newsfirstkannada.com

×

ಆಸಿಸ್​ಗೆ ಈಗಲೇ ಟೆನ್ಷನ್; ಭಾರತದ ಈ ಆಟಗಾರನ ಕಟ್ಟಿಹಾಕಲು ಪಾಂಟಿಂಗ್ ಎಚ್ಚರಿಕೆ..!

Share :

Published September 29, 2024 at 9:11am

    BGT ಟೆಸ್ಟ್ ಸರಣಿಗೂ ಮುನ್ನವೇ ಆಸಿಸ್​​ಗೆ ಟೆನ್ಶನ್​.. ಟೆನ್ಶನ್​..!

    ಆಸ್ಟ್ರೇಲಿಯಾ ಕ್ರಿಕೆಟರ್ಸ್​ನಿಂದ ರಿಷಬ್ ಪಂತ್ ನಾಮಜಪ

    ಆಸ್ಟ್ರೇಲಿಯಾಗೆ ಎಚ್ಚರಿಕೆ ನೀಡಿದ್ದೇಕೆ ರಿಕಿ ಪಾಂಟಿಂಗ್..?

ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್​ ಸಿರೀಸ್​​​​​​​​​​​​​​​​​​​​​​​​​​​​​​​​​​​​​​​ ಆರಂಭಕ್ಕೆ ಒಂದು ತಿಂಗಳು ಬಾಕಿಯಿದೆ. ಒಂದು ತಿಂಗಳ ಮುನ್ನವೇ ಆಸ್ಟ್ರೇಲಿಯಾ ಕ್ಯಾಂಪ್​​ನಲ್ಲಿ ಟೆನ್ಶನ್ ಶುರುವಾಗಿದೆ. ಕುಂತರೂ, ನಿಂತರೂ ರಿಷಬ್​​ ಪಂತ್ ನಾಮ ಜಪವೇ ನಡೀತಿದೆ.

ಆಸಿಸ್​​ಗೆ ಟೆನ್ಶನ್​, ಟೆನ್ಶನ್
ಇಂಡೋ ಆಸಿಸ್​ ಟೆಸ್ಟ್​ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ಮದಗಜಗಳ ನಡುವಿನ ಕಾಳಗ ನವೆಂಬರ್ 22ರಿಂದ ಶುರುವಾಗಲಿದ್ದು, ಈ ಬಾರಿಯ ಪ್ರತಿಷ್ಠಿತ ಸರಣಿ ಯಾರ ಕೈವಶ ಆಗುತ್ತೆ ಅನ್ನೋ ಕ್ಯೂರಿಯಾಸಿಟಿ ವಿಶ್ವ ಕ್ರಿಕೆಟ್​​ ಲೋಕದಲ್ಲಿ ಮನೆ ಮಾಡಿದೆ. ಈ ಪ್ರತಿಷ್ಠಿತ ಸಿರೀಸ್​​ಗೆ ಸಜ್ಜಾಗ್ತಿರುವ ಆಸಿಸ್​ ಕ್ಯಾಂಪ್​ನಲ್ಲಿ ಮಾತ್ರ ಟೆನ್ಶನ್​ ಶುರುವಾಗಿದೆ. ಇದಕ್ಕಾಗಿಯೇ ಅಭ್ಯಾಸದ ಅಖಾಡಕ್ಕಿಳಿದಿರುವ ಕಾಂಗರೂ ಮತ್ತೊಂದೆಡೆ ಗಬ್ಬಾ ಟೆಸ್ಟ್​ ಹೀರೋ ರಿಷಭ್ ಪಂತ್ ನಾಮಜಪ ಮಾಡ್ತಿದೆ.

ಇದನ್ನೂ ಓದಿ:ಪೊಲೀಸರ ಹೆಸರೇಳಿ ಸ್ವಾಮೀಜಿಗೆ 1 ಕೋಟಿ ಉಂಡೇನಾಮ; ಭಾರೀ ಅನುಮಾನ

ಆಸಿಸ್​​ಗೆ ಕಾಡ್ತಿದೆ ಮ್ಯಾಚ್ ವಿನ್ನಿಂಗ್ ಆಟ
2018-19ರ ಬಾರ್ಡರ್ ಗವಾಸ್ಕರ್ ಟೆಸ್ಟ್​. 2020-21ರ ಬಾರ್ಡರ್ ಗವಾಸ್ಕರ್ ಟೆಸ್ಟ್ ಸಿರೀಸ್. ಈ ಎರಡು ಟೆಸ್ಟ್ ಸರಣಿ ಗೆದ್ದು ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿದೆ. ಈ ಅಭೂತಪೂರ್ವ ಸರಣಿ ಗೆಲುವಿನ ಹೀರೋನೇ ಪಂತ್.

2019ರ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪಂತ್, ಅಜೇಯ 159 ರನ್ ಸಿಡಿಸಿ ನಿರ್ಣಾಯಕ ಸಿಡ್ನಿ ಪಂದ್ಯವನ್ನ ಡ್ರಾ ಮಾಡಿಕೊಳ್ಳುವಲ್ಲಿ ನೆರವಾಗಿದ್ದರು. 2021ರಲ್ಲಿ ಆಸಿಸ್​ನ ಭದ್ರಕೋಟೆಯನ್ನೇ ಬೇಧಿಸಿದ ಡೆಲ್ಲಿ ಬಾಯ್​​​, ಗಬ್ಬಾದಲ್ಲಿ ಅಜೇಯ 89 ರನ್​ ಗಳಿಸುವ ಮೂಲಕ ಟೀಮ್ ಇಂಡಿಯಾ ಗೆಲುವಿಗೆ ಕಾರಣರಾದರು. ಸರಣಿ ಗೆಲ್ಲುವಲ್ಲಿ ಮೇಜರ್ ರೋಲ್ ಪ್ಲೇ ಮಾಡಿದ್ದರು. ಇದೇ ಪಂತ್ ಕಮ್​ಬ್ಯಾಕ್​ ಆಸಿಸ್​ ನಡುಕ ಶುರುವಾಗುವಂತೆ ಮಾಡಿದೆ.

ಪಂತ್​​ ಆಸ್ಟ್ರೇಲಿಯನ್ ಆಗಿದ್ರೆ ಚೆನ್ನಾಗಿರ್ತಿತ್ತು
ಪಂತ್ ಬದ್ಧತೆ, ಸಾಮರ್ಥ್ಯ ಹಾಗೂ ಆಕ್ರಮಣಕಾರಿ ಆಟ ಆಸ್ಟ್ರೇಲಿಯಾದ ಮಿಚೆಲ್ ಮಾರ್ಶ್​ ಮನ ಗೆದ್ದಿದೆ. ಪಂತ್​​ ಆಸ್ಟ್ರೇಲಿಯನ್ನರಾಗಬೇಕಿತ್ತು ಎಂಬ ಬಯಕೆಯನ್ನ ಸಂದರ್ಶನ ಒಂದರಲ್ಲಿ ವ್ಯಕ್ತಪಡಿಸಿದ್ದಾರೆ. ಟ್ರಾವಿಸ್ ಹೆಡ್, ಯಾವ ಇಂಡಿಯನ್ ಪ್ಲೇಯರ್​ ಆಸ್ಟ್ರೇಲಿಯನ್ ಆಗಿರಬೇಕು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮಾರ್ಶ್​ ಮರು ಮತಾನಾಡದೇ ಪಂತ್ ಹೆಸರು ಹೇಳಿದ್ದಾರೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಸ್ಟಾರ್​ ಆಟಗಾರರೇ ಔಟ್​

ಆತ ಸ್ಫೋಟಕ ಬ್ಯಾಟ್ಸ್‌ಮನ್‌. ಕಳೆದ ಕೆಲವು ವರ್ಷಗಳಿಂದ ಅಪಾಯಕಾರಿಯಾಗಿ ಬೆಳೆದಿದ್ದಾರೆ. ಪಂತ್​ ಸದಾ ಗೆಲ್ಲುವುದನ್ನ ಇಷ್ಟಪಡ್ತಾರೆ. ಯಾವಾಗಲೂ ಮುಖದಲ್ಲಿ ಮಂದಹಾಸದಿಂದ ಇರ್ತಾರೆ -ಮಿಚೆಲ್ ಮಾರ್ಶ್​, ಆಸಿಸ್​ ಟಿ20 ತಂಡದ ನಾಯಕ

ಮಾರ್ಶ್ ಪಂತ್ ಆಕ್ರಮಣಕಾರಿ ಆಟದ ಬಗ್ಗೆ ಕೊಂಡಾಡಿದ್ರೆ, ಇತ್ತ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್​, ರಿಷಭ್​ ಪಂತ್​​ನ ಕಟ್ಟಿ ಹಾಕುವ ಪ್ಲಾನ್​​​​​​​​​​​​​​​ ಬಗ್ಗೆ ಮಾತನಾಡಿದ್ದಾರೆ.

ಪ್ರತಿ ತಂಡದಲ್ಲಿ ಏಕಾಂಗಿಯಾಗಿ ಗೆಲ್ಲಿಸಬಲ್ಲ ಇಬ್ಬರು ಆಟಗಾರರು ಇರುತ್ತಾರೆ. ಅದೇ ರೀತಿ ಆಸ್ಟ್ರೇಲಿಯಾದಲ್ಲಿ ಟ್ರಾವಿಸ್‌ ಹೆಡ್‌, ಮಿಚೆಲ್‌ ಮಾರ್ಶ್​ ಇದ್ದಾರೆ. ಆಕ್ರಮಣಕಾರಿ ಆಟದ ಮೂಲಕ ಪಂದ್ಯವನ್ನ ಏಕಾಂಗಿಯಾಗಿ ಗೆಲ್ಲಿಸಲಿದ್ದಾರೆ. ಅದರಂತೆ ರಿಷಭ್‌ ಪಂತ್, ರಿವರ್ಸ್‌ ಸ್ವೀಪ್​​​​ ಶಾಟ್‌ ಆಡಲಿದ್ದಾರೆ. ಇದು ಅತ್ಯಂತ ಅಸಾಧಾರಣವಾಗಿದೆ. ರಿಷಭ್‌ ಪಂತ್‌ ಏನೆಂಬುವುದರ ಭಾಗ ಇದಾಗಿದೆ. ಕಳೆದೆರಡು ಸರಣಿಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಮುಂಬರುವ ಟೆಸ್ಟ್‌ ಸರಣಿಯಲ್ಲಿ ಕಟ್ಟಿ ಹಾಕಲು ಪ್ರಯತ್ನಿಸುತ್ತೇವೆ-ಪಾಟ್ ಕಮಿನ್ಸ್​, ಆಸ್ಟ್ರೇಲಿಯಾ ಕ್ಯಾಪ್ಟನ್

ಅತ್ತ ನಾಯಕ ಕಮಿನ್ಸ್​, ರಿಷಭ್ ಪಂತ್​​ರನ್ನ ಕಟ್ಟಿಹಾಕುವ ಮಾತುಗಳನ್ನಾಡುತ್ತಿದ್ದರೆ. ಮತ್ತೊಂದೆಡೆ ಆಸಿಸ್​ ದಿಗ್ಗಜ ರಿಕಿ ಪಾಂಟಿಂಗ್, ಎಚ್ಚರಿಕೆಯಿಂದ ಇರುವ ಸಲಹೆ ನೀಡಿದ್ದಾರೆ.

ಪಂತ್‌ ಆಟವನ್ನು ನಾವೆಲ್ಲಾ ಕಂಡಿದ್ದೇವೆ. ಸ್ಟಂಪ್‌ನ ಹಿಂಬದಿ ಪಂತ್​​​ ಕೆಲಸವನ್ನು ನಾವು ಸ್ಟಂಪ್‌ ಮೈಕ್ ಮೂಲಕ ಕೇಳಿಸಿಕೊಂಡಿದ್ದೇವೆ. ಆತ ಅಪ್ಪಟ ವಿನ್ನರ್‌ ಎಂಬುವುದನ್ನ ಹಲವು ಬಾರಿ ಪ್ರೂವ್ ಮಾಡಿದ್ದಾರೆ. ಕೇವಲ ರನ್‌ ಗಳಿಸಲು ಬ್ಯಾಟ್​​ ಮಾಡಲ್ಲ. ಪ್ರತಿ ರನ್‌ ಗಳಿಸುವುದನ್ನ ಪಂತ್​ ಆನಂದಿಸುತ್ತಾರೆ. ಈಗಾಗಲೇ ಟೆಸ್ಟ್‌ನಲ್ಲಿ 4-5 ಶತಕ ಬಾರಿಸಿದ್ದಾರೆ. ಕೆಲವೊಮ್ಮೆ 90 ರನ್‌ಗೆ ವಿಕೆಟ್‌ ಕೈಚೆಲ್ಲಿದ್ದಾರೆ. ಧೋನಿ ಬಹಳಷ್ಟು ಪಂದ್ಯಗಳನ್ನಾಡಿದ್ದಾರೆ. 3-4 ಶತಕ ಮಾತ್ರ. ರಿಷಭ್ ಪಂತ್ ಒಬ್ಬ ಸಿರೀಯಸ್ ಕ್ರಿಕೆಟರ್-ರಿಕಿ ಪಾಂಟಿಂಗ್, ಮಾಜಿ ನಾಯಕ

ಪಂತ್ ಒಬ್ಬ ಅಪ್ಪಟ ಮ್ಯಾಚ್ ವಿನ್ನರ್. ಇದಕ್ಕೆ ಆಸ್ಟ್ರೇಲಿಯಾದ ಸಿಡ್ನಿ ಹಾಗೂ ಗಬ್ಬಾದಲ್ಲಿ ಕಟ್ಟಿದ ಆಕ್ರಮಣಕಾರಿ ಆಟಗಳು. ಟೆಸ್ಟ್​ ಕ್ರಿಕೆಟ್​ಗೆ ಮರಳಿರುವ ಪಂತ್, ಆರಂಭಿಕ ಪಂದ್ಯದಲ್ಲೇ ಸೆಂಚುರಿ ಸಿಡಿಸಿದ್ದಾರೆ. ಈಗ ಆಸ್ಟ್ರೇಲಿಯಾ ಕ್ಯಾಂಪ್​​ನಲ್ಲಿ ನಡುಕ ಹುಟ್ಟಿಸಿದೆ. ಡೇಂಜರಸ್ ಪಂತ್ ನಾಮಜಪ ಮಾಡುವಂತೆ ಮಾಡಿದೆ.

ಇದನ್ನೂ ಓದಿ:BBK11: ದೊಡ್ಮನೆಗೆ​ ಅಚ್ಚರಿ ರೀತಿಯಲ್ಲಿ ಎಂಟ್ರಿ ಕೊಟ್ಟ ವಕೀಲ ಜಗದೀಶ್​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆಸಿಸ್​ಗೆ ಈಗಲೇ ಟೆನ್ಷನ್; ಭಾರತದ ಈ ಆಟಗಾರನ ಕಟ್ಟಿಹಾಕಲು ಪಾಂಟಿಂಗ್ ಎಚ್ಚರಿಕೆ..!

https://newsfirstlive.com/wp-content/uploads/2024/09/PANT-1.jpg

Load More