newsfirstkannada.com

ಬೆಂಗಳೂರಿನ ‘ಮಸಾಲಾ ದೋಸೆ’ಯ ಸವಿರುಚಿಗೆ ಸೋತ ಬ್ರಿಟಿಷ್ ಕಮಿಷನರ್..!

Share :

25-02-2023

    ಬೆಂಗಳೂರಿಗೆ ಮತ್ತೆ ಭೇಟಿ ನೀಡಿರುವ ಬ್ರಿಟಿಷ್ ಹೈ-ಕಮಿಷನರ್

    ಬೆಂಗಳೂರಿನ ಮಸಾಲಾ ದೋಸೆ ಸವಿದು ಟ್ವಿಟರ್​​ನಲ್ಲಿ ಪೋಸ್ಟ್​

    ಜನಪ್ರಿಯ ಆರ್​ಜೆ ಅಯ್ಯೋ ಶ್ರದ್ಧಾರನ್ನು ಭೇಟಿ ಆಗಿರುವ ಕಮೀಷನರ್

ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್​ ಭಾರತ ಪ್ರವಾಸದಲ್ಲಿದ್ದು, ಬೆಂಗಳೂರಿಗೆ ಮತ್ತೆ ಬಂದಿದ್ದಾರೆ. ಸಿಲಿಕಾನ್ ಸಿಟಿಗೆ ಭೇಟಿ ನೀಡಿದ ಬೆನ್ನಲ್ಲೇ, ತಮ್ಮ ನೆಚ್ಚಿನ ಹೋಟೆಲ್​​ಗೆ ಎಂಟ್ರಿ ಕೊಟ್ಟು ಮಸಾಲಾ ದೋಸೆ ಸವಿದಿದ್ದಾರೆ.

ಮಸಾಲಾ ದೋಸೆಯ ಸವಿರುಚಿಗೆ ಮಾರು ಹೋಗಿರುವ ಅವರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ. ‘ಬ್ಯಾಕ್ ಇನ್ ಬೆಂಗಳೂರು’ ಎಂದಷ್ಟೇ ಬರೆದಿರುವ ಅವರು, ಗುರುತಿಗಾಗಿ ದೋಸೆ ಫೋಟೋವನ್ನಷ್ಟೇ ಹಂಚಿಕೊಂಡಿದ್ದಾರೆ.

ಎಲ್ಲಿಸ್ ಈ ಹಿಂದೆ ಭಾರತಕ್ಕೆ ಭೇಟಿ ನೀಡಿದಾಗ ಇಲ್ಲಿನ ಆಹಾರ ಪದಾರ್ಥಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಹಿಂದೊಮ್ಮೆ ವಡಾ ಪಾವ್, ದೋಸೆ ಮತ್ತು ರಸಗುಲ್ಲ ತಿನ್ನುತ್ತಿರುವ ಚಿತ್ರಗಳನ್ನು ಪೋಸ್ಟ್​ ಮಾಡಿದ್ದರು. ಈ ಮೂಲಕ ಭಾರತೀಯ ಆಹಾರ ಪದಾರ್ಥಗಳ ಮೇಲಿನ ಪ್ರೀತಿಯ ಬಗ್ಗೆ ಹಂಚಿಕೊಂಡಿದ್ದರು.

ಇನ್ನೊಂದು ಫೋಟೋವನ್ನು ಶೇರ್​ ಮಾಡಿದ್ದು, ಆರ್​ಜೆ ಅಯ್ಯೋ ಶ್ರದ್ಧಾ ಅವರನ್ನು ಭೇಟಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ‘ಮಸಾಲಾ ದೋಸೆ’ಯ ಸವಿರುಚಿಗೆ ಸೋತ ಬ್ರಿಟಿಷ್ ಕಮಿಷನರ್..!

https://newsfirstlive.com/wp-content/uploads/2023/02/BRITISH.jpg

Load More