newsfirstkannada.com

ಅಬ್ಬಾ! ಮನೆಯಲ್ಲಿ ಮಲಗಿದ್ದ ತಂದೆ, ತಾಯಿ, ತಮ್ಮನ ಬರ್ಬರ ಹತ್ಯೆ.. ತ್ರಿಬಲ್ ಮರ್ಡರ್​ ಮಾಡಿದ್ಯಾರು? ಯಾಕೆ?

Share :

Published July 10, 2024 at 7:45pm

    ಮದುವೆಯ ಆರ್ಕೆಸ್ಟ್ರಾ ನೋಡಿ ಬಂದು ಕೊಲೆ ಮಾಡಿದ್ದ ಆರೋಪಿ

    ಮಲಗಿದಲ್ಲೇ ಮೂವರನ್ನು ಪರ್ಮನೆಂಟ್ ಆಗಿ ಮಲಗಿಸಿ ಬಿಟ್ಟಿದ್ದನು

    ತ್ರಿಬಲ್ ಮರ್ಡರ್​ ಪ್ರಕರಣದ ಆರೋಪಿ ಸಿಕ್ಕಿದ್ದೇ ಘಟನೆಯ ರೋಚಕ

ವಾರಣಾಸಿ: ತ್ರಿಬಲ್​ ಮರ್ಡರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 3 ದಿನದಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತರ ಕುಟುಂಬದ ಕಿರಿಯ ಮಗನೇ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದ್ದು ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಘಾಜಿಪುರ ಜಿಲ್ಲೆಯ ಕುಸುಮಿಹಕಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಂದೆ ಮುನ್ಷಿ ಬಿಂದ್ (45), ತಾಯಿ ದೇವಂತಿ ಬಿಂದ್ (40) ಮತ್ತು ಸಹೋದರ ರಾಮ್ ಆಶಿಶ್ (20) ಕೊಲೆಯಾದವರು. ಇವರ 15 ವರ್ಷದ ಕಿರಿಯ ಮಗ ಹುಡುಗಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದನು. ಈ ಸಂಬಂಧ ಮದುವೆ ಮಾಡಿಕೊಳ್ಳಲೆಂದು ಮನೆಯಲ್ಲಿ ವಿಚಾರಿಸಿದ್ದಾನೆ. ಆದರೆ ಇದಕ್ಕೆ ಮೂವರು ವಿರೋಧ ವ್ಯಕ್ತಪಡಿಸಿ ಬುದ್ಧಿ ಹೇಳಿದ್ದಾರೆ. ಇದರಿಂದ ಕೋಪಗೊಂಡಿದ್ದ ಅಪ್ರಾಪ್ತ ಬಾಲಕ ಮೂವರನ್ನು ಕೊಲೆ ಮಾಡಲೆಂದು ಹರಿತವಾದ ಆಯುಧವನ್ನು ಖರೀದಿ ಮಾಡಿದ್ದನು. ಒಮ್ಮೆ ವಿಫಲ ಯತ್ನ ಮಾಡಿದ್ದಾಗಿ ಬಾಲಕ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ತಮ್ಮ; ಅಸಲಿಗೆ ಆಗಿದ್ದೇನು?

ಜುಲೈ 7ರಂದು ಗ್ರಾಮದಲ್ಲಿನ ಮದುವೆಯೊಂದರ ಆರ್ಕೆಸ್ಟ್ರಾಕ್ಕೆ ಸ್ನೇಹಿತನೊಂದಿಗೆ ಹೋಗಿ ರಾತ್ರಿ 11 ಗಂಟೆಗೆ ವಾಪಸ್ ಬಂದಿದ್ದನು. ಈ ವೇಳೆ ಮನೆಯಲ್ಲಿ ಮದ್ಯಪಾನ ಮಾಡಿ ಮೂವರು ಮಲಗಿದ್ದಾಗ ಹರಿತವಾದ ಆಯುಧದಿಂದ ಮೂವರ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿದ್ದಾನೆ. ರಾತ್ರಿ 1 ಗಂಟೆ ಸುಮಾರಿಗೆ ಈ ಕೃತ್ಯ ಎಸಗಿ ಆಯುಧವನ್ನು ಹೊಲದಲ್ಲಿಟ್ಟು ಮತ್ತೆ ಆರ್ಕೆಸ್ಟ್ರಾ ನೋಡಲು ಹೋಗಿದ್ದಾನೆ. ಮತ್ತೆ ರಾತ್ರಿ 1:45 ಸುಮಾರಿಗೆ ಮನೆಗೆ ಬಂದು ಯಾರೋ ಕೊಲೆ ಮಾಡಿದ್ದಾರೆಂದು ಕೂಗಾಡಿ ಜನರನ್ನು ಸೇರಿಸಿದ್ದಾನೆ.

ಇದನ್ನೂ ಓದಿ: ಹೊಸ ಸೀರಿಯಲ್; ಕನ್ನಡ ಕಿರುತೆರೆಗೆ ನಟಿ ನಿತ್ಯಾರಾಮ್ ರೀ ಎಂಟ್ರಿ.. ಹೀರೋ?

ಘಟನೆ ನಡೆದ ಬಳಿಕ ಮೃತ ಮುನ್ಷಿ ಬಿಂದ್ ಸಹೋದರ ಪೊಲೀಸ್​ ಠಾಣೆಗೆ ತೆರಳಿ ಗ್ರಾಮದ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಕೇಸ್​ ದಾಖಲಿಸಿದ್ದನು. ಈ ಸಂಬಂಧ ನಂದಗಂಜ್ ಪೊಲೀಸರು, ಇಂಟೆಲಿಜೆನ್ಸ್​ ಸಿಬ್ಬಂದಿ ಎಲ್ಲ ಆಯಾಮದಿಂದ ತನಿಖೆ ಕೈಗೊಂಡು ಆರೋಪಿಯನ್ನು ಪತ್ತೆ ಮಾಡಿದಾಗ ಶಾಕ್​ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ! ಮನೆಯಲ್ಲಿ ಮಲಗಿದ್ದ ತಂದೆ, ತಾಯಿ, ತಮ್ಮನ ಬರ್ಬರ ಹತ್ಯೆ.. ತ್ರಿಬಲ್ ಮರ್ಡರ್​ ಮಾಡಿದ್ಯಾರು? ಯಾಕೆ?

https://newsfirstlive.com/wp-content/uploads/2024/07/POLICE_handcuffs.jpg

Load More