newsfirstkannada.com

ಶಸ್ತ್ರಚಿಕಿತ್ಸೆ ವೇಳೆ ದಿಢೀರ್​ ಕಾರ್ಡಿಯಾಕ್ ಅರೆಸ್ಟ್‌; ಫೇಮಸ್ ಮಾಡೆಲ್ ದಾರುಣ ಸಾವು

Share :

09-11-2023

    ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ರು ಸೋಶಿಯಲ್ ಮೀಡಿಯಾ ಸ್ಟಾರ್!

    ದೇಹದ ಅಂದವನ್ನು ಹೆಚ್ಚಿಸುವ ಸಲುವಾಗಿ ಸಾವೊ ಪಾಲೊ ಆಸ್ಪತ್ರೆಗೆ ದಾಖಲು

    ತಮ್ಮ 29ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಬ್ರೆಜಿಲ್​​​ನ ಫೇಮಸ್ ಮಾಡೆಲ್

ಜನಪ್ರಿಯ ಬ್ರೆಜಿಲ್​​​ನ ಫೇಮಸ್ ಮಾಡೆಲ್, ಸೋಶಿಯಲ್ ಮೀಡಿಯಾ ಸ್ಟಾರ್ ಲುವಾನಾ ಆಂಡ್ರೇಡ್ ಸಾವನ್ನಪ್ಪಿದ್ದಾರೆ. ಲುವಾನಾ ಆಂಡ್ರೇಡ್ ಅವರು ತಮ್ಮ 29ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ದೇಹದ ಅಂದವನ್ನು ಹೆಚ್ಚಿಸುವ ಸಲುವಾಗಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆಂದು ಸಾವೊ ಪಾಲೊ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ಶಸ್ತ್ರಚಿಕಿತ್ಸೆ ಮಾಡುತ್ತಿರುವ ಸಮಯದಲ್ಲಿ ಲುವಾನಾಗೆ ನಾಲ್ಕು ಬಾರಿ ಕಾರ್ಡಿಯಾಕ್ ಅರೆಸ್ಟ್‌ ಆಗಿದೆ. ತಕ್ಷಣ ಅವರನ್ನ ಐಸಿಯುಗೆ ಶಿಫ್ಟ್‌ ಮಾಡಿದ ವೈದ್ಯರು ಬದುಕಿಸಲು ಪ್ರಯತ್ನಿಸಿದ್ರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮಾಡೆಲ್‌ ಲುವಾನಾ ಮೃತಪಟ್ಟಿದ್ದಾರೆ. ಇನ್ನೂ ಈ ಬಗ್ಗೆ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಲುವಾನಾ ಆಂಡ್ರೇಡ್ ಗೆಳೆಯ ಜೋವೊ ಹದಾದ್ ಅವರು ನಿನ್ನನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇನ್ನೂ, ಬ್ರೆಜಿಲಿಯನ್ ಖ್ಯಾತ ಫುಟ್ಬಾಲ್ ಆಟಗಾರ ನೇಮರ್ ಕೂಡ ಗೌರವ ಸಲ್ಲಿಸಿದರು.

ಮೃತ ಲುವಾನಾ ಆಂಡ್ರೇಡ್ ಅವರು 2022ರಲ್ಲಿ ಪವರ್ ಕಪಲ್ ಬ್ರೆಸಿಲ್ 6 ಎಂಬ ರಿಯಾಲಿಟಿ ಶೋನ ಭಾಗವಾಗಿದ್ದರು. ಜೊತೆಗೆ ಸೋಷಿಯಲ್ ಮೀಡಿಯಾ ಸಖತ್​ ಆಕ್ಟಿವ್​ ಆಗಿದ್ದರು. ಇವರ ಸಾವಿಗೆ ಸಾಕಷ್ಟು ಜನರು ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಸ್ತ್ರಚಿಕಿತ್ಸೆ ವೇಳೆ ದಿಢೀರ್​ ಕಾರ್ಡಿಯಾಕ್ ಅರೆಸ್ಟ್‌; ಫೇಮಸ್ ಮಾಡೆಲ್ ದಾರುಣ ಸಾವು

https://newsfirstlive.com/wp-content/uploads/2023/11/death-2023-11-09T074449.710.jpg

Load More