newsfirstkannada.com

Britannia: ಬ್ರಿಟಾನಿಯಾ ಕಂಪನಿಯಿಂದ ಶಾಕಿಂಗ್ ನಿರ್ಧಾರ..​ ಬಿಸ್ಕತ್, ಚಾಕೊಲೇಟ್, ಬ್ರೆಡ್ ಇನ್ಮುಂದೆ ಸಿಗಲ್ವಾ?

Share :

Published June 25, 2024 at 2:07pm

  ಗುಡ್​ ಡೇ, 50-50, ಮಾರಿ ಗೋಲ್ಡ್​, ಟೈಗರ್ ಬಿಸ್ಕತ್ ಸಿಗಲ್ವಾ?

  ಮಕ್ಕಳ ಮನ ಗೆದ್ದಿದ್ದ ಬ್ರಿಟಾನಿಯಾ ಬಿಸ್ಕತ್, ಬ್ರೆಡ್​ ಪ್ರಾಡೆಕ್ಟ್​​ಗಳು

  250 ರೂ.ಗಳಲ್ಲಿ ಆರಂಭವಾಗಿ 9000 ಕೋಟಿ ರೂ. ಗಳಿಸುತ್ತಿದೆ

ಮಾರಿ ಗೋಲ್ಡ್​, ಟೈಗರ್, 50-50, ಗುಡ್​ ಡೇಯಂತಹ ಬಿಸ್ಕತ್​ ಪ್ರಾಡಕ್ಟ್​ಗಳನ್ನು ತಯಾರಿಸುತ್ತಿದ್ದ ಬ್ರಿಟಾನಿಯಾ ಕಂಪನಿ ತನ್ನ ಪಶ್ಚಿಮ ಬಂಗಾಳದ ಕೋಲ್ಕತ್ತಾ ಘಟಕವನ್ನು ಮುಚ್ಚಲು ಮುಂದಾಗಿದೆ. ಇದರಿಂದ 150ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Breaking: ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕ್.. ನಂದಿನಿ ಹಾಲಿನ ದರ ಮತ್ತಷ್ಟು ಏರಿಕೆ!

ಬ್ರಿಟಾನಿಯಾ ಕಂಪನಿಯಿಂದ ಜನ ಮಾನಸದಲ್ಲಿ ಹೆಸರು ಪಡೆದಿದ್ದ ಟೈಗರ್ ಬಿಸ್ಕತ್‌, ಮಾರಿ ಗೋಲ್ಡ್​, ಪ್ಯೂರ್ ಮ್ಯಾಜಿಕ್, ಬೌರ್ಬನ್, ಗುಡ್​ ಡೇ, 50-50 ಬಿಸ್ಕತ್​ಗಳು ಇನ್ಮುಂದೆ ಅಂಗಡಿಗಳಲ್ಲಿ ಸಿಗುವುದು ಕಷ್ಟ ಎನ್ನಬಹುದು. ಅಲ್ಲದೇ ಇದೇ ಕಂಪನಿಗೆ ಸಂಬಂಧಿಸಿದ ಚಾಕೊಲೇಟ್, ಬಿಸ್ಕತ್,​ ಬ್ರೆಡ್, ರಸ್ಕ್​, ಕೇಕ್​ ಹಾಗೂ ಡೈರಿ ಪ್ರಾಡೆಕ್ಟ್​ಗಳು ಕೈಗಟುಕುವುದು ಕಷ್ಟಕರ. ಇದಕ್ಕೆ ಕಾರಣವಿಷ್ಟೇ ಕೋಲ್ಕತ್ತಾದಲ್ಲಿನ ಬ್ರಿಟಾನಿಯಾ ಇಂಡಸ್ಟ್ರೀಸ್ ಅನ್ನು ಮುಚ್ಚಲು ಕಂಪನಿ ಮುಂದಾಗಿದೆ. ಕಳೆದ ವರ್ಷ ಮೇ ತಿಂಗಳಿನಿಂದಲೇ ಇಲ್ಲಿನ ಉತ್ಪಾದನೆಗಳನ್ನು ಸ್ಥಗಿತ ಮಾಡಲಾಗಿದೆ.

ಇದನ್ನೂ ಓದಿ: ಕೋರ್ಟ್​​ನಲ್ಲಿ ಒಂದೇ ದಿನ ಅಣ್ಣ-ತಮ್ಮನ ಕೇಸ್ ವಿಚಾರಣೆ.. ಸೂರಜ್ ರೇವಣ್ಣಗೂ ಪುರುಷತ್ವ ಟೆಸ್ಟ್..?

ಇದರಿಂದ 122 ಖಾಯಂ ಉದ್ಯೋಗಿಗಳು ಹಾಗೂ 250 ಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳಲ್ಲಿದ್ದಾರೆ. ಸದ್ಯ ಇವರೆಲ್ಲ ಸ್ವಯಂ ನಿವೃತ್ತಿ ಘೋಷಿಸಿದ್ದು ಇವರಿಗೆ ಕಂಪನಿ 10 ಲಕ್ಷದವರೆಗೆ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ ಕಂಪನಿ ಬಂದ್ ಆಗುತ್ತಿರುವುದಕ್ಕೆ ರಾಜಕೀಯ ಪಡಸಾಲೆಯಲ್ಲಿ ಮಾತು ಕೇಳಿ ಬಂದಿವೆ. ಆಡಳಿತ ಪಕ್ಷವಾದ ಟಿಎಂಸಿ ಹಾಗೂ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಿಎಂ ಸುಲಿಗೆಗೆ ಇಳಿದಿದ್ದರಿಂದ ಉದ್ಯಮ ವಿರೋಧಿ ಇರುವುದರಿಂದ ಬ್ರಿಟಾನಿಯಾದಂತ ಪ್ರತಿಷ್ಠಿತ ಕಂಪನಿ ರಾಜ್ಯದಲ್ಲಿ ತನ್ನ ಘಟಕವನ್ನು ಮುಚ್ಚುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ಕಲ್ಕಿಯ ಬುಜ್ಜಿ ಕಾರ್ ಡ್ರೈವ್ ಮಾಡಿದ ರಿಷಬ್ ಶೆಟ್ಟಿ.. ಪ್ರಭಾಸ್​ಗೆ ಸಾಥ್ ನೀಡಿದ್ರಾ ಡಿವೈನ್ ಸ್ಟಾರ್​..?

ಬ್ರಿಟಾನಿಯಾ ಕಂಪನಿ 1892ರಲ್ಲಿ ಕೋಲ್ಕತ್ತಾದ ಸಣ್ಣ ಅಂಗಡಿಯಲ್ಲಿ ಕೇವಲ 295 ರೂಪಾಯಿಗಳ ಹೂಡಿಕೆಯಲ್ಲಿ ಪ್ರಾರಂಭವಾಯಿತು. ಇಂದು ಈ ಕಂಪನಿ ವ್ಯವಹಾರ ವಿಶ್ವದ 60ಕ್ಕೂ ಹೆಚ್ಚು ದೇಶಗಳಲ್ಲಿ ಇದೆ. ಭಾರತದಲ್ಲಿ 13 ಕಡೆ ಬ್ರ್ಯಾಂಚ್​ಗಳನ್ನು ಹೊಂದಿದ್ದು ವಾರ್ಷಿಕ ಆದಾಯ 9,000 ಕೋಟಿ ರೂ. ಇದೆ. ಆದರೆ ಇಂದು ಕೋಲ್ಕತ್ತಾದ ಬ್ರ್ಯಾಂಚ್ ಅನ್ನು ಮುಚ್ಚಲಾಗುತ್ತಿದೆ ಎಂದು ಕಂಪನಿ ಘೋಷಣೆ ಮಾಡಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Britannia: ಬ್ರಿಟಾನಿಯಾ ಕಂಪನಿಯಿಂದ ಶಾಕಿಂಗ್ ನಿರ್ಧಾರ..​ ಬಿಸ್ಕತ್, ಚಾಕೊಲೇಟ್, ಬ್ರೆಡ್ ಇನ್ಮುಂದೆ ಸಿಗಲ್ವಾ?

https://newsfirstlive.com/wp-content/uploads/2024/06/Britannia_Industries.jpg

Load More