಹಚ್ಚ ಹಸಿರಿನ ಕಾಡಿನಿಂದ ಕಂಗೊಳಿಸುತ್ತಿದ್ದ ಕೇರಳ ರಕ್ತಪಿಪಾಸುಗಳ ಜಾಡಾಗಿ ಬದಲಾಗ್ತಿದೆ. ದೇಶ ವಿರೋಧಿ ಚಟುವಟಿಕೆ, ಧರ್ಮ ವಿರೋಧಿ ಕೂಗು, ಸ್ಮಗ್ಲಿಂಗ್ನಿಂದ ಸದಾ ಸುದ್ದಿಯಾಗುತ್ತಿದ್ದ ಕೇರಳದಲ್ಲಿ ಇಂದು ರಕ್ಕಸರ ಮತ್ತೊಂದು ರೂಪದ ಪ್ರದರ್ಶನವಾಗಿದೆ. ಕಿಡಿಗೇಡಿಕೃತ್ಯಕ್ಕೆ ಕೇರಳ ಜನ ಇಂದು ಅಕ್ಷರಶಃ ನಡುಗಿಹೋಗಿದ್ದಾರೆ. ಈ ದೃಶ್ಯಗಳು ಇವತ್ತು ಇಡೀ ಕೇರಳ ಜನತೆಯನ್ನ ಭಯಭೀತಗೊಳಿಸಿದೆ. ಇಂದು ಭಾನುವಾರವಾದ ಹಿನ್ನೆಲೆ ಕೇರಳದ ಕೊಚ್ಚಿಯ ಕಲಮಸ್ಸೆರಿಯ ಕನ್ವೆನ್ಷನ್ ಹಾಲ್ಗೆ ಯಹೋಹನ ಶಕ್ತಿ ಎಂಬ ಹೆಸರಿನ ಪ್ರಾರ್ಥನಾ ಸಭೆ ಅಯೋಜನೆ ಮಾಡಲಾಗಿತ್ತು. ಬೆಳಿಗ್ಗೆ 9.45ರ ಸುಮಾರಿಗೆ ಜೆಹೋವಾಸ್ ವಿಟ್ನಸ್ ಕನ್ವೆನ್ಷನ್ ಹಾಲ್ನಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರಾರ್ಥನೆ ಆರಂಭವಾಗಿತ್ತು. ಆದ್ರೆ ಪ್ರಾರ್ಥನೆ ಆರಂಭವಾದ ಕೆಲವೇ ಕ್ಷಣದಲ್ಲಿ ಕನ್ವೆನ್ಷನ್ ಹಾಲ್ ರೂಪವೇ ಬದಲಾಗಿತ್ತು. ಕನ್ವೆನ್ಷನ್ ಹಾಲ್ ಸಿಡಿದ ಬಾಂಬ್ ಒಂದು ನೋಡ ನೋಡುತ್ತಲೇ ಓರ್ವ ಮಹಿಳೆಯನ್ನ ಬಲಿ ಪಡೆದು 36ಕ್ಕೂ ಹೆಚ್ಚು ಜನರನ್ನ ರಕ್ತದ ಮಡುವಿನಲ್ಲಿ ಮಲಗಿಸಿತ್ತು.
ಕನ್ವೆನ್ಷನ್ ಹಾಲ್ನಲ್ಲಿ ಬ್ಯಾಕ್ ಟು ಬ್ಯಾಕ್ ಬ್ಲಾಸ್ಟ್
ಮೂರು ಸ್ಫೋಟಕ್ಕೆ ಬೆಚ್ಚಿಬಿದ್ದ ಸಾವಿರಾರು ಮಂದಿ
ಕೊಚ್ಚಿಯಿಂದ 10 ಕಿ.ಮೀ ದೂರದಲ್ಲಿರೋ ಕಲಮಸ್ಸೆರಿಯ ಜೆಹೋವಾಸ್ ವಿಟ್ನಸ್ ಕನ್ವೆನ್ಷನ್ ಹಾಲ್ಗೆ ಪ್ರಾರ್ಥನೆಗಾಗಿ 2000ಕ್ಕೂ ಅಧಿಕ ಕ್ರಿಶ್ಚಿಯನ್ ಸಮುದಾಯದ ಜನರು ಆಗಮಿಸಿದ್ದರು. ಪ್ರಾರ್ಥನೆ ಆರಂಭವಾಗ್ತಿದ್ದಂತೆ ಕನ್ವೆನ್ಷನ್ ಹಾಲ್ನ ಮಧ್ಯ ಭಾಗದಲ್ಲಿ ಬಾಂಬ್ವೊಂದು ಸ್ಫೋಟಗೊಂಡಿತ್ತು. ಏನಾಗ್ತಿದೆ ಅಂತ ಜನರಿಗೆ ಅರಿವಾಗೋ ಅಷ್ಟರಲ್ಲೇ ಮತ್ತೆರಡು ಸ್ಫೋಟ ಸಂಭವಿಸಿದ್ದವು. ಸ್ಫೋಟದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನೂ ಸ್ಫೋಟದಿಂದ ಗಾಯಗೊಂಡಿದ್ದ 36ಕ್ಕೂ ಹೆಚ್ಚು ಜನರನ್ನ ತಕ್ಷಣ ಆಸ್ಪತ್ರೆಗೆ ರವಾನೆ ಮಾಡಲಾಯ್ತು.
ಸ್ಫೋಟದ ಬಗ್ಗೆ ಕೇರಳ ಸಿಎಂರಿಂದ ಮಾಹಿತಿ ಪಡೆದ ಅಮಿತ್ ಶಾ
ಕಲಮಸ್ಸೆರಿಯಲ್ಲಿ ಸ್ಫೋಟ ಸಂಭವಿಸುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸುವಂತೆ ಎನ್ಐಎ ಮತ್ತು ಎನ್ಎಸ್ಜಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ. ಕಲಮಸ್ಸೆರಿಯಲ್ಲಿ ಸ್ಫೋಟ ಸಂಭವಿಸುತ್ತಿದ್ದಂತೆ ಅಲರ್ಟ್ ಆಗಿರೋ ಕೇರಳ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಐಇಡಿ ಸ್ಫೋಟಿಸಿರುವುದಾಗಿ ತಿಳಿದುಬಂದಿದೆ ಅಂತ ಕೇರಳ ಪೊಲೀಸ್ ಆಯುಕ್ತ ಶೇಖ್ ದರ್ವೇಶ್ ಸಾಹಿಬ್ ತಿಳಿಸಿದ್ದಾರೆ. ಅಲ್ಲದೇ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪ್ರಚೋದನಕಾರಿ ಪೋಸ್ಟ್ಗಳನ್ನ ಹಾಕದಂತೆ ಸಾರ್ವಜನಿಕರಿಗೆ ಮನವಿಮಾಡಿದ್ದಾರೆ. ಪೋಸ್ಟ್ ಹಾಕಿದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.
ಹಮಾಸ್ ಪರ ಱಲಿ ಬೆನ್ನಲ್ಲೇ ಬಾಂಬ್ ಸ್ಫೋಟ
ನಿನ್ನೆ ಕೇರಳದಲ್ಲಿ ಪ್ಯಾಲಸ್ತೈನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿರೋದನ್ನ ಖಂಡಿಸಿ ಱಲಿ ನಡೆಸಲಾಗಿತ್ತು. ಈ ವೇಳೆ ಹಮಾಸ್ ಉಗ್ರರ ಪರ ಧನಿಯೆತ್ತಿದ್ದ ಜನರು ಬೃಹತ್ ಸಮಾವೇಶ ಸಹ ಕೈಗೊಂಡು ಇಸ್ರೇಲ್ ವಿರುದ್ದ ಧಿಕ್ಕಾರಕೂಗಿದ್ದರು. ಇದೇ ವೇಳೆ ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥನೋರ್ವ ವಿಡಿಯೋ ಕಾನ್ಪರೆನ್ಸ್ ಮೂಲಕ ಕೇರಳ ಜನ ಹಮಾಸ್ ಪರ ಹೋರಾಟ ನಡೆಸಬೇಕು ಅಂತ ಕರೆನೀಡಿದ್ದ. ಈ ಱಲಿ ನಡೆದ ಕೆಲವೇ ಗಂಟೆಗಳಲ್ಲಿ ಕೇರಳದಲ್ಲಿ ಬಾಂಬ್ ಸ್ಫೋಟ ನಡೆದಿರೋದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.
ಕೇರಳದಲ್ಲಿ ಬಾಂಬ್ ಸ್ಫೋಟ ಬೆನ್ನಲ್ಲೇ ರಾಜ್ಯದಲ್ಲೂ ಅಲರ್ಟ್
ಕೇರಳದಲ್ಲಿ ಸ್ಫೋಟ ಸಂಭಿವಿಸಿರೋ ಬೆನ್ನಲ್ಲೇ ಕೇರಳ ಗಡಿ ಭಾಗವಾದ ಮಂಗಳೂರಿನಲ್ಲೂ ಅಲರ್ಟ್ ಆಗಿರುವಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪೊಲೀಸರಿಗೆ ಸೂಚಿಸಿದ್ದಾರೆ. ಹಿರಿಯ ಅಧಿಕಾರಿಗಳು ಕರಾವಳಿ ಭಾಗದ ಸೂಕ್ಷ್ಮ ಪ್ರದೇಶಗಳ ಮೇಲೆ ಕಟ್ಟೆಚ್ಚರ ವಹಿಸುವಂತೆ ಗೃಹಸಚಿವರು ತಿಳಿಸಿದ್ದಾರೆ. ದೇವರ ನಾಡನ್ನ ಕಾಡಿದ ರಾಕ್ಷಸರು ಓರ್ವ ಮಹಿಳೆಯನ್ನ ಬಲಿ ಪಡೆದು ಹಲವರನ್ನ ಜೀವ ಹಿಂಡಿದ್ದಾರೆ. ಹ್ಯಾಪಿ ಸಂಡೆ ಅಂತ ಸಂತಸದಲ್ಲಿದ್ದ ಕೇರಳ ಜನತೆಗೆ ಸ್ಫೋಟದ ಕರಾಳತೆ ದಂಗುಬಡಿಸಿದೆ. ಸ್ಫೋಟದ ಹಿಂದಿನ ಜಾಡಿನ ಬೆನ್ನು ಬಿದ್ದಿರೋ ಪೊಲೀಸರು ಘಟನೆಯ ಪಿನ್ ಟು ಪಿನ್ ಮಾಹಿತಿಯನ್ನ ಕಲೆ ಹಾಕ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ