newsfirstkannada.com

ತಾಳಿ ಕಟ್ಟುವಾಗ ಕಲ್ಯಾಣ ಮಂಟಪಕ್ಕೆ ನುಗ್ಗಿದ ಆನೆಗಳ ಹಿಂಡು; ಗಂಡು, ಹೆಣ್ಣಿನ ಕಥೆ ಏನಾಯ್ತು ಗೊತ್ತಾ?

Share :

19-07-2023

    ಮಾಂಗಲ್ಯಂ ತಂತುನಾನೇನ ಅನ್ನುವಾಗ 100 ಆನೆಗಳ ಎಂಟ್ರಿ

    ಕಾಡಾನೆ ಶಬ್ಧಕ್ಕೆ ಎದ್ನೋ, ಬಿದ್ನೋ ಅಂತಾ ಓಡಿದ ಸಂಬಂಧಿಕರು

    ಮಟನ್ ಊಟ ಸ್ಪೆಷಲ್ ಸೂಪ್, ಡಿಫರೆಂಟ್ ಕರ್ರಿ ರೆಡಿ ಆಗಿತ್ತು

ಜೋವಲ್ಭಂಗ: ಮಾಂಗಲ್ಯಂ ತಂತುನಾನೇನ.. ಕಲ್ಯಾಣ ಮಂಟಪದಲ್ಲಿ ಗಂಡು, ಹೆಣ್ಣು ತಾಳಿ ಕಟ್ಟಿ ಸಪ್ತಪದಿ ತುಳಿಯಲು ರೆಡಿಯಾಗಿದ್ರು. ಸ್ನೇಹಿತರು, ಸಂಬಂಧಿಕರು ನವವಧುವರರಿಗೆ ಶುಭ ಕೋರಲು ಜಮಾಯಿಸಿದ್ರು. ಡುಂ, ಡುಂ ಗಟ್ಟಿಮೇಳಕ್ಕೆ ಮುಹೂರ್ತವೂ ಚೆನ್ನಾಗಿತ್ತು. ಆದ್ರೆ, ಮದುವೆಗೆ ಬಂದ ಅನಿರೀಕ್ಷಿತ ಅತಿಥಿಗಳಿಂದ ನೋಡ, ನೋಡ್ತಿದ್ದಂತೆ ಎಲ್ಲರೂ ಒಂದೇ ಕ್ಷಣದಲ್ಲಿ ಚೆಲ್ಲಾಪಿಲ್ಲಿ ಆಗ್ಬಿಟ್ರು. ಕೂಡಲೇ ಮದುವೆ ಗಂಡು, ನವವಧುವನ್ನ ಕರೆದುಕೊಂಡು ಬೈಕ್‌ನಲ್ಲಿ ಪರಾರಿ ಆಗಿಬಿಟ್ಟಿದ್ದಾನೆ. ಅರೆ, ಏನಾಯ್ತು ಅಂಥಾ ಯೋಚನೆ ಮಾಡ್ತಾ ಇದ್ದೀರಾ. ಮದುವೆ ಮನೆಗೆ ಎಂಟ್ರಿ ಕೊಟ್ಟ ಅನಿರೀಕ್ಷಿತ ಅತಿಥಿಗಳು ಬೇರೆ ಯಾರು ಅಲ್ಲ ನೂರಾರು ಕಾಡಾನೆಗಳು.

ಹೌದು.. ನೂರಕ್ಕೂ ಹೆಚ್ಚಿನ ಕಾಡಾನೆಗಳು ಮದುವೆ ಮನೆಗೆ ನುಗ್ಗಿರೋ ಘಟನೆ ಪಶ್ಚಿಮ ಬಂಗಾಳದ ಜೋವಲ್ಭಂಗ ಜಿಲ್ಲೆಯಲ್ಲಿ ನಡೆದಿದೆ. ಜಾರ್ಗ್ರಾಮ್ ಎಂಬ ಹಳ್ಳಿಯಲ್ಲಿ ತನ್ಮೋಯ್ ಸಿಂಘಾ ಮತ್ತು ಮಂಪಿ ಸಿಂಘಾ ಅವರ ವಿವಾಹ ನಿಶ್ಚಯವಾಗಿತ್ತು. ಬಂಧು ಬಾಂಧವರು ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ರು. ಈ ಖುಷಿಯ ಮಧ್ಯೆ ಮದುವೆಗೆ ಕಾಡಾನೆಯ ಹಿಂಡು ಎಂಟ್ರಿ ಕೊಟ್ಟಿದೆ. ಆನೆಗಳನ್ನು ನೋಡಿದ ಸಂಬಂಧಿಕರು ಎದ್ನೋ, ಬಿದ್ನೋ ಅಂತಾ ಓಡಿದ್ರೆ, ಮದುವೆ ಗಂಡು ತನ್ನ ಮೋಟಾರ್ ಬೈಕ್‌ನಲ್ಲಿ ಹುಡುಗಿಯನ್ನು ಎತ್ತಾಕೊಂಡು ಓಡಿ ಹೋಗಿದ್ದಾನೆ.

ಈ ಮದುವೆಗೆ ಬಂದಿದ್ದ ಅತಿಥಿಗಳಿಗಾಗಿಯೇ ಸಾಕಷ್ಟು ಊಟಗಳನ್ನು ತಯಾರಿಸಲಾಗಿತ್ತು. ಮಟನ್, ಸ್ಪೆಷಲ್ ಸೂಪ್, ಡಿಫರೆಂಟ್ ಕರ್ರಿ.. ಹೀಗೆ ಸಾಕಷ್ಟು ಭಕ್ಷ ಭೋಜನಗಳನ್ನು ತಯಾರು ಮಾಡಲಾಗಿತ್ತು. ಆನೆ ಬರುವ ಶಬ್ಧ ಕೇಳುತ್ತಿದ್ದಂತೆ ರುಚಿ, ರುಚಿಯಾದ ಊಟವನ್ನೆಲ್ಲಾ ಸಂಬಂಧಿಕರು ಬೇರೆ ಕಡೆಗೆ ಸಾಗಿಸಿದ್ದಾರೆ. ಕಾಡಾನೆಗಳು ಈ ಊಟದ ಸುವಾಸನೆ ಹಿಡಿದುಕೊಂಡೇ ಮದುವೆ ಮನೆವರೆಗೂ ಬರುತ್ತಿವೆಯಂತೆ. ಪಶ್ಚಿಮ ಬಂಗಾಳದ ಈ ಪ್ರದೇಶದಲ್ಲಿ ಆಗಾಗ ಕಾಡಾನೆಗಳು ಊಟದ ವಾಸನೆಗೆ ದಾಳಿ ಮಾಡಿದ ಉದಾಹರಣೆಗಳಿವೆ. ಇದೀಗ ಮದುವೆ ಮನೆಗೆ ನುಗ್ಗಿ ಎಲ್ಲರೂ ದಿಕ್ಕಾಪಾಲಾಗಿ ಓಡುವಂತೆ ಮಾಡಿವೆ. ಈ ಮದುವೆಯಲ್ಲೂ ಅಷ್ಟೇ ಮದುಮಗ ನವವಧುವನ್ನು ಬೈಕ್‌ನಲ್ಲಿ ಸೇಫ್ ಆಗಿ ಕರೆದುಕೊಂಡು ಹೋಗಿದ್ದಾನೆ. ಗಜಪಡೆಯಿಂದಾದ ಗಲಿಬಿಲಿಗೆ ಇವರಿಬ್ಬರ ಕಲ್ಯಾಣ ಸದ್ಯಕ್ಕೆ ಮುಂದೂಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಳಿ ಕಟ್ಟುವಾಗ ಕಲ್ಯಾಣ ಮಂಟಪಕ್ಕೆ ನುಗ್ಗಿದ ಆನೆಗಳ ಹಿಂಡು; ಗಂಡು, ಹೆಣ್ಣಿನ ಕಥೆ ಏನಾಯ್ತು ಗೊತ್ತಾ?

https://newsfirstlive.com/wp-content/uploads/2023/07/Marriage-4.jpg

Load More