newsfirstkannada.com

×

ದರೋಡೆಕೋರರ ವಿರುದ್ಧ ಏಕಾಂಗಿಯಾಗಿ ಹೋರಾಡಿದ ವೀರ ಮಹಿಳೆ.. ಗೃಹಿಣಿಯಿಂದ ಮನೆ, ಮಕ್ಕಳು ಎಲ್ಲ ಸೇಫ್​!

Share :

Published October 2, 2024 at 9:32am

    ಹಾಡಹಗಲೇ ನಗರದ ಮನೆಗೆ ನುಗ್ಗಿದ್ದ ದರೋಡೆಕೋರರು

    ದುಷ್ಕರ್ಮಿಗಳಿಂದ ತನ್ನ ಕುಟುಂಬ ರಕ್ಷಿಸಿಕೊಂಡ ಮಹಿಳೆ

    ಮೂವರು ಖದೀಮರ ವಿರುದ್ಧ ಮಹಿಳೆ ಹೋರಾಟವಿದು

ಚಂಡೀಗಢ: ಮನೆ ರಾಬರಿ ಮಾಡಲು ಬಂದಿದ್ದ ಮೂವರು ದರೋಡೆಕೋರರ ವಿರುದ್ಧ ನಿರ್ಭೀತಿಯಿಂದ ಹೋರಾಡಿ ಆಗುವ ಅನಾಹುತವನ್ನ ಗೃಹಿಣಿ ತಡೆದಿದ್ದಾರೆ. ವೀರ ಮಹಿಳೆ ಮನೆ ಒಳಕ್ಕೂ ಖದೀಮರನ್ನು ಬಾರದಂತೆ ತನ್ನ ಶೌರ್ಯ ತೋರಿದ್ದು ಕುಟುಂಬವನ್ನ ಸೇಫ್ ಮಾಡಿದ್ದಾರೆ.

ಪಂಜಾಬ್​ನ ಅಮೃತಸರದ ನಿವಾಸವೊಂದಕ್ಕೆ ಮೂವರ ಖದೀಮರು ರಾಬರಿ ಮಾಡಲೆಂದು ನುಗ್ಗಿದ್ದಾರೆ. ಕಾಂಪೌಂಡ್ ಜಂಪ್ ಮಾಡಿ ಬಂದ ಮೂವರು ದುಷ್ಕರ್ಮಿಗಳು ಮಾಸ್ಕ್ ಧರಿಸಿ ನಿವಾಸದ ಒಳಗೆ ಏಕಾಏಕಿ ನುಗ್ಗಿದ್ದಾರೆ. ಆದರೆ ಈ ವೇಳೆ ಮನೆ ಒಳಗಿದ್ದ ಮಹಿಳೆ ಆಗಂತುಕರನ್ನ ನೋಡಿ ತಕ್ಷಣ ಬಾಗಿಲು ಮುಚ್ಚಲು ಹರಸಾಹಸ ಪಟ್ಟಿದ್ದಾರೆ. ಹೊರಗಿನಿಂದ ಮೂವರು ಬಾಗಿಲನ್ನು ತಳ್ಳುತ್ತಿದ್ದರೆ ಒಳಗಿನಿಂದ ಮಹಿಳೆ ಒಬ್ಬರೇ ತನ್ನ ಎಲ್ಲ ಶಕ್ತಿ ಉಪಯೋಗಿಸಿ ಬಾಗಿಲಿನ ಚಿಲಕ ಹಾಕಿದ್ದಾರೆ. ಬಳಿಕ ಅದಕ್ಕೆ ಸೋಪಾ ತಂದು ಅಡ್ಡ ಇಟ್ಟಿದ್ದಾರೆ. ಇದರಿಂದ ಬಾಗಿಲನ್ನು ದಬಾಯಿಸಿದ ದುಷ್ಕರ್ಮಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಯಿಂದ ಓಡಿ ವಾಪಸ್ ಹೋಗಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​​, ಸೂರ್ಯ ಮಧ್ಯೆ ಬಿಗ್​ ವಾರ್​​.. ಒಂದೇ ದಿನ ತೆರೆ ಮೇಲೆ ಇಬ್ಬರು ಮುಖಾಮುಖಿ

ಮನೆಯಲ್ಲಿ ಇಬ್ಬರ ಮಕ್ಕಳ ಜೊತೆ ಮಹಿಳೆ ಇರುವಾಗ ಈ ಘಟನೆ ನಡೆದಿದ್ದು ದರೋಡೆಕೋರರಿಂದ ತನ್ನ ಕುಟುಂಬವನ್ನು ಕಾಪಾಡಿಕೊಂಡಿದ್ದಾರೆ. ಏಕಾಂಗಿಯಾಗಿ ಹೋರಾಡಿ ಆಗಂತುಕರನ್ನ ಓಡಿಸಿದ್ದಾರೆ. ಈ ಘಟನೆಯಿಂದ ಎರಡು ಮಕ್ಕಳು ಭಯಭೀತರಾಗಿದ್ದರು. ಬಳಿಕ ಮಹಿಳೆ ಮೊಬೈಲ್ ತೆಗೆದುಕೊಂಡು ತಮ್ಮವರಿಗೆ ಫೋನ್ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದು ಫುಲ್ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರೋಡೆಕೋರರ ವಿರುದ್ಧ ಏಕಾಂಗಿಯಾಗಿ ಹೋರಾಡಿದ ವೀರ ಮಹಿಳೆ.. ಗೃಹಿಣಿಯಿಂದ ಮನೆ, ಮಕ್ಕಳು ಎಲ್ಲ ಸೇಫ್​!

https://newsfirstlive.com/wp-content/uploads/2024/10/PUNJAB_WOMAN.jpg

Load More