newsfirstkannada.com

ಚಂದ್ರಯಾನ-3 ಯಶಸ್ಸಿಗೆ ಅಸೂಯೆ; ಭಾರತಕ್ಕೆ ನೆರವು ನಿಲ್ಲಿಸಿ ಎಂದ ಬ್ರಿಟನ್ ಪತ್ರಕರ್ತನಿಗೆ ಸಖತ್ ಕ್ಲಾಸ್

Share :

25-08-2023

    ಅಸೂಯೆ ಹಾಗೂ ಹೊಟ್ಟೆಕಿಚ್ಚಿನಿಂದ ಮಾತನಾಡೋದು ಸರಿಯೇ?

    ಬ್ರಿಟನ್ ಸುದ್ದಿ ನಿರೂಪಕ ಪ್ಯಾಟ್ರಿಕ್ ಕ್ರಿಸ್ಟಿಸ್ ವಿವಾದಾತ್ಮಕ ಹೇಳಿಕೆ

    2.3 ಬಿಲಿಯನ್ ಪೌಂಡ್ಸ್ ಕೇಳಿದ್ದಕ್ಕೆ ಕೋಹಿನೂರು ವಜ್ರ ಡಿಮ್ಯಾಂಡ್

ಭಾರತದ ಚಂದ್ರಯಾನ-3ರ ಯಶಸ್ಸು ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದೆ. ಸೈಕಲ್‌ನಿಂದ ಶುರುವಾದ ಇಸ್ರೋ ವಿಜ್ಞಾನಿಗಳ ಸಾಧನೆ ಚಂದ್ರನವರೆಗೂ ತಲುಪಿರುವುದಕ್ಕೆ ಕೋಟ್ಯಾಂತರ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ. ಇದು ಕೇವಲ ಭಾರತೀಯರ ಸಾಧನೆಯಲ್ಲ ಇಡೀ ಮನುಕುಲದ ಯಶಸ್ಸು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಇಸ್ರೋ ಮೈಲಿಗಲ್ಲನ್ನು ವಿಶ್ವದ ಬಲಿಷ್ಠ ರಾಷ್ಟ್ರಗಳಾದ ಅಮೆರಿಕಾ, ರಷ್ಯಾ ಕೂಡ ಮುಕ್ತಕಂಠದಿಂದ ಶ್ಲಾಘಿಸುತ್ತಿವೆ. ಜಗತ್ತಿನೆಲ್ಲೆಡೆ ಚಂದ್ರಯಾನ-3 ಸಕ್ಸಸ್ ಬಗ್ಗೆಯೇ ಚರ್ಚೆಯಾಗುತ್ತಿರುವಾಗ ಬ್ರಿಟನ್ ಮೂಲದ ಪತ್ರಕರ್ತ ಪ್ಯಾಟ್ರಿಕ್ ಕ್ರಿಸ್ಟಿಸ್ ನೀಡಿರೋ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

ಚಂದ್ರನ ಮೇಲೆ ಭಾರತದ ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಆಗುತ್ತಿದ್ದಂತೆ ಬ್ರಿಟನ್ ಸುದ್ದಿ ನಿರೂಪಕ ಪ್ಯಾಟ್ರಿಕ್ ಕ್ರಿಸ್ಟಿಸ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಮ್ಮ ಸುದ್ದಿ ನಿರೂಪಣೆಯಲ್ಲಿ ಕ್ರಿಸ್ಟಿಸ್, ಭಾರತದ ಚಂದ್ರಯಾನ-3ಗೆ ಶುಭಾಶಯ ಕೋರಿದರು. ಇದರ ಜೊತೆಗೆ ಬ್ರಿಟನ್ ದೇಶ ಇನ್ಮುಂದೆ ಭಾರತಕ್ಕೆ ನೆರವು ನೀಡಬಾರದು. 2016ರಿಂದ 2021ರ ಅವಧಿಯಲ್ಲಿ ನೀಡಿರುವ 2.3 ಬಿಲಿಯನ್ ಪೌಂಡ್ಸ್ ಸಹಾಯಧನವನ್ನು ಭಾರತ ಹಿಂತಿರುಗಿಸಬೇಕು ಎಂದಿದ್ದರು. ಯುಕೆ ಜರ್ನಲಿಸ್ಟ್ ಪ್ಯಾಟ್ರಿಕ್ ಕ್ರಿಸ್ಟಿಸ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಪ್ಯಾಟ್ರಿಕ್ ಕ್ರಿಸ್ಟಿಸ್ ವೈರಲ್ ವಿಡಿಯೋಗೆ ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ. ಬಹುತೇಕ ಭಾರತೀಯ ಮೂಲದ ನೆಟ್ಟಿಗರು ಯುಕೆ ಜರ್ನಲಿಸ್ಟ್ ಪೋಸ್ಟ್‌ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಅವರು ಹೇಳಿರೋ ಮಾತು ನಿಜವಾಗಿದೆ. ಬ್ರಿಟನ್ ತಮ್ಮ ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತದಿಂದ ಲೂಟಿ ಮಾಡಿದ ಹಣವನ್ನು ಸಹ ವಾಪಸ್ ನೀಡಬೇಕು. ಬ್ರಿಟಿಷರು ಲೂಟಿ ಮಾಡಿದ 45 ಟ್ರಿಲಿಯನ್ ಡಾಲರ್ ಅನ್ನು ಭಾರತಕ್ಕೆ ಹಿಂದಿರುಗಿಸಬೇಕು ಅನ್ನೋ ಅಭಿಯಾನ ನಡೆಸಿದ್ದಾರೆ. ಇದರ ಜೊತೆಗೆ ಭಾರತದ ಕೊಹಿನೂರ್ ವಜ್ರವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: WATCH: ‘ನಾವು ಚಂದ್ರನ ಮೇಲೆ ವಾಸಿಸುತ್ತಿದ್ದೇವೆ’- ಪಾಕಿಸ್ತಾನದ ಪ್ರಜೆ ಕೊಟ್ಟ ಈ ಉತ್ತರಕ್ಕೆ ಎಲ್ರೂ ಶಾಕ್

ಮತ್ತೂ ಹಲವರು ನಾವು ನಮ್ಮ ಹಣವನ್ನು ಮರಳಿ ಪಡೆಯುವ ಸಮಯ ಬಂದಿದೆ. ಭಾರತದಿಂದ 45 ಟ್ರಿಲಿಯನ್ ಡಾಲರ್ ಲೂಟಿ ಮಾಡಿದ್ದೀರಾ. ಅದರಲ್ಲಿ 2.3 ಬಿಲಿಯನ್ ಇಟ್ಟುಕೊಂಡು ಉಳಿದ ಹಣವನ್ನು ಕಂತುಗಳಲ್ಲಿ ಹಿಂದಿರುಗಿಸುವಂತೆ ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ. ಇಂಗ್ಲೆಂಡ್ ದೇಶ ಸದ್ಯ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಇಂತಹ ಸಂದರ್ಭದಲ್ಲಿ 45 ಟ್ರಿಲಿಯನ್ ಡಾಲರ್ ಕೊಡಲೇಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಪಾಕಿಸ್ತಾನ ಮೂಲದ ಕ್ರಿಕೆಟ್ ನಿರೂಪಕರು ಸಹ ಭಾರತದ ಬೆಂಬಲಕ್ಕೆ ನಿಂತಿದ್ದು, ಬ್ರಿಟನ್ ಪತ್ರಕರ್ತರು ಅಸೂಯೆ ಹಾಗೂ ಹೊಟ್ಟೆಕಿಚ್ಚಿನಿಂದ ಮಾತನಾಡುವುದು ಸರಿಯಲ್ಲ ಎನ್ನುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ಯಶಸ್ಸಿಗೆ ಅಸೂಯೆ; ಭಾರತಕ್ಕೆ ನೆರವು ನಿಲ್ಲಿಸಿ ಎಂದ ಬ್ರಿಟನ್ ಪತ್ರಕರ್ತನಿಗೆ ಸಖತ್ ಕ್ಲಾಸ್

https://newsfirstlive.com/wp-content/uploads/2023/08/UK-Kohinoor-Diamond-1.jpg

Load More