1 ದಿನ ರಜೆಗೆ 500, ಅಗತ್ಯವಿರೋ ಡ್ಯೂಟಿಗೆ 10,000 ರೂ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ!
ಎಡಿಜಿಪಿಯವರಿಗೆ ಪತ್ರ ಬರೆದ ಪೊಲೀಸ್ ಕಾನ್ಸ್ಟೇಬಲ್
ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಮೇಲಧಿಕಾರಿಗಳು ಡ್ರೈವರ್ ಮತ್ತು ಕಂಡಕ್ಟರ್ಗಳಿಗೆ ಟಾರ್ಚರ್ ಕೊಡ್ತಿದ್ದಾರೆ. ಹಣ ಕೊಟ್ರೆ ತಮಗೆ ಬೇಕಾದ ಶಿಫ್ಟ್ಗೆ ತಮಗೆ ಬೇಕಾದ ರೂಟ್ಗೆ ಹಾಕ್ತಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಈಗ ಅಂಥಾದ್ದೇ ಒಂದು ಆರೋಪ ಪೊಲೀಸ್ ಇಲಾಖೆಯಲ್ಲೂ ಕೇಳಿ ಬರ್ತಿದೆ.
KSRP ವಿಭಾಗದಲ್ಲಿ ಕೆಲವು ಮೇಲಾಧಿಕಾರಿಗಳು ಸಿಬ್ಬಂದಿ ಬಳಿ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಎಡಿಜಿಪಿಯವರಿಗೆ ಪತ್ರವೊಂದನ್ನ ಬರೆದಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ. 9ನೇ KSRP ಕೂಡ್ಲು ಸಿಬ್ಬಂದಿ ಓಂಕಾರಪ್ಪ ಎಂಬುವವರು ಪತ್ರ ಬರೆದಿದ್ದು, 4 ಪುಟದಲ್ಲಿ 11 ಅಂಶಗಳನ್ನ ಉಲ್ಲೇಖಿಸಿದ್ದಾರೆ.
ದೂರಿನಲ್ಲಿ ಏನಿದೆ..?
1. ರಜೆ ಪಡೆಯಲು ಒಂದು ದಿನಕ್ಕೆ 500 ರೂ. ಲಂಚಕ್ಕೆ ಬೇಡಿಕೆ
2. ರಜೆ ಕೊಡಲು ಖಾಲಿ ಹಾಳೆ ಮೇಲೆ ಸಹಿ ಹಾಕಿಸಿಕೊಳ್ತಾರೆ
3. ಪೋನ್ ಪೇ, ಗೂಗಲ್ ಪೇ ಮುಖಾಂತರ ಹಣ ವಸೂಲಿ
4. ಸ್ವಂತ ಊರುಗಳಲ್ಲಿ ವಾಸವಿರಲು ತಿಂಗಳಿಗೆ ₹20.000
5. ನಿಯೋಜನೆಗೊಂಡ ಸ್ಥಳಕ್ಕೆ ತುಕಡಿಯ ಜೊತೆ ಬರಲ್ಲ
6. ಶಸ್ತ್ರಾಸ್ತ್ರಗಳ ಮೇಲೆ ಜವಾಬ್ದಾರಿ ವಹಿಸದೇ ನಿರ್ಲಕ್ಷ್ಯ
7. ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲೇ ಕುಳಿತು ದರ್ಬಾರ್
8. ಅಂಗಡಿಗಳನ್ನ ಕಾಯುವ ಸಿಬ್ಬಂದಿಯಿಂದ ₹10,000 ಲಂಚ
9. ಸರ್ಕಾರಿ ವಾಹನದಲ್ಲಿ ಜಲ್ಲಿಕಲ್ಲು, ಕಲ್ಲುಚಪ್ಪಡಿ ಕದಿಯುವುದು
10. ಕಲ್ಯಾಣಿ ಪಹರೆ ಕರ್ತವ್ಯಕ್ಕೆ ₹5000 ಪಡೆಯುವುದು
11. ಹಣಕ್ಕಾಗಿ PITC- ಪರೇಡ್ ಮಾಡಿಸಿ ಕಿರುಕುಳ
ಒಟ್ಟಾರೆ ಈ ಎಲ್ಲ ಆರೋಪಗಳಿಗೆ ಇಲಾಖೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಓಕಾಂರಪ್ಪ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಈ ದೂರನ್ನ ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತೆ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ