ಇವತ್ತಿನ ಸಖತ್ ಸ್ಟೋರಿಯಲ್ಲಿ ಇಂಗ್ಲೆಂಡ್ ಆಟಗಾರನ ಕಥೆ
ನಾಮಕರಣ ಮಾಡಿರೋದ್ರ ಹಿಂದಿದೆ ಇಂಟ್ರೆಸ್ಟಿಂಗ್ ವಿಚಾರ!
ತನ್ನ ಕುದುರೆಗೆ ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಹೆಸೆರಿಟ್ಟಿದ್ದೇಕೆ..?
ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಬೆನ್ ಸ್ಟೋಕ್ಸ್ -ಕೋಚ್ ಬ್ರೆಂಡನ್ ಮೆಕಲಮ್ ಜುಗಲ್ಬಂದಿ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ. ವಿಶ್ವ ಕ್ರಿಕೆಟ್ ಲೋಕ ಈ ಭಲೇ ಜೋಡಿಗೆ ಫಿದಾ ಆಗಿದೆ. ಇದರ ನಡುವೆ ಮೆಕಲಮ್ ತನ್ನ ಕುದುರೆಗೆ ಬೆನ್ ಸ್ಟೋಕ್ಸ್ ಎಂದು ಹೆಸರಿಟ್ಟು ಅಚ್ಚರಿ ಮೂಡಿಸಿದ್ದಾರೆ.
ಇಂಗ್ಲೆಂಡ್ ತಂಡದ ಕೋಚ್ ಆಗಿ ಬ್ರೆಂಡನ್ ಮೆಕಲಮ್, ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಕ್ರಾಂತಿಯನ್ನು ಹುಟ್ಟಿ ಹಾಕಿದ್ದಾರೆ. ಸ್ಟೋಕ್ಸ್ ಹಾಗೂ ಮೆಕಲಮ್ ಜೋಡಿ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಕ್ಯಾಪ್ಟನ್ ಸ್ಟೋಕ್ಸ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರೋ ಮೆಕಲಮ್, ಆಫ್ ಫೀಲ್ಡ್ನಲ್ಲಿ ತಮ್ಮ ವಿಶೇಷ ನಡೆಯಿಂದ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ.
ಕ್ರಿಕೆಟ್ ಜೊತೆಗೆ ಕುದುರೆ ರೇಸಿಂಗ್ನಲ್ಲೂ ಮೆಕಲಮ್ ವಿಶೇಷವಾದ ಆಸಕ್ತಿ ಹೊಂದಿದ್ದಾರೆ. ಹಲವು ಕುದುರೆಗಳನ್ನ ಸಾಕಿರುವ ಮೆಕಲಮ್, ಅದರಲ್ಲಿ ಒಂದು ಕುದುರೆಗೆ ಬೆನ್ ಸ್ಟೋಕ್ಸ್ ಎಂದು ಹೆಸರಿಟ್ಟಿದ್ದಾರೆ. ನ್ಯೂಜಿಲೆಂಡ್ನಲ್ಲಿ ರೇಸಿಂಗ್ವೊಂದರಲ್ಲಿ ಈ ಕುದುರೆ ಭಾಗವಹಿಸಿದೆ. ಈ ರೇಸಿಂಗ್ನಲ್ಲಿ ಕುದುರೆಯು ರನ್ನರ್ ಅಪ್ ಅಂದರೆ 2ನೇ ಸ್ಥಾನ ಪಡೆದುಕೊಂಡಿದೆ. ಅಂದ್ಹಾಗೆ ಕುದುರೆಗೆ ಬೆನ್ ಸ್ಟೋಕ್ಸ್ ಎಂದು ನಾಮಕರಣ ಮಾಡಿರೋದ್ರ ಹಿಂದೆ ಇಂಟ್ರೆಸ್ಟಿಂಗ್ ವಿಚಾರ ಇದೆ.
ಅದೇನು ಅಂದ್ರೆ, ಬೆನ್ ಸ್ಟೋಕ್ಸ್ ಒಬ್ಬ ಫೈಟರ್. ಕೊನೆಯ ತನಕ ಹೋರಾಟ ಮಾಡಿ ಪಂದ್ಯವನ್ನ ಗೆಲ್ಲಿಸಿಕೊಳ್ಳುವ ಛಲದಂಕಮಲ್ಲ. ಬೆನ್ ಸ್ಟೋಕ್ಸ್ರ ಹೋರಾಟದ ಮನೋಭಾವ ಎಂಥವರಿಗೂ ಸ್ಫೂರ್ತಿ. ಹೀಗಾಗಿಯೇ ಕುದುರೆಗೂ ಫೈಟಿಂಗ್ ಸ್ಪಿರಿಟ್ ಇರಬೇಕು ಎಂಬ ಕಾರಣಕ್ಕಾಗಿ ಬೆನ್ ಸ್ಟೋಕ್ಸ್ ಎಂದು ಮೆಕಲಮ್ ಹೆಸರಿಟ್ಟಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
Only 2️⃣ for Stokes! 🏏
England head coach Brendon McCullum has named his horse after his captain, who finishes runner-up on debut in Cambridge, New Zealand! pic.twitter.com/g60pxwjJaf
— At The Races (@AtTheRaces) July 13, 2023