ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡುವಾಗ ಎಚ್ಚರ ವಹಿಸಬೇಕು
ಬಾಲಕನನ್ನ ಪರೀಕ್ಷೆ ಮಾಡಿದಾಗ ಫುಲ್ ಶಾಕ್ ಆಗಿರುವ ಡಾಕ್ಟರ್ಸ್
ಮೊಬೈಲ್ ನೋಡುತ್ತಾ ಕಬ್ಬಿಣದ ಐಟಮ್ಗಳನ್ನ ನುಂಗಿದ್ದ ಬಾಲಕ!
ಪಾಟ್ನಾ: ಮೊಬೈಲ್ ಬಳಕೆ ಮಾಡುತ್ತಾ ನಾವು ಏನು ಮಾಡುತ್ತಿದ್ದೇವೆ ಎಂಬುದು ಸರಿಯಾಗಿ ಅರಿವಿಗೆ ಇರಲ್ಲ. ದಾರಿಯಲ್ಲಿ ನಡೆದು ಹೋಗುವಾಗ ಕೆಲವೊಮ್ಮೆ ಬೇರೆಯವರಿಗೆ ಡಿಕ್ಕಿಯಾಗಿರುವುದು ಇರುತ್ತದೆ. ಸದ್ಯ ಇಂತಹದೇ ಭಿನ್ನ ಘಟನೆವೊಂದು ನಡೆದಿದ್ದು ಬಾಲಕನೊಬ್ಬ ಮೊಬೈಲ್ ನೋಡುತ್ತ ನೋಡುತ್ತಲೇ ಕೀ, ಚಾಕು ಸೇರಿದಂತೆ ಇತರೆ ಕಬ್ಬಿಣದ ವಸ್ತುಗಳನ್ನು ನುಂಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ದರ್ಶನ್ ರೆಸಾರ್ಟ್ನಲ್ಲಿದ್ದಾರೋ, ಜೈಲಿನಲ್ಲಿದ್ದಾರೋ; ಕಣ್ಣೀರು ಹಾಕುತ್ತ ರೇಣುಕಾಸ್ವಾಮಿ ತಂದೆ ಏನಂದ್ರು?
ಬಾಲಕನೊಬ್ಬ ಮೊಬೈಲ್ ಫೋನ್ನಲ್ಲಿನ ಆನ್ಲೈನ್ ಗೇಮಿಂಗ್ ಹಾಗೂ ಸೋಶಿಯಲ್ ಮೀಡಿಯಾಗೆ ಅಡಿಕ್ಟ್ ಆಗಿ ಬಿಟ್ಟಿದ್ದಾನೆ. ಆತನು ಮೊಬೈಲ್ ಬಳಕೆ ಮಾಡುವ ಸಮಯದಲ್ಲಿ ತಾನು ಏನು ಮಾಡುತ್ತಾನೆ ಎಂಬುದು ಅರಿವಿಗೆ ಇರಲ್ಲ. ಹೀಗಾಗಿ ತನ್ನ ಪಕ್ಕದಲ್ಲಿ ಇಟ್ಟಿರುವಂತ ಕಬ್ಬಿಣದ ವಸ್ತುಗಳಾದ ಕೀ ಬಂಚ್, 2 ಉಗುರು ಕಟ್ ಮಾಡುವುದು (ನೈಲ್ ಕಟ್ಟರ್), ಚಾಕು ಸೇರಿ ಇತರೆ ಕೆಲ ವಸ್ತುಗಳನ್ನು ನುಂಗಿದ್ದನು. ಆದರೂ ಬಾಲಕನಿಗೆ ಏನು ಆಗಿರಲಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಬಿಗ್ ಶಾಕ್ ಕೊಟ್ಟ ಬಾಂಗ್ಲಾ ಪ್ಲೇಯರ್ಸ್.. ಐತಿಹಾಸಿಕ ದಾಖಲೆ ಬರೆದ ಆಟಗಾರರು
ಮನೆಯವರು ಕೀ ಬಂಚ್ ಎಲ್ಲಿದೆ ಎಂದು ಹುಡುಕಾಡುವಾಗ ಬಾಲಕ ತಾನು ನುಂಗಿರುವುದಾಗಿ ಹೇಳಿದ್ದಾನೆ. ಮೊದಲು ಇದು ತಮಾಷೆ ಎಂದು ತಿಳಿದಿದ್ದರು. ಬಳಿಕ ಗದರಿಸಿ ಕೇಳಿದಾಗ ನಾನೇ ನುಂಗಿದ್ದಾಗಿ ಹೇಳಿದ್ದಾನೆ. ಇದರಿಂದ ಬೆಚ್ಚಿ ಬಿದ್ದ ಮನೆಯವರು ತಕ್ಷಣ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಷಣೆ ಮಾಡಿಸಿದ್ದಾರೆ. ವೈದ್ಯರು ಸೋನೋಗ್ರಫಿ ಹಾಗೂ ಅಲ್ಟ್ರಾಸೌಂಡ್ ಮೂಲಕ ಪರೀಕ್ಷೆ ಮಾಡಿದಾಗ ಬಾಲಕನ ಹೊಟ್ಟೆಯಲ್ಲಿ ಕಬ್ಬಿಣದ ವಸ್ತುಗಳು ಇರುವುದು ದೃಢವಾಗಿದೆ. ಬಳಿಕ ಸತತ ಒಂದು ಗಂಟೆ ಆಪರೇಷನ್ ಮಾಡಿ ಹೊಟ್ಟೆಯಲ್ಲಿದ್ದ ಎಲ್ಲ ಕಬ್ಬಿಣದ ವಸ್ತುಗಳನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ಡಾಕ್ಟರ್ ಅಮಿತ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಬಾಲಕನ ತಾಯಿ ಮಾತನಾಡಿ, ಸ್ಮಾರ್ಟ್ಫೋನ್ಗೆ ಮಗ ಅಡಿಕ್ಟ್ ಆಗಿ ಸೋಶಿಯಲ್ ಮೀಡಿಯಾ, ಆನ್ಲೈನ್ ಗೇಮಿಂಗ್ ಅನ್ನು ಹೆಚ್ಚಾಗಿ ಆಡುತ್ತಿದ್ದ. ವಿಡಿಯೋಸ್, ರೀಲ್ಸ್ ಹೆಚ್ಚು ಹೆಚ್ಚಾಗಿ ನೋಡುತ್ತಿದ್ದರಿಂದ ಮೆಂಟಲಿ ವೀಕ್ ಆಗಿದ್ದ. ನಂತರ ಪಬ್ಜೀ ಆಡಲು ಶುರು ಮಾಡಿದನೋ ಆವಾಗಿನಿಂದ ಮೆಂಟಲಿ ಬಹಳ ವೀಕ್ ಆಗಿಬಿಟ್ಟಿದ್ದ ಎಂದು ಹೇಳಿದ್ದಾರೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ನಗರದ ಚಂಡಿಮರಿ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ