newsfirstkannada.com

ಸಚಿವ ಡಿ. ಸುಧಾಕರ್​​ ವಿರುದ್ಧ ರೊಚ್ಚಿಗೆದ್ದ ಬ್ರಾಹ್ಮಣ ಸಮುದಾಯ; ಕಾರಣವೇನು ಗೊತ್ತಾ?

Share :

13-09-2023

    ದಲಿತರ ಮೇಲೆ ದರ್ಪ.. ಬ್ರಾಹ್ಮಣರ ಅವಹೇಳನ

    ಬಯಲಾಯ್ತು ಸುಧಾಕರ್​ ಅಸಲಿ ಮುಖವಾಡ

    ಬ್ರಾಹ್ಮಣ ಸಮುದಾಯವನ್ನ ಕೆರಳಿಸಿದ ಸುಧಾಕರ್

ಬೆಂಗಳೂರು: ಮಚ್ಚು-ಕೊಡಲಿಯ ದರ್ಪ, ದೌಲತ್ತಿನ ಮಾತುಗಳ ಜೊತೆಗೆ ದಲಿತರ ಮೇಲೆ ಸಚಿವರ ದೌರ್ಜನ್ಯದ ಕೇಸ್‌ ಸಂಚಲನ ಸೃಷ್ಟಿಸಿದೆ. ಇತ್ತ, ಬ್ರಾಹ್ಮಣ ಸಮುದಾಯದ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವ ಡಿ. ಸುಧಾಕರ್ ಧಮ್ಕಿ ಹಾಕಿದ ವಿಡಿಯೋವೊಂದನ್ನ ನ್ಯೂಸ್​​ಫಸ್ಟ್​​ ಎಕ್ಸ್​ಪೋಸ್​​ ಮಾಡಿದೆ. ದಲಿತರ ಜೊತೆ ಈಗ ಬ್ರಾಹ್ಮಣ ಸಮುದಾಯ ಕೂಡ ಕೆರಳಿ ನಿಂತಿದೆ.

ಒಂದ್ಕಡೆ ದಲಿತರ ಮೇಲೆ ದರ್ಪ, ದೌರ್ಜನ್ಯದ ವಿಡಿಯೋ ರಿಲೀಸ್​​ ಆಗಿದ್ರೆ, ಇನ್ನೊಂದ್ಕಡೆ ಬ್ರಾಹ್ಮಣರ ಅವಹೇಳನ ಸಂಬಂಧ ಮತ್ತೊಂದು ವಿಡಿಯೋ ಸ್ಫೋಟಗೊಂಡಿದೆ. ಸಮಾಜದಲ್ಲಿ ಸುಧಾರಕನ ಮುಖವಾಡ ಹೊತ್ತಿದ್ದ ಸಚಿವ ಸುಧಾಕರ್​​​ ಅಸಲೀ ಮುಖ ನ್ಯೂಸ್​ಫಸ್ಟ್​​ನಲ್ಲಿ ಬಟಾ ಬಯಲಾಗಿದೆ.

ದಲಿತರ ಬಳಿಕ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನ!

ಡಿ.ಸುಧಾಕರ್​​ ಹಿರಿಯೂರಿನ ಹಿರಿಯ ಶಾಸಕ. ಸರ್ಕಾರದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಮಂತ್ರಿ. ಸುಧಾಕರ್​​ ಕೊರಳಿಗೆ ಈಗ ಭೂಕಂಟಕವೊಂದು ಸುತ್ಕೊಂಡಿದೆ. ದಲಿತರ ಮೇಲೆ ಸಚಿವ ಸುಧಾಕರ್ ದೌರ್ಜನ್ಯ ಮಾಡಿದ ಆರೋಪ ಹೊತ್ತಿದ್ದು, ನೊಂದ ಜೀವಗಳ ಕಣ್ಣೀರಿನ ಶಾಪಕ್ಕೂ ಗುರಿ ಆಗಿದ್ದಾರೆ. ಸಚಿವರ ದೌರ್ಜನ್ಯ ಬಗ್ಗೆ ನ್ಯೂಸ್​ಫಸ್ಟ್​ ನಿರಂತರ ಕವರೇಜ್​ ಮಾಡ್ತಿದ್ದು, ಇವತ್ತು ಸಚಿವ ನಡೆ ಬಗ್ಗೆ ಮತ್ತೊಂದು ಬಿಗ್ ಎಕ್ಸ್​ಪೋಸ್ ಮಾಡಿದೆ. ಇದರ ಬೆನ್ನಲ್ಲೇ ಸಚಿವ ಸುಧಾಕರ್​​​​ ನಾಲಿಗೆ ಹರಿಬಿಟ್ಟ ವಿವಾದಾತ್ಮಕ ಹೇಳಿಕೆಯ ವಿಡಿಯೋ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ.

ಬ್ರಾಹ್ಮಣರಿಗೆ ಯಾಕೆ ಹೆದರಿಕೊಳ್ತಾರೆ ಗೊತ್ತಾ ಎಂದ ಸುಧಾಕರ್‌!

ಸಚಿವ ಡಿ. ಸುಧಾಕರ್ ಅವರ ಬಳಿ ನ್ಯಾಯ ಕೇಳಲು ಹೋದವರಿಗೆ ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಇದೆಂಥ ಮಾತು ಹೇಳಿದ್ದಾರೆ ನೋಡಿ. ದಲಿತರ ಮೇಲೆ ದೌರ್ಜನ್ಯ ಆರೋಪ ಹೊತ್ತ ಸಚಿವರು, ಈ ಬಾರಿ ಬಳಸಿದ್ದು ಅಕ್ಷಮ್ಯ ಪದಗಳನ್ನ ಅವಹೇಳನದ ಪದಗಳನ್ನ. ನ್ಯೂಸ್​ಫಸ್ಟ್​ಗೆ ಸುಧಾಕರ್​ ನಾಲಿಗೆ ಹರಿಬಿಟ್ಟ ವಿಡಿಯೋ ಲಭ್ಯ ಆಗಿದೆ.

ಬ್ರಾಹ್ಮಣ ಸಮುದಾಯವನ್ನ ಎಳೆದು ತಂದ ಸುಧಾಕರ್​​​​, ಜನಿವಾರದಲ್ಲೇ ನೇಣು ಹಾಕ್ತಾರೆ. ನಾವು ಹೆದರಿಕೊಳ್ಳೋದು, ಅವರು ಪೆನ್​​ನಲ್ಲಿ ಕಟ್ಟಿ ಹಾಕ್ತಾರೆ ಎಂದ ಸುಧಾಕರ್​​​, ನೊಂದ ಕುಟುಂಬದ ಜೊತೆ ಮಾತಿನ ವೇಳೆ ಅಶ್ಲೀಲ ಪದ ಬಳಕೆ ಮಾಡಿ ಅವಮಾನಿಸಿದ್ದಾರೆ..

ಬ್ರಾಹ್ಮಣರನ್ನ ನಿಂದಿಸುವ ಕಾರ್ಯ ಅಕ್ಷಮ್ಯ ಅಪರಾಧ

ಇನ್ನು, ತಮ್ಮ ಭೂಸುಳಿಯಲ್ಲಿ ಬ್ರಾಹ್ಮರನ್ನ ಎಳೆದು ತಂದು ನಿಂದಿಸುವ ಕಾರ್ಯ ಅಕ್ಷಮ್ಯ ಅಂತಕ್ಕೆ ಬ್ರಾಹ್ಮಣ ಸಮುದಾಯ ಕಿಡಿಕಾರಿದೆ. ಜನಿವಾರದ ಬಗ್ಗೆ ಮಾತನಾಡಿ ನಮ್ಮ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ನಮ್ಮ ತಾಳ್ಮೆ, ನಮ್ಮ ದೌರ್ಬಲ್ಯವಲ್ಲ. ಕೂಡಲೇ ಸಂಪುಟದಿಂದ ಸುಧಾಕರ್​​ರನ್ನ ವಜಾ ಮಾಡಿ ಅಂತ ಸಿಎಂಗೆ ಆಗ್ರಹಿಸಿದ್ದಾರೆ.

ಒಟ್ಟಾರೆ, ಸಚಿವ ಸುಧಾಕರ್​ ಆಡಿದ ಮಾತು ಬ್ರಾಹ್ಮಣ ಸಮುದಾಯವನ್ನ ಕೆರಳಿಸಿದೆ. ತಮ್ಮ ಭೂ ಹಗರಣದಲ್ಲಿ ನಮ್ಮನ್ನ ಯಾಕೆ ಎಳೆದಿದ್ದು ಅಂತ ಪ್ರಶ್ನಿಸಿದ್ದಾರೆ. ಇನ್ನೊಂದ್ಕಡೆ ಅಟ್ರಾಸಿಟಿ ಕೇಸ್​​ನಲ್ಲಿ ಸಿಲುಕಿದ ಸುಧಾಕರ್​​, ದಲಿತ ಸಮುದಾಯದ ಆಕ್ರೋಶ ಗುರಿ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಚಿವ ಡಿ. ಸುಧಾಕರ್​​ ವಿರುದ್ಧ ರೊಚ್ಚಿಗೆದ್ದ ಬ್ರಾಹ್ಮಣ ಸಮುದಾಯ; ಕಾರಣವೇನು ಗೊತ್ತಾ?

https://newsfirstlive.com/wp-content/uploads/2023/09/Minister-Sudhakar-2.jpg

Load More