newsfirstkannada.com

VIDEO: ಹೈವೇನಲ್ಲಿ ಮತ್ತೆ ಪುಂಡರ ಹಾವಳಿ; ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ವಾಹನ ಸವಾರರು ಜಸ್ಟ್ ಮಿಸ್

Share :

15-08-2023

  ಹೆದ್ದಾರಿಗಳಲ್ಲಿ ಮತ್ತೆ ಹೆಚ್ಚಾಯ್ತು ಯುವಕರ ವ್ಹೀಲಿಂಗ್ ಹುಚ್ಚಾಟ

  ಪುಂಡರ ದುಸ್ಸಾಹಸದಿಂದ ರಸ್ತೆಯಲ್ಲಿ ಹೋಗುವವರಿಗೆ ಪರದಾಟ

  ಬೈಕ್ ವ್ಹೀಲಿಂಗ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಳ್ತಾರೆ

ಚಿಕ್ಕಬಳ್ಳಾಪುರ: ಇತ್ತೀಚೆಗೆ ರಾಜ್ಯದಲ್ಲಿ ಬೈಕ್ ವ್ಹೀಲಿಂಗ್ ಹುಚ್ಚಾಟಗಳು ಹೆಚ್ಚಾಗುತ್ತಲೇ ಇದೆ. ಪಡ್ಡೆ ಹುಡುಗರಿಗೆ ವ್ಹೀಲಿಂಗ್ ಒಂದು ಕ್ರೇಜ್ ಆದ್ರೆ ರಸ್ತೆಯಲ್ಲಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಅಲ್ಲದೇ ಕೆಲವರು ಬೈಕ್ ವ್ಹೀಲಿಂಗ್ ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಂಡಿರೋ ಉದಾಹರಣೆಗಳು ಇವೆ. ಇಷ್ಟಾದರೂ ಕೆಲ ಪುಂಡರು ಬೈಕ್ ವ್ಹೀಲಿಂಗ್ ಮಾಡುವುದನ್ನು ನಿಲ್ಲಿಸುತ್ತಿಲ್ಲ. ಈ ಸಂಬಂಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಯುವಕರು ಮಾತು ಕೇಳದೆ ರಸ್ತೆಯಲ್ಲೇ ಪುಂಡಾಟ ಮಾಡುತ್ತಿದ್ದಾರೆ.

ಇದೀಗ ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 44ರ ಸೇಟ್​ ದನ್ನೆ ಬಳಿ ಇಬ್ಬರು ಯುವಕರು ಬೈಕ್​ ವ್ಹೀಲಿಂಗ್​ ಮಾಡಿದ್ದಾರೆ. ಈ ವ್ಹೀಲಿಂಗ್ ಮಾಡುತ್ತಿರೋ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಯುವಕರ ಈ ರೀತಿಯ ಹುಚ್ಚಾಟದಿಂದ ಹೆದ್ದಾರಿ ವಾಹನ ಸವಾರರಿಗೆ ಅಪಾಯ ಎದುರಾಗಿದೆ. ಹೀಗಾಗಿ ವ್ಹೀಲಿಂಗ್‌ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ. ಯುವಕರು ವ್ಹೀಲಿಂಗ್​ ಮಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹೈವೇನಲ್ಲಿ ಮತ್ತೆ ಪುಂಡರ ಹಾವಳಿ; ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ವಾಹನ ಸವಾರರು ಜಸ್ಟ್ ಮಿಸ್

https://newsfirstlive.com/wp-content/uploads/2023/08/bike-wheeling.jpg

Load More