newsfirstkannada.com

100 ಕೋಟಿ ಲಂಚ ಪಡೆದ ಕೇಸ್​​; ಕಾಸು ಕೊಟ್ಟವರಿಗೆ TCS ಕಂಪನಿಯಲ್ಲಿ ಕೆಲಸ; ನಾಲ್ವರು ವಜಾ

Share :

Published June 23, 2023 at 6:24pm

Update June 23, 2023 at 6:28pm

    ಭಾರತದ ಅತೀದೊಡ್ಡ ಟೆಕ್​​ ಕಂಪನಿ ಎಂದರೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್

    ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿ 100 ಕೋಟಿ ಲಂಚ ಕೇಸ್​ ಬಯಲಿಗೆ

    ಹಣ ನೀಡಿ ಕೆಲಸ ಗಿಟ್ಟಿಸಿಕೊಂಡ ಕಿಡಿಗೇಡಿಗಳಿಗೆ ಶುರುವಾಯ್ತು ಆತಂಕ..!

ಮುಂಬೈ: ಭಾರತದ ಅತೀದೊಡ್ಡ ಟೆಕ್​​ ಕಂಪನಿ ಎಂದರೆ ಥಟ್​ ಎಂದು ನೆನಪಾಗೋದು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್. ದೇಶದ ಪ್ರತಿಷ್ಠಿತ ಕಂಪನಿ ಎಂದೇ ಹೆಸರು ವಾಸಿಯಾಗಿರೋ ಟಿಸಿಎಸ್​​ನಲ್ಲಿ ಕೆಲಸಕ್ಕಾಗಿ ಯುವ ಪ್ರತಿಭೆಗಳು ಕ್ಯೂ ಕಟ್ಟುತ್ತಾರೆ. ಹಲವು ಸುತ್ತಿನ ಸಂದರ್ಶನ ಪೂರೈಸಲು ಸಾಕಷ್ಟು ತಯಾರಿ ಮಾಡಿಕೊಂಡಿರುತ್ತಾರೆ. ಸಾಮರ್ಥ್ಯ ಇದ್ದವರಿಗೆ ಮಾತ್ರ ಕೆಲಸ ಸಿಗಲಿದೆ ಎಂದು ಹೇಳುತ್ತಿದ್ದ ಈ ಕಂಪನಿಯಲ್ಲಿ ಲಂಚ ಪಡೆದು ಉದ್ಯೋಗ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಅದು ಸಾವಿರ ಲಕ್ಷವಲ್ಲ, ಬದಲಿಗೆ ಬರೋಬ್ಬರಿ 100 ಕೋಟಿ ಲಂಚ ಪಡೆದು ಉದ್ಯೋಗ ನೀಡಿದ ಸ್ಕ್ಯಾಮ್​​. ಕಳೆದ ಮೂರು ವರ್ಷಗಳಿಂದ ಸುಮಾರು 100 ಕೋಟಿಯಷ್ಟು ಲಂಚ ಪಡೆದು ಸಾವಿರಾರು ಮಂದಿಗೆ ಕೆಲಸ ಕೊಟ್ಟಿದ್ದಾರೆ. ಈ ಪ್ರಕರಣ ಸಂಬಂಧ ನಾಲ್ವರು ಟಿಸಿಎಸ್ ಹಿರಿಯ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.

ಕಂಪನಿಯ ನೇಮಕಾತಿ ವಿಭಾಗದ ಚೀಫ್ ಎಕ್ಸೂಕೂಟೀವ್ ಆಫೀಸರ್, ಚೀಫ್ ಆಫರೇಟಿಂಗ್ ಆಫೀಸರ್, ರಿಸೋರ್ಸ್ ಮ್ಯಾನೇಜ್ಮೆಂಟ್ ಗ್ರೂಪ್ ಅಧಿಕಾರಿ ಸೇರಿ ನಾಲ್ವರು ಟಿಸಿಎಸ್​​ನಿಂದ ವಜಾ ಆದವರು. ನೇಮಕಾತಿಗೆ ದುಡ್ಡು ಪಡೆದಿದ್ದಲ್ಲದೆ ಅಸಮರ್ಥರಿಗೆ ಉದ್ಯೋಗ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ದೈತ್ಯ ಐಟಿ ಕಂಪನಿ ಟಿಸಿಎಸ್‌ ಒಟ್ಟು 6 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಭಾರತದಲ್ಲಿ ಮಾತ್ರ 614,795 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಕಂಪನಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಕಂಪನಿ ಮುಂದಾಗಿದೆ. ಸದ್ಯ ಹಣ ನೀಡಿ ಕೆಲಸ ಗಿಟ್ಟಿಸಿಕೊಂಡವರಿಗೆ ಆತಂಕ ಶುರುವಾಗಿದ್ದು, ಯಾವಾಗ ಬೇಕಾದರೂ ಕಿತ್ತಾಕಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

100 ಕೋಟಿ ಲಂಚ ಪಡೆದ ಕೇಸ್​​; ಕಾಸು ಕೊಟ್ಟವರಿಗೆ TCS ಕಂಪನಿಯಲ್ಲಿ ಕೆಲಸ; ನಾಲ್ವರು ವಜಾ

https://newsfirstlive.com/wp-content/uploads/2023/06/TCS-Company.jpg

Load More