ಸಾವು-ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ
ಕ್ರೇನ್-ಸ್ಲಾಬ್ಗೆ ಕನೆಕ್ಟ್ ಮಾಡುವಾಗ ದುರ್ಘಟನೆ
ಸುಮಾರು 100 ಫೀಟ್ ಎತ್ತರದಲ್ಲಿದ್ದ ಗಿರ್ಡರ್ ಲಾಂಚರ್
ಮಹಾರಾಷ್ಟ್ರದ ಥಾಣೆಯಲ್ಲಿ ಘೋರ ದುರಂತ ಸಂಭವಿಸಿದ್ದು ಕಾಮಗಾರಿ ವೇಳೆ ಗಿರ್ಡರ್ ಲಾಂಚರ್ ಮಷಿನ್ ( girder launcher machine) ಕುಸಿದು ಬಿದ್ದು 16 ಮಂದಿ ಸಾವನ್ನಪ್ಪಿದ್ದಾರೆ.
ಥಾಣೆಯ ಸರ್ಲಂಬೆ ಗ್ರಾಮದಲ್ಲಿ ಬರುವ ಸಮೃದ್ಧಿ ಎಕ್ಸ್ಪ್ರೆಸ್ ಹೈವೇ 3ನೇ ಹಂತದ ನಿರ್ಮಾಣ ಹಂತದ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. ಮೃತ 16 ಮಂದಿಯೂ ಕೂಡ ಕಾರ್ಮಿಕರಾಗಿದ್ದಾರೆ, ಇನ್ನೂ 5 ಜನ ನೆಲಕ್ಕೆ ಉರುಳಿ ಬಿದ್ದಿರುವ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾಕಾರ್ಯ ಶುರುವಾಗಿದೆ.
ತನಿಖೆಗೆ ಆದೇಶ
ಎನ್ಡಿಆರ್ಎಫ್ ಪಡೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬ್ರಿಡ್ಜ್ ನಿರ್ಮಾಣ ಸಂಸ್ಥೆಯ ಬೇಜವಾಬ್ದಾರಿಯೇ ದುರ್ಘಟನೆಗೆ ಕಾರಣ ಎಂದು ಪ್ರಾಥಮಿಕವಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಘಟನೆಯನ್ನು ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆದೇಶ ನೀಡಿದ್ದಾರೆ.
ಸುಮಾರು 100 ಫೀಟ್ ಎತ್ತರದಲ್ಲಿದ್ದ ಗ್ರಿಡರ್ ಮಷಿನ್ ಕ್ರೇನ್ ಮತ್ತು ಸ್ಲಾಬ್ಗೆ ಕನೆಕ್ಟ್ ಮಾಡುವಾಗ ಕುಸಿದು ಬಿದ್ದಿದೆ. ಮೃತದೇಹಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವು ನೋವು ಮತ್ತುಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
‘ಸಮೃದ್ಧಿ ಮಹಾಮಾರ್ಗ್’ಗೆ ಹಿಂದೂ ‘ಹೃದಯಸಮರ್ಥ್ ಬಾಳಸಾಹೇಬ್ ಠಾಕರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್’ ಎಂದು ಹಸರಿಡಲಾಗಿದೆ. ಇದು 701 ಕಿಲೋ ಮೀಟರ್ ದೂರದ ಎಕ್ಸ್ಪ್ರೆಸ್ ರಸ್ತೆಯಾಗಿದ್ದು, ಮುಂಬೈನಿಂದ ನಾಗ್ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ