ಮರದ ಕೆಳಗೆ ಕುಳಿತಿದ್ದ ಬಾಲಕ ಚರಣ್ (7) ಏಕಾಏಕಿ ಮೃತ್ಯು
ಎಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿಯಲ್ಲಿ ನಡೆದ ಘಟನೆ
ಹುಲಿ ದಾಳಿ ಮಾಡಿದೆ ಎಂದು ಶಂಕೆ ವ್ಯಕ್ತಪಡಿಸಿದ ಗ್ರಾಮಸ್ಥರು
ಮೈಸೂರು: ಹಾಡಹಗಲೇ ಜಮೀನಿನಲ್ಲಿರೋ ಮರದ ಕೆಳಗೆ ಕುಳಿತಿದ್ದ ಬಾಲಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರೋ ಘಟನೆ ಎಚ್.ಡಿ ಕೋಟೆ ತಾಲೂಕಿನ ಕಲ್ಲಹಟ್ಟಿಯಲ್ಲಿ ಸಂಭವಿಸಿದೆ. ಕೃಷ್ಣ ನಾಯಕರ ಪುತ್ರ ಚರಣ್ (7) ಮೃತ ಬಾಲಕ.
ಮೃತ ಬಾಲಕ ಪೋಷಕರೊಂದಿಗೆ ಜಮೀನಿಗೆ ಆಗಮಿಸಿದ್ದ. ಈ ವೇಳೆ ವಿಶ್ರಾಂತಿಗೆಂದು ಮರದ ಕೆಳಗೆ ಕುಳಿತುಕೊಂಡಿದ್ದ. ಕೆಲವೇ ಕ್ಷಣದಲ್ಲಿ ಬಾಲಕ ಸ್ಥಳದಿಂದ ಕಣ್ಮರೆಯಾಗಿದ್ದಾನೆ. ಕೂಡಲೇ ಪೋಷಕರು ಜಾಡು ಹುಡುಕಿದಾಗ ಕೊಂಚ ದೂರದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಬಾಲಕನನ್ನು ನರಹಂತಕ ವ್ಯಾಘ್ರ ಹುಲಿ ಎಳೆದುಕೊಂಡು ಹೋಗಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ