newsfirstkannada.com

ಮೆದುಳು ಚೆನ್ನಾಗಿ ವರ್ಕ್​ ಆಗಬೇಕು ಅಂದ್ರೆ ಏನೇನು ಮಾಡಬೇಕು? ಮೊಬೈಲ್​ನಲ್ಲಿ ಗೇಮ್ಸ್​ ಆಡಬೇಕೋ, ಬೇಡ್ವೋ?

Share :

20-06-2023

    ಹೆಚ್ಚು ನಿದ್ದೆ ಮಾಡುವುದರಿಂದ ಮೆದುಳು ಆರೋಗ್ಯಕರವಾಗಿರುತ್ತದೆ

    ಮಕ್ಕಳು ವಿಷಯವನ್ನು ಬೇಗ ಅರ್ಥೈಸಿಕೊಳ್ಳಲು ಆಗಲ್ಲ ಯಾಕೆ..?

    ಮೆದುಳನ್ನು ತಾಜಾ ಮತ್ತು ಆರೋಗ್ಯಕರವಾಗಿರಿಸಲು ಹೀಗೆ ಮಾಡಿ

ಮೆದುಳು ನಮ್ಮ ದೇಹದ ಪ್ರಮುಖವಾದ ಅಂಗ. ಈ ಒಂದು ಅಂಗದಿಂದ ದೇಹದ ಎಲ್ಲ ಅಂಗಗಳು ನಿರ್ದಿಷ್ಟವಾಗಿ ಕೆಲಸ ಮಾಡಲು ಶುರು ಮಾಡುತ್ತಾವೆ. ಮಗುವಿನಿಂದ ವೃದ್ಧರವರೆಗೆ ಮೆದುಳು ವಯಸ್ಸಿಗೆ ತಕ್ಕಂತೆ ಕೆಲಸ ಮಾಡುತ್ತದೆ. ಮಕ್ಕಳಲ್ಲಿ ಮೆದುಳಿನ ಸೆಲ್​ಗಳು ಸರಿಯಾಗಿ ಬೆಳವಣಿಗೆ ಆಗದ ಕಾರಣದಿಂದ ಮಕ್ಕಳು ಕೆಲವೊಂದು ವಿಚಾರಗಳನ್ನು ಬೇಗ ಅರ್ಥೈಸಿಕೊಳ್ಳಲು ಆಗುವುದಿಲ್ಲ. ಆ.. ಆ ವಯಸ್ಸಿಗೆ ತಕ್ಕಂತೆ ಮೆದುಳು ಬೆಳೆದಂತೆ ಜ್ಞಾನ ಕೂಡ ಬೆಳೆಯುತ್ತೆ.

ವೃದ್ಧರು ಆಗುತ್ತಿದ್ದಂತೆ ಮೆದುಳಿನ ಕೆಲವೊಂದು ಸೆಲ್​ಗಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತಾವೆ. ಹೀಗಾಗಿ ಅವರಲ್ಲಿ ಮರೆವು ಸಹಜವಾಗಿ ಮೂಡುತ್ತದೆ. ಇದನ್ನೇ ನಾವು 60 ರ ಅರುವು ಮರವು ಎಂದು ಕರೆಯುವುದುಂಟು. ಇಳಿ ವಯಸ್ಸಿನಲ್ಲಿ ಮೆದುಳು ಸಮಸ್ಯೆ ಬರುವುದು ಸಾಮಾನ್ಯ. ಈ ವೇಳೆ ವೈದ್ಯರ ಸಲಹೆ ಪಡೆದು ಆರೋಗ್ಯಕರವಾದ ಆಹಾರ ಸೇವನೆ ಮಾಡಿದ್ರೆ ಒಂದಿಷ್ಟು ನೆನಪಿನ ಶಕ್ತಿ ಕಾಪಾಡಿಕೊಂಡು ಹೋಗಬಹುದು.

ಮೆದುಳು ಸದಾ ಕ್ರಿಯೇಟಿವ್​ ಆಗಿರಲು ಏನು ಮಾಡಬೇಕು..?

  • ಮೆದುಳಿಗೆ ಹೊಸದನ್ನು ಕಲಿಯಬೇಕು ಎಂದರೇ ಇಷ್ಟ. ಹೀಗಾಗಿ ಹೊಸ ಭಾಷೆಗಳು, ಮ್ಯೂಸಿಕ್​, ಸಾಂಗ್ಸ್​ ಅನ್ನು ಕೇಳುವುದರ ಜೊತೆ ಜೊತೆಗೆ ಹೇಗೆ ಸಂಯೋಜನೆ ಮಾಡುವುದೆಂದು ಕಲಿಯುತ್ತಿದ್ದರೇ ನಿಮ್ಮ ಜ್ಞಾನ ವಿಸ್ತರಿಸುತ್ತದೆ.
  • ನಿಯಮಿತ ಧ್ಯಾನವು ಮಾನಸಿಕ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಒತ್ತಡ, ಆತಂಕ, ಖಿನ್ನತೆ ಕಡಿಮೆ ಮಾಡುತ್ತದೆ. ಇದು ಶಾಂತತೆಯನ್ನು ಉತ್ತೇಜಿಸುತ್ತದೆ. ಸ್ಮರಣೆಯನ್ನು ಸುಧಾರಿಸಿ ಮೆದುಳಿನ ಕಾರ್ಯ ಹೆಚ್ಚಿಸುತ್ತದೆ.
  • ಮೆದುಳು ಕ್ರಿಯಾಶೀಲವಾಗಿರಲು ಸದಾ ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಸಂಬಂಧಿಕರ ಅಥವಾ ಸ್ನೇಹಿತರೊಂದಿಗೆ ಬೆಳಗ್ಗೆ, ಸಂಜೆ ವಾಕ್​​​ ಮಾಡುವುದು ಉತ್ತಮ.
  • ವಿಡಿಯೋ ಗೇಮ್ಸ್​ ಹಾಗೂ ಮೊಬೈಲ್​ನಲ್ಲಿ ಗೇಮ್ಸ್​ ಆಡುವುದರಿಂದ ಮೆದುಳನ್ನು ಸಕ್ರಿಯಗೊಳಿಸಬಹುದು. ಆದ್ರೆ ಇದನ್ನು ತೀವ್ರ ಮಿತಿಯಲ್ಲಿ ಆಡಬೇಕು. ಗೇಮ್ಸ್​ಗೆ ಅಡಿಕ್ಟ್​ ಆಗಬಾರದು.
  • ದೇಹದಂತೆ ಮೆದುಳಿಗೆ ವಿಶ್ರಾಂತಿ ಬೇಕೇ ಬೇಕು. ಹೆಚ್ಚು ನಿದ್ದೆ ಮಾಡುವುದರಿಂದ ಮೆದುಳನ್ನು ರೀಚಾರ್ಜ್ ಮಾಡಬಹುದು.
  • ಚೆಸ್​, ಕೇರಂ, ಟೇಬಲ್​ ಟೆನ್ನಿಸ್​, ಸೆಟ್ಲ್​ ಕಾಕ್, ಖೋ ಖೋನಂತಹ ಆಟಗಳನ್ನು ಆಡುವುದರಿಂದ ಮೆದುಳು ಆರೋಗ್ಯವಾಗಿರುತ್ತೆ.
  • ನಾವು ನಿತ್ಯ ಯಾವುದಾದ್ರೂ ವಿಷಯಕ್ಕೆ ನಗುವುದರಿಂದ ಮೆದುಳನ್ನು ತಾಜಾ ಮತ್ತು ಆರೋಗ್ಯಕರವಾಗಿ ಇಡಬಹುದು.

ಇದರ ಜೊತೆಗೆ ಮಕ್ಕಳಾಗಲಿ, ವೃದ್ಧರಗಾಲಿ ಅಥವಾ ಮಹಿಳೆಯರೇ ಆಗಲಿ, ತಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕಾದ್ರೆ ಈ ಕೆಳಕಂಡ ಮಾಹಿತಿಯಂತೆ ದಿನಚರಿ ಮಾಡಬೇಕು.

  • ನೆನಪಿನ ಶಕ್ತಿ ವೃದ್ಧಿಗೆ ನಿತ್ಯ 2 ಚಮಚ ಜೇನುತುಪ್ಪವನ್ನು ಹಾಲಿಗೆ ಹಾಕಿ ಕುಡಿಯಬೇಕು.
  • ಇತ್ತೀಚಿನ ಸಂಶೋಧನೆ ಪ್ರಕಾರ ತಲೆಗೆ ಶ್ಯಾಂಪು ಬಳಸುವುದರಿಂದ ನೆನಪಿನ ಶಕ್ತಿ ಕುಂದುತ್ತದೆ ಎಂದು ಹೇಳಲಾಗುತ್ತದೆ.
  • ಮಲಗುವಾಗ ತಲೆ ದಿಂಬು ದೊಡ್ಡದಾಗಿ ಇರಬಾರದು, ಜೊತೆಗೆ ವಿಪರೀತ ಮಾನಸಿಕ ಒತ್ತಡಗಳನ್ನು ಅನುಭವಿಸಬಾರದು.
  • ತುಳಸಿ ಕಷಾಯ ಸೇವಿಸಬೇಕು. ಆಗಾಗ ಜೀರಿಗೆ ಕಷಾಯ ಕೂಡ ಸೇವಿಸುವುದು ಮೆದುಳಿಗೆ ಒಳ್ಳೆಯದು.
  • ಮೆದುಳಿಗೆ ಸಮಸ್ಯೆ ಆಗಬಾರದು ಎಂದರೆ 1 ಲೋಟ ಹಸು ಹಾಲಿನ ಜೊತೆಗೆ 2 ಚಮಚ ಜೇನುತುಪ್ಪ, 1 ಚಮಚ ಹಸು ತುಪ್ಪ ಸೇರಿಸಿ ಕುಡಿಯಬೇಕು.
  • ನಿತ್ಯ ವ್ಯಾಯಾಮದಿಂದ ಮೆದುಳು ಚುರುಕುಗೊಳ್ಳುತ್ತದೆ. ವ್ಯಾಯಾಮ ಮಾಡುವಾಗ ಮೆದುಳಿಗೆ ರಕ್ತದ ಹರಿವು ಹೆಚ್ಚಿ ಆರೋಗ್ಯ ಸುಧಾರಿಸುತ್ತದೆ.

ವಿಶೇಷ ವರದಿ: ಭೀಮಪ್ಪ. ನ್ಯೂಸ್​ಫಸ್ಟ್​ ಡಿಜಿಟಲ್ ಡೆಸ್ಕ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆದುಳು ಚೆನ್ನಾಗಿ ವರ್ಕ್​ ಆಗಬೇಕು ಅಂದ್ರೆ ಏನೇನು ಮಾಡಬೇಕು? ಮೊಬೈಲ್​ನಲ್ಲಿ ಗೇಮ್ಸ್​ ಆಡಬೇಕೋ, ಬೇಡ್ವೋ?

https://newsfirstlive.com/wp-content/uploads/2023/06/BRAIN_HEALTH.jpg

Load More