newsfirstkannada.com

ಯಾವ ಸಿನಿಮಾಗೂ ಕಮ್ಮಿಯಿಲ್ಲ..!! Love ಮಾಡಿ ಮದ್ವೆ ಆಗಿದ್ದ ತಂಗಿಯನ್ನು ಬೈಕ್​​ ಮೇಲೆ ಎತ್ತಾಕೊಂಡು ಬಂದ ಅಣ್ಣಂದಿರು..!

Share :

06-06-2023

    ಬಿಹಾರದ ಅರಾರಿಯಾದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ

    ಹೆಣ್ಮಗಳಿಗೆ ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗುವ ಹಕ್ಕಿಲ್ಲ

    ಸಿನಿಮಾ ಸ್ಟೈಲ್​ನಲ್ಲಿ ಬೈಕ್‌ನಲ್ಲಿ ತಂಗಿಯನ್ನ ಕರೆದೊಯ್ದ ಸಹೋದರರು

ನಾವು 21ನೇ ಶತಮಾನದ ಬಗ್ಗೆ ಮಾತನಾಡಬಹುದು. ಆದರೆ ಇಂದಿಗೂ ಯಾವುದೇ ಹೆಣ್ಮಗಳಿಗೆ ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗುವ ಹಕ್ಕಿಲ್ಲ! ಅದಕ್ಕೆ ಸಾಕ್ಷಿ ಅಂದ್ರೆ ಬಿಹಾರದ ಅರಾರಿಯಾದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ.

ರೀಲ್ ಅಲ್ಲ, ರಿಯಲ್..!
ಅರಾರಿಯಾದ ಬತ್ನಾಹಾ ಒಪಿ ಪ್ರದೇಶದ ಭಂಗಾಹಿ ಪಂಚಾಯತ್‌ನ ಶ್ಯಾಮ್‌ನಗರದಲ್ಲಿ ನವವಿವಾಹಿತೆಯನ್ನು ಮದುವೆಯಾದ ಮರುದಿನವೇ ಎಲ್ಲರ ಸಮ್ಮುಖದಲ್ಲಿ ಆಕೆಯ ಸಹೋದರರು ಅಪಹರಿಸಿದ್ದಾರೆ. ಸಿನಿಮಾ ಸ್ಟೈಲ್​ನಲ್ಲಿ ತಂಗಿಯನ್ನ ಇಬ್ಬರು ಸಹೋದರರು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾರೆ.

ಛೋಟು ಮತ್ತು ರೂಪಾ ಸುಪೌಲ್ ಎಂಬ ಯುವ ಪ್ರೇಮಿಗಳು ಪ್ರೀತಿಸುತ್ತಿದ್ದರು. ಜಾತಿ ಬೇರೆ ಬೇರೆಯಾದ ಹಿನ್ನೆಲೆಯಲ್ಲಿ ಇವರಿಬ್ಬರ ಮದುವೆಗೆ ಮನೆಯಿಂದ ವಿರೋಧ ವ್ಯಕ್ತವಾಗಿತ್ತು. ಎಷ್ಟೇ ಕಷ್ಟವಾದರೂ ಒಂದಾಗಿ ಬಾಳಬೇಕು ಅಂದುಕೊಂಡು ನಿರ್ಧರಿಸಿದ್ದ ಈ ಜೋಡಿ, ಕೋರ್ಟ್‌ನಲ್ಲಿ ಕಾನೂನು ಪ್ರಕಾರ ಮದುವೆ ಆಗಿತ್ತು.

ಈ ವಿಚಾರ ಮದುಮಗಳ ಮನೆಯವರಿಗೆ ಗೊತ್ತಾಗಿದೆ. ಕ್ಷೌರಿಕನ ಮಗನ ಮದುವೆ ಆಗಿರೋದಕ್ಕೆ ಕೋಪಿಸಿಕೊಂಡ ಆಕೆಯ ಸಹೋದರರು, ತಂಗಿಯನ್ನು ಹುಡುಕಿಕೊಂಡು ಅಲ್ಲಿಗೆ ಬಂದಿದ್ದಾರೆ. ತಂಗಿಯ ಗಂಡನ ಮನೆಗೆ ನುಗ್ಗಿದ್ದ ಇಬ್ಬರು ಕಿರಾತಕ ಅಣ್ತಾಮ್ಮಾಸ್, ಆಕೆಯನ್ನು ಮನೆಯಿಂದ ಎತ್ತಿಕೊಂಡು ಹೊರ ಬಂದಿದ್ದಾರೆ.

ತಂಗಿ ಕಿರುಚುತ್ತಲೇ ಇದ್ದಳು.. ಕಾಪಾಡಿ, ಕಾಪಾಡಿ ಎಂದು ಗೋಳಾಡಿಕೊಂಡಳು. ಅಕ್ಕ-ಪಕ್ಕದ ಮನೆಯವರೆಲ್ಲರೂ ಆಚೆ ಬಂದು ನೋಡುತ್ತ ನಿಂತಿದ್ದರು. ಆದರೆ ಯಾರೊಬ್ಬರೂ ಆಕೆಯ ಸಹಾಯಕ್ಕೆ ಬರಲಿಲ್ಲ. ಜೋರಾಗಿ ಕಿರುಚುತ್ತಲೇ ಇದ್ದ ತಂಗಿಯನ್ನು, ಓರ್ವ ಅಣ್ಣ ಎತ್ತಿಕೊಂಡು ಬೈಕ್ ಮೇಲೆ ಕೂರುತ್ತಾನೆ. ಮತ್ತೋರ್ವ ಬೈಕ್ ಓಡಿಸಿದ್ದಾನೆ.

ಆಕೆಯ ತೀವ್ರ ವಿರೋಧದ ನಡುವೆಯೂ ವಾಪಸ್ ಮನೆಗೆ ಕರ್ಕೊಂಡು ಬಂದಿದ್ದಾರೆ. ಇದನ್ನು ಅಲ್ಲಿಯ ಜನ ಕಣ್ಣಿದ್ದೂ ಕುರುಡರಂತೆ ನಟಿಸಿದ್ದಾರೆ. ಪ್ರಸಂಗ ನಡೆದು ಹೋದ ಬಳಿಕ ಯುವಕನ ತಂದೆ ತಮಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ, ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾವ ಸಿನಿಮಾಗೂ ಕಮ್ಮಿಯಿಲ್ಲ..!! Love ಮಾಡಿ ಮದ್ವೆ ಆಗಿದ್ದ ತಂಗಿಯನ್ನು ಬೈಕ್​​ ಮೇಲೆ ಎತ್ತಾಕೊಂಡು ಬಂದ ಅಣ್ಣಂದಿರು..!

https://newsfirstlive.com/wp-content/uploads/2023/06/BIHAR.jpg

Load More