newsfirstkannada.com

ಆಡಲು ಹೋಗಿದ್ದ ಮಗ ಕಳೆದು ಹೋದ.. ಪುತ್ರನ ಹುಡುಕಿಕೊಟ್ಟವರಿಗೆ ಮೂರು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಅಪ್ಪ

Share :

01-07-2023

    ಗದಗದಲ್ಲಿ ಹೃದಯ ಹಿಂಡುವ ಒಂದು ಕರುಣಾಜನಕ ಕಥೆ

    ಫೋಟೋ, ಸ್ಕೂಲ್ ಬ್ಯಾಗ್ ಹಿಡಿದು ಹೆತ್ತವರು ಕಣ್ಣೀರು

    ದೇವರ ಹರಿಕೆ ಫಲಿಸಲಿಲ್ಲ, ಪೊಲೀಸರು ಕೈಹಿಡಿಯಲಿಲ್ಲ

ಗದಗ: ಸ್ಕೂಲ್ ಮುಗಿಸಿ ಮನೆಗೆ ಬಂದು ಬ್ಯಾಗ್ ಇಟ್ಟು ಹೋದ ಮಗ ಮನೆಗೆ ಬರಲೇ ಇಲ್ಲ. ಬರೋಬ್ಬರಿ ಒಂದು ತಿಂಗಳ ಆಯಿತು. ಮನೆ ಬಿಟ್ಟು ಹೋದ ಮಗ ಇವತ್ತು ಬರುತ್ತಾನೆ, ನಾಳೆ ಬರುತ್ತಾನೆ ಅಂತಾ ಆತನ ಸ್ಕೂಲ್ ಬ್ಯಾಗ್, ಅಂಗಿ, ಬಟ್ಟೆ, ಆತ ಬಳಸುತ್ತಿದ್ದ ವಸ್ತುಗಳನ್ನು ಹಿಡಿದು ಬಿಕ್ಕಳಿಸುತ್ತ ದಿನ ದೂಡುತ್ತಿದೆ ಇಲ್ಲೊಂದು ಕುಟುಂಬ!

ಒಂದು ತಿಂಗಳಿನಿಂದ ಕಳೆದುಹೋದ ಮಗನಿಗಾಗಿ ಕಣ್ಣೀರು ಇಡುತ್ತಿರುವ ಅಪ್ಪ-ಅಮ್ಮ, ಇದೀಗ ಪೊಲೀಸರ ಜೊತೆಗೆ ಸಾರ್ವಜನಿಕರ ಸಹಾಯವನ್ನೂ ಅಂಗಲಾಚಿದ್ದಾರೆ. ಅದು ಪುಕ್ಕಟೆ ಅಲ್ಲ. ಮಗನನ್ನು ಹುಡುಕಿ ಕೊಟ್ಟವರಿಗೆ ಬರೋಬ್ಬರಿ ಮೂರು ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಘೋಷಣೆ ಮಾಡಿದ್ದಾರೆ.

ಆಗಿದ್ದೇನು..?

ಗದಗ ನಗರದ ಹೊಂಬಳ ನಾಕಾ ಬಳಿಯ ಜನತಾ ಕಾಲೋನಿಯ ನಿವಾಸಿ ಮೌಲಾಸಾಬ್ ಹಾಗೂ ಖಾಜಾಬಿ ದಂಪತಿಯ ಏಕೈಕ ಪುತ್ರ ಅಫ್ಜಲ್ ಮೌಲಾಸಾಬ್ ದಾವಲಖಾನವರ್ ಕಾಣೆಯಾಗಿದ್ದಾನೆ. ಈತನಿಗೆ ಕೇವಲ 9 ವರ್ಷ. ಮೂರನೇ ತರಗತಿ ಓದುತ್ತಿದ್ದ ಈತ, ಒಂದು ತಿಂಗಳ ಹಿಂದೆ ಸ್ಕೂಲ್ ಮುಗಿಸಿ ಮನೆಗೆ ಬಂದಿದ್ದ.

ಮನೆಗೆ ಬಂದು ರಿಫ್ರೆಶ್ ಆದ ನಂತರ ಆಟವಾಡಲು ಮನೆಯಿಂದ ಹೊರಟು ಹೋದವ ಇನ್ನೂ ಬಂದಿಲ್ಲ. ಮುದ್ದಿನ ಮಗ ಅಲ್ಲಿರುಬಹುದು, ಇಲ್ಲಿರಬಹುದು ಎಂದು ಬೀದಿ ಬೀದಿ ಹುಡುಕಾಡಿದ್ದಾರೆ. ಎಲ್ಲೇ ಹುಡುಕಿದರೂ ಇನ್ನೂ ಪತ್ತೆಯಾಗಿಲ್ಲ. ಮಗನ ಕಳೆದುಕೊಂಡ ನೋವಿನಲ್ಲೇ, ತಂದೆ-ತಾಯಿ ಹಾಸಿಗೆ ಹಿಡಿದಿದ್ದಾರೆ.

ಇನ್ನು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದೇವೆ. ಪೊಲೀಸರಿಂದಲೂ ಮಗ ಪತ್ತೆಯಾಗಿಲ್ಲ, ಯಾವ ದೇವರು ನಮ್ಮ ಸಹಾಯಕ್ಕೆ ಬರ್ತಿಲ್ಲ. ಎಲ್ಲಾ ದೇವರ ಹರಕೆ ಹೊತ್ತಿದ್ದಾಯ್ತು, ಗುಡಿ ಗುಂಡಾರ ತಿರುಗಿದ್ದಾಯ್ತು. ಮಗ ಸಿಕ್ಕರೆ ಸಾಕು, ನಮಗೆ ಯಾವ ಆಸ್ತಿ-ಪಾಸ್ತಿ ಏನೂ ಬೇಡ. ನಮ್ಮ ಮಗನನ್ನ ಹುಡುಕಿ ತಂದುಕೊಟ್ಟವರಿಗೆ ಮನೆ ಮಠ ಎಲ್ಲವನ್ನೂ ಬಿಟ್ಟು ಕೊಡ್ತೀವಿ ಎಂದು ಬೇಡಿಕೊಳ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಡಲು ಹೋಗಿದ್ದ ಮಗ ಕಳೆದು ಹೋದ.. ಪುತ್ರನ ಹುಡುಕಿಕೊಟ್ಟವರಿಗೆ ಮೂರು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಅಪ್ಪ

https://newsfirstlive.com/wp-content/uploads/2023/07/gdg.jpg

Load More