newsfirstkannada.com

×

ಚೆನ್ನೈನಲ್ಲೊಂದು Breaking Bad ಕಥೆ ; ಡ್ರಗ್​ ತಯಾರಿಸಲೆಂದು 7 ಕೆಮೆಸ್ಟ್ರಿ ವಿದ್ಯಾರ್ಥಿಗಳ ನೇಮಕ!ಕೊನೆಗೆ ಆಗಿದ್ದೇನು?

Share :

Published October 25, 2024 at 4:11pm

Update October 26, 2024 at 5:33pm

    ಚೆನ್ನೈನಲ್ಲಿ ಬ್ರೇಕಿಂಗ್ ಬ್ಯಾಡ್​ ಶೋನಂತಹುದೇ ಒಂದು ಥ್ರಿಲ್ಲಿಂಗ್ ಕಥೆ

    ಮೆಥಾಂಫೆಟಮೈನ್ ಎಂಬ ಮಾದಕ ವಸ್ತು ಸಿದ್ಧಗೊಳಿಸುತ್ತಿದ್ದ ವಿದ್ಯಾರ್ಥಿಗಳು

    ಕೆಮೆಸ್ಟ್ರಿ ವಿದ್ಯಾರ್ಥಿಗಳ ಗುಂಪಿನ ಈ ಐಡಿಯಾ ಭೇದಿಸಿದ ಚೆನ್ನೈ ಪೊಲೀಸ್​

ಸಿನಿಮಾ ವೆಬ್​ ಸಿರೀಸ್​ಗಳು ಈಗ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ದೊಡ್ಡ ಹವಾ ಸೃಷ್ಟಿಸುತ್ತವೆ. ಅದರಲ್ಲೂ ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾಗಳು ಜನರನ್ನು ಹೆಚ್ಚು ಸೆಳೆಯುತ್ತವೆ. ಅಂತಹುದೇ ಒಂದು ಶೋ ಈಗ ನೆಟ್​ಫ್ಲಿಕ್ಸ್​ನಲ್ಲಿ ನಮಗೆ ಕಾಣಸಿಗುತ್ತದೆ. ಅದರ ಹೆಸರು ಬ್ರೇಕಿಂಗ್ ಬ್ಯಾಡ್ ಅಂತ. ಅದರಲ್ಲಿ ಬರುವ ವಾಲ್ಟರ್ ವೈಟ್​ ಪಾತ್ರಧಾರಿಯ ಕಥೆಯನ್ನೇ ಹೋಲುವ ಒಂದು ಘಟನೆ ಚೆನ್ನೈನಲ್ಲಿ ನಡೆದಿದೆ.

ವಿಪರೀತ ಮಾದಕತೆ ತರಿಸುವ ಡ್ರಗ್​ ತಯಾರಿಸಲು 7 ಕೆಮೆಸ್ಟ್ಟೀ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡು ಮೆಥೆಲ್ ಸೃಷ್ಟಿಗೆ ಸಜ್ಜಾಗಿದ್ದ ಟೀಮ್​ ಒಂದನ್ನು ಚೆನ್ನೈ ಪೋಲಿಸರ ಭೇದಿಸಿದ್ದಾರೆ. ಚೆನ್ನೈನಲ್ಲಿ 7 ಜನರ ಗುಂಪೊಂದು ತಮ್ಮದೇ ಆದ ರಹಸ್ಯ ಲ್ಯಾಬರೊಟರಿಯನ್ನು ಸಿದ್ಧಪಡಿಸಿ ಈ ವಿಪರೀತ ಅಮಲು ಏರಿಸುವ ಮಾದಕ ವಸ್ತು ತಯಾರಿಸಲು ಸಜ್ಜಾಗಿದ್ದತ್ತು. ಈ ವಿಷಯವನ್ನು ತಿಳಿದು ಚೆನ್ನೈ ಪೊಲೀಸರು ಆ ಪ್ರಯೋಗಾಲಯದ ಮೇಲೆ ದಾಳಿ ಮಾಡಿ 7 ಜನರನ್ನು ಬಂಧಿಸಿದ್ದಾರೆ.
ಬಂಧಿತರಾದವರಲ್ಲಿ ಐದು ಜನ ಚೆನ್ನೈನ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜನಿಯರಿಂಗ್ ಓದುತ್ತಿರು ಹಾಗೂ ಓದು ಮುಗಿಸಿರುವ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇನ್ನೊಬ್ಬ ಮತ್ತೊಂದು ಕಾಲೇಜಿನಲ್ಲಿ ಬಿಎಸ್​ಸಿಯಲ್ಲಿ ಗೋಲ್ಡ್​ ಮೆಡಲ್ ಪಡೆದವನು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆ.. ವರನಿಗೆ ಅನಿರೀಕ್ಷಿತ ಟ್ವಿಸ್ಟ್​ ನೀಡಿದ ಮದುಮಗಳು.. ಆಗಿದ್ದೇನು?

ಪದವಿದರರ ಈ ಗುಂಪು ಇತ್ತೀಚೆಗೆ ಡ್ರಗ್ ಪೆಡ್ಲಿಂಗ್​ನಲ್ಲಿ ತೊಡಗಿಕೊಂಡಿತ್ತು. ಸಣ್ಣ ಪ್ರಮಾಣದ ಮೆಥಾಂಫೆಟಮೈನ್ ಎಂಬ ವಿಪರೀತ ಅಮಲು ಏರಿಸುವ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು. ಅರುಣ್ ಕುಮಾರ ಎಂಬ ವ್ಯಕ್ತಿಯಿಂದ ಇದನ್ನು ಖರೀದಸುತ್ತಿದ್ದರು ಎಂದು ತಿಳಿದು ಬಂದಿದೆ.ಇದಾದ ಮೇಲೆ ತಾವೇ ಸ್ವತಃ ಆ ಮಾದಕ ವಸ್ತುವನ್ನು ತಯಾರಿಸುವ ಐಡಿಯಾಗೆ ಬಂದಿದ್ದಾರೆ. ಬಂಧಿತರಲ್ಲಿ ಒಬ್ಬ ತಾನು ಕೆಫೆ ಬ್ಯುಸಿನೆಸ್ ಮಾಡುತ್ತೇನೆ ಎಂದು ಹೇಳಿ ಮನೆಯಲ್ಲಿ ದುಡ್ಡು ಪಡೆದುಕೊಂಡು ಬಂದು ಈ ಒಂದು ಪ್ರಯೋಗಾಲಯವನ್ನು ರೆಡಿ ಮಾಡಿದ್ದನಂತೆ.

ಇದನ್ನೂ ಓದಿ: ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಹಾದು ಹೋದ ಸೈಕ್ಲೋನ್; ಭಾರೀ ಭೂಕುಸಿತ, ಭಯಂಕರ ಮಳೆ..!

ಪ್ರಯೋಗಾಲಯದ ಮೇಲೆ ದಾಳಿ ಮಾಡಿರುವ ಪೊಲೀಸರು 250 ಗ್ರಾ ಮೆಥಾಂಫೆಟಮೈನ್ ಎಂಬ ಮಾದಕ ವಸ್ತು, 7 ಮೊಬೈಲ್​ ಹಾಗೂ ಒಂದು ಲ್ಯಾಪ್​ಟಾಪ್ ವಶಕ್ಕೆ ಪಡೆದಿದ್ದಾರೆ. ಸದ್ಯ 7 ಜನರನ್ನು ಬಂಧಿಸಿರುವ ಪೊಲೀಸರು ಇನ್ನೂ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವಿಷಯ ದೊಡ್ಡ ಮಟ್ಟದಲ್ಲಿ ಸದ್ಯ ತಮಿಳುನಾಡಿನಲ್ಲಿ ಸುದ್ದಿಯಾಗಿದ್ದು. ಸಿಎಂ ಎಂ.ಕೆ.ಸ್ಟಾಲಿನ್ ದಯವಿಟ್ಟು ಯುವ ಜನತೆ ಡ್ರಗ್ಸ್​​ಗಳಿಂದ ದೂರವಿರಿ ಎಂದು ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೆನ್ನೈನಲ್ಲೊಂದು Breaking Bad ಕಥೆ ; ಡ್ರಗ್​ ತಯಾರಿಸಲೆಂದು 7 ಕೆಮೆಸ್ಟ್ರಿ ವಿದ್ಯಾರ್ಥಿಗಳ ನೇಮಕ!ಕೊನೆಗೆ ಆಗಿದ್ದೇನು?

https://newsfirstlive.com/wp-content/uploads/2024/10/DRUG-PEDLING-1.jpg

Load More